Tuesday, November 18, 2025
Google search engine

Homeರಾಜ್ಯಸುದ್ದಿಜಾಲಖಡಕಗಲ್ಲಿಯಲ್ಲಿ ಕಲ್ಲು ತೂರಾಟ ಪ್ರಕರಣ: 11 ಜನರ ತೀವ್ರ ವಿಚಾರಣೆ

ಖಡಕಗಲ್ಲಿಯಲ್ಲಿ ಕಲ್ಲು ತೂರಾಟ ಪ್ರಕರಣ: 11 ಜನರ ತೀವ್ರ ವಿಚಾರಣೆ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಡೇಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು 11 ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಅನುಮತಿ ಇಲ್ಲದೇ ಮಾರ್ಗದ ಬದಲಾವಣೆ, ಕಲ್ಲು ತೂರಾಟ ಆರೋಪದಡಿ ಖಡೇಬಜಾರ್ ಪೊಲೀಸರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರುಸ್ ಮೆರವಣಿಗೆ ಐ‌ ಲವ್ ಮೊಹಮ್ಮದ್ ಘೋಷಣೆ ಕೂಗಿದ್ದ ಮುಸ್ಲಿಂ ಸಮುದಾಯದ ಯುವಕರು ಖಡಕ್ ಗಲ್ಲಿಯಲ್ಲಿ ಮೆರವಣಿಗೆ ಬಂದಿದ್ದಕ್ಕೆ, ಘೋಷಣೆ‌ ಕೂಗಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದರು. ಸದ್ಯ ಪರಿಸ್ಥಿತಿ ಹತ್ತೋಟಿಗೆ ತೆಗೆದುಕೊಂಡ ಪೊಲೀಸರು. ರಾತ್ರಿಯಿಡೀ ಗಸ್ತು ಕಾಯ್ದಿರಿಸಿದ್ದರು.

ಇಂದು ಸಿಎಂ ಸಿದ್ದರಾಮಯ್ಯ ಹಿನ್ನೆಲೆ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular