Sunday, April 20, 2025
Google search engine

Homeಸ್ಥಳೀಯಗ್ರಾಮಗಳ ಅಭಿವೃದ್ದಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಶ್ರಮಿಸಿ: ಬಿ.ಕೆ. ರವಿಕುಮಾರ್

ಗ್ರಾಮಗಳ ಅಭಿವೃದ್ದಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಶ್ರಮಿಸಿ: ಬಿ.ಕೆ. ರವಿಕುಮಾರ್


ಚಾಮರಾಜನಗರ : ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷರು ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಕಿವಿಮಾತು ಹೇಳಿದರು.
ತಾಲೂಕಿನ ಬಿಸಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ರಮ್ಯ ಹಾಗೂ ಉಪಾಧ್ಯಕ್ಷರಾಗಿ ಬೇಬಿ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷಗಾದಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಸ್ವಚ್ಚತೆಗೆ ಅದ್ಯತೆ ನೀಡಿ, ದೂರುಗಳ ಬರದಂತೆ ಕಾರ್ಯನಿರ್ವಹಿಸಿ, ಪಂಚಾಯಿತಿ ವ್ಯಾಪ್ತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮಾದರಿ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡಲು ನಿಮ್ಮೆಲ್ಲರ ಶ್ರಮ ಹೆಚ್ಚಿನದ್ದಾಗಿದೆ. ಆದರೆ, ರೀತಿ ಸದಸ್ಯರು ಸಹ ಮುಂದಿನ ದಿನಗಳಲ್ಲಿ ಇದೇ ರೀತಿ ಬೆಂಬಲವನ್ನು ನೀಡಿ, ತಮ್ಮ ವಾರ್ಡುಗಳ ಅಭಿವೃದ್ದಿಗೆ ಅದ್ಯತೆ ನೀಡಿ ಎಂದರು.
ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರವಿದೆ. ಕ್ಷೇತ್ರದ ಶಾಸಕರಾಗಿ ಸಿ. ಪುಟ್ಟರಂಗಶೆಟ್ಟರು ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಾಸೆಯು ಗ್ರಾಮಗಳ ಅಭಿವೃದ್ದಿ ಮತ್ತು ಮಹಿಳೆಯರ ಸಬಲೀಕರಣವಾಗಿದೆ. ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಹಾಗು ಸ್ಥಳೀಯ ಶಾಸಕರಾದ ಪುಟ್ಟರಂಗಶೆಟ್ಟರ ನೆರವಿನಿಂದ ಹೆಚ್ಚಿನ ಅನುದಾನವನ್ನು ಪಂಚಾಯಿತಿಗೆ ತರುವ ನಿಟ್ಟಿನಲ್ಲಿ ತಾವೆಲ್ಲರು ಕಾರ್ಯನ್ಮುಖರಗಬೇಕು ಎಂದರು.
ಬಿಸಲವಾಡಿ ಗ್ರಾ.ಪಂ ಮತ್ತೇ ಕೈ ವಶ : ತಾಲೂಕಿನ ಬಿಸಲವಾಡಿ ಗ್ರಾ.ಪಂ. ಮತ್ತೇ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮ್ಯ, ಉಪಾಧ್ಯಕ್ಷರಾಗಿ ಬೇಬಿ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದ ಗ್ರಾ.ಪಂ. ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಜಿ. ರಮ್ಯ ಹಾಗೂ ಬೇಬಿ ಇವರಿಬ್ಬರೆ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ನಿರಂಜನ್ ಅವರು ಅಧಿಕೃತವಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನ ಆಯ್ಕೆಯನ್ನು ಘೋ?ಣೆ ಮಾಡಿದರು.
ಬಳಿಕ ಮಾತನಾಡಿದ ಜಿ. ರಮ್ಯ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ನನ್ನನ್ನು ಬೆಂಬಲಿಸಿ ಅಧ್ಯಕ್ಷರಾಗಿ ಮಾಡಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟರ ಮಾರ್ಗದರ್ಶನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸರ್ವಸದಸ್ಯರ ಬೆಂಬಲಯೊಂದಿಗೆ ಬಿಸಲವಾಡಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಭಿವೃದ್ದಿಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ.ಮಹದೇವಪ್ಪ, ಗೀತಾ ಎನ್. ಚನ್ನಬಸಪ್ಪ, ನಾಗರತ್ನಮ್ಮ, ಬಿ. ಜ್ಯೋತಿ, ಅಕ್ಕಮಹದೇವಮ್ಮ, ಶೋಭಾ, ಮುಖಂಡರಾದ ಬಿಸಲವಾಡಿ ರವಿ, ಕೋಡಿಉಗನೆ ಪುರುಷೋತ್ತಮ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಹದೇವಯ್ಯ, ಸಿದ್ದನಾಯಕ, ರಘು, ಕಾಂತರಾಜು, ಶ್ರೀಕಾಂತ್, ನಂಜೇಂದ್ರ, ಮಂಜುನಾಥ್, ಶಿವಕುಮಾರ್, ಶಿವಸ್ವಾಮಿ, ಗುರುಮಲ್ಲು, ಗುರುಶಾಂತಪ್ಪ, ಸಿದ್ದರಾಜು ಉಡಿಗಾಲ ನಂಜಪ್ಪ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular