ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತೀವ್ರ ಕೂತುಹಲ ಕೆರಳಿಸಿದ್ದ ಸಾಲಿಗ್ರಾಮ ತಾಲೂಕಿನ ಸಾಲೆಕೊಪ್ಪಲು ಹಾಲು ಉತ್ಪಾಕರ ಸಂಘದ ಅಧಿಕಾರದ ಚುಕ್ಕಾಣಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೇಸ್ ಬೆಂಬಲಿತರ ಪಾಲಾಗಿದ್ದು 2 ಸ್ಥಾನ ಪಡೆದ ಜೆಡಿಎಸ್ ಬೆಂಬಲಿತರು ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಬೆಳಿಗ್ಗೆ 9 ರಿಂದ 3 ಗಂಟೆ ತನಕ ನಡೆದ ಚುನಾವಣೆಯಲ್ಲಿ 389 ಮತಗಳಲ್ಲಿ 358 ಮತಗಳು ಚಲಾವಣೆಗೊಂಡು ನಂತರ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಅಶ್ವತ್ ಕುಮಾರ್ 172, ಎಸ್.ಎಂ.ಅಶೋಕ್170, ಆಶಾ 228, ಗೀತಾ 166, ಎಸ್.ಆರ್. ಕರಿಯಮೋಹನ್ 202 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಎಸ್.ಎ.ಬಾಲಕೃಷ್ಣ 129 , ಎಸ್.ಅರ್.ಮಂಜುನಾಥ್ 148 ಮತಗಳನ್ನು ಪಡೆದು ಸೋಲನ್ನಪ್ಪಿದರು.

ಜೆಡಿಎಸ್ ನಿಂದ ಎಸ್.ವಿ.ವೆಂಕಟೇಶ್ 195, ಎಸ್.ಸುನೀಲ್ 154 ಮತ ಗೆಲುವು ಸಾಧಿಸಿದರೇ ಎಸ್.ಎಸ್.ಕುಮಾರಸ್ವಾಮಿ 152, ಎಸ್.ಪಿ.ಮರೀಗೌಡ 129, ಎಸ್.ಟಿ.ಮಂಜುನಾಥ್ 145,ರೇಣುಕ 129, ಲಕ್ಷ್ಮಿ 70 ಮತಗಳನ್ನು ಪಡೆದು ಪರಾಭವಗೊಂಡರು. ಇನ್ನು ಎರಡು ಸ್ಥಾನಗಳಿಗೆ ಕಾಂಗ್ರೇಸ್ ಬೆಂಬಲಿತರಾದ ಕೆಸಿಪಿ ನವೀನ್, ಸುಂದರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೆ.ಅರ್.ನಗರ ಸಹಕಾರ ಇಲಾಖೆಯ ಸಿ.ಡಿ.ಓ.ಎಸ್.ರವಿ ಕಾರ್ಯ ನಿರ್ವಹಿಸಿದರು ಗೋವಿಂದ ಸ್ವಾಮಿ, ಕಿರಣ್ ಕುಮಾರ್, ಹರೀಶ್, ಸಂಘದ ಕಾರ್ಯದರ್ಶಿ ವೆಂಕಟೇಶ್ ಸಹಕಾರ ನೀಡಿದರು. ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ಎಸ್.ಎನ್.ನೂತನ್ ಗೌಡ, ಮಾಜಿ ಸದಸ್ಯ ಪ್ರಕಾಶ್ ಮುಖಂಡರಾದ ಎಸ್.ಪಿ.ಜಗದೀಶ್, ಎಸ್.ಜಿ.ಮಧು, ಅಂಗಡಿ ಕುಮಾರ್, ಭರತ್, ಕುಳ್ಳೇಗೌಡ, ಮನೋಹರ, ಪ್ರಜ್ವಲ್, ಶ್ರೀನಿವಾಸ್, ಕಿರಣ್, ಹರೀಶ್, ಶಿವಣ್ಣ, ಅಭಿಷೇಕ್,ರಾಜೇಗೌಡ, ಚೇತನ್, ಅವರು ನೂತನ ನಿರ್ದೇಶಕರನ್ನು ಅಭಿನಂಧಿಸಿ ವಿಜಿಯೋತ್ಸವ ಆಚರಿಸಿದರು.
ಮುನ್ನಚ್ಚರಿಕೆಯ ಕ್ರಮವಾಗಿ ಸಾಲಿಗ್ರಾಮ ಠಾಣೆಯ ಎ.ಎಸ್ಐ ಕುಮಾರ್, ಚುಂಚನಕಟ್ಟೆ ಉಪ ಪೊಲೀಸ್ ಉಪ ಠಾಣಾಧಿಕಾರಿದೊರೆಸ್ವಾಮಿ, ಸಾಲಿಗ್ರಾಮ ಠಾಣೆಯ ಮುಖ್ಯ ಪೇದೆ ಹರದನಹಳ್ಳಿ ಶಿವಪ್ಪ, ಸಿಬ್ಬಂದಿ ಜಾವಗಲ್ ದಯಾನಂದ್ ಬಿಗಿ ಭದ್ರತೆ ಏರ್ಪಡಿಸಿದರು.