Tuesday, October 7, 2025
Google search engine

Homeಸ್ಥಳೀಯತಾಲ್ಲೂಕುಗಳಲ್ಲಿ ಉಪ್ಪಾರ ಸಮುದಾಯ ಸಂಘಟನೆಗೆ ಆದ್ಯತೆ

ತಾಲ್ಲೂಕುಗಳಲ್ಲಿ ಉಪ್ಪಾರ ಸಮುದಾಯ ಸಂಘಟನೆಗೆ ಆದ್ಯತೆ

  • ಕರಳಾಪುರ ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಜಿಲ್ಲಾ ಉಪ್ಪಾರ ಸಂಘದ ಸಭೆ


ಮೈಸೂರು : ಮೈಸೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉಪ್ಪಾರ ಸಮುದಾಯದ ಸಂಘಟನೆಯನ್ನು ಬಲಪಡಿಸಿ, ಹಿರಿಯರ ಸಲಹೆಯಂತೆ ಯುವ ಘಟಕ ಮತ್ತು ಮಹಿಳಾ ಘಟಕಗಳನ್ನು ರಚನೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಪ್ಪಾರ ಸಮುದಾಯದ ಅಧ್ಯಕ್ಷರಾದ ಕರಳಾಪುರ ನಾಗರಾಜು ಭರವಸೆ ನೀಡಿದರು.

ನಗರದ ರಾಮನುಜ ರಸ್ತೆಯಲ್ಲಿರುವ ಉಪ್ಪಾರ ಸಂಘದ ಕಚೇರಿಯಲ್ಲಿ ನಡೆದ ಸಂಘದ ಸಭೆ ಮತ್ತು ಇತ್ತೀಚೆಗೆ ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಲ್ಲಶೆಟ್ಟಿ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೈಸೂರು ಜಿಲ್ಲಾ ಉಪ್ಪಾರ ಸಂಘವು ನೋಂದಣಿಯಾಗಿ ಒಂದು ವರ್ಷ ಆಗಿದೆ, ಇದು ಮೂರನೇ ಸಭೆಯಾಗಿದೆ. ಸಮಾಜದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಮತ್ತು ಗ್ರಾಮಾಂತರ ಮಟ್ಟದಲ್ಲಿ ಸಮುದಾಯದ ಸಂಘಟನೆಯನ್ನು ಬಲಪಡಿಸಲಾಗುವುದು ಮತ್ತು ಮೈಸೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಸಂಘಟನೆ ಮಾಡಿ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು.

ಸಮುದಾಯದ ಹಿರಿಯ ಮುಖಂಡರು ಮತ್ತು ರಾಜ್ಯಮಟ್ಟದ ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಶಿವಕುಮಾರಸ್ವಾಮಿ ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ಸಂಘದ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು, ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು, ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನಗಳು, ಇತರೆ ಸೌಲಭ್ಯಗಳನ್ನು ಕೊಡಿಸುವುದು, ಕಾಲಕಾಲಕ್ಕೆ ಶೈಕ್ಷಣಿಕ ಮಾಹಿತಿಗಳನ್ನು ಒದಗಿಸುವ ಶೈಕ್ಷಣಿಕ ಶಿಬಿರಗಳನ್ನು ಏರ್ಪಡಿಸುವುದು, ಸಮುದಾಯದ ಹಿರಿಯರಿಗೆ ಸರ್ಕಾರದಿಂದ ದೊರಕುವ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವುದು, ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಸಮುದಾಯದ ಜನರು ಅನೇಕ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಅವರಿಗೆ ಅಗತ್ಯ ಸಲಹೆ ಸಹಕಾರ ನೀಡುವುದನ್ನು ಮಾಡುವ ಮೂಲಕ ಸಂಘವು ಚಟುವಟಿಕೆಯಿಂದ ಕೂಡಿರಬೇಕು. ಈ ಹಿಂದೆಯೂ ಎರಡು ಸಂಘಗಳನ್ನು ರಚಿಸಲಾಗಿತ್ತು, ಆದರೇ ಆ ಸಂಘಗಳಿಂದ ಸಮುದಾಯಕ್ಕೆ ಯಾವುದೇ ಲಾಭವಾಗಲಿಲ್ಲ, ಕರಳಾಪುರ ನಾಗರಾಜು ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ನಂತರ ಕನಿಷ್ಠ ಪಕ್ಷ ಒಂದು ಕಚೇರಿ ಮಾಡಿ ಬೋರ್ಡ್ ಹಾಕಿದ್ದಾರೆ. ಅವರಿಗೆ ಅಗತ್ಯ ಸಹಕಾರ ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸರ್ಕಾರಿ ಸೇವೆಯಿಂದ ನಿವೃತ್ತದಾದ ಮಲ್ಲಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನಕನಗರ ಮಹದೇವು, ನಿವೃತ್ತ ಪ್ರಾಂಶುಪಾಲರಾದ ಸೋಮಶೇಖರ್, ಗೌರವ ಸಲಹೆಗಾರರಾದ ಮಹದೇವಶೆಟ್ಟಿ, ನಿವೃತ್ತ ಅರಣ್ಯ ಅಧಿಕಾರಿ ಮಲ್ಲಶೆಟ್ಟಿ, ಆಡಿಟರ್ ಪ್ರಕಾಶ್, ರಾಜು ಕುಂಬಾರಕೊಪ್ಪಲು, ಜೆಪಿ ನಗರ ವಿನೋದ್, ಹದಿನಾರು ಮೊಳೆ ಸಿದ್ದಪ್ಪ, ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್, ಮಲ್ಲೇಶ್ ತಮಡಿ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ತಾಲ್ಲೂಕು ಕಾರ್ಯದರ್ಶಿ ನಾಗರಾಜು, ಕರಳಾಪುರ ಮಹೇಶ್, ನಾಗರಾಜು ರಥ ಇನ್ನಿತರರು ಇದ್ದರು.

ಈ ಹಿಂದೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ಸರ್ಕಾರ ಒಂದು ಕೋಟಿ ರೂ ಮಂಜೂರು ಮಾಡಿತ್ತು, ಆದರೇ, ಸಮುದಾಯದ ಮುಖಂಡರ ನಿರ್ಲಕ್ಷ್ಯದಿಂದ ಈ ಹಣ ಬಳಕೆಯಾಗದೆ ಮತ್ತೆ ಸರ್ಕಾರಕ್ಕೆ ವಾಪಸ್ ಹೋಗಿದೆ, ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು.
-ಕರಳಾಪುರ ನಾಗರಾಜು, ಅಧ್ಯಕ್ಷರು.

RELATED ARTICLES
- Advertisment -
Google search engine

Most Popular