ಬೆಂಗಳೂರು : ನವೆಂಬರ್ ನಲ್ಲಿ ಕ್ರಾಂತಿ ಅಗಲಿದೆ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಹಲವು ಸಚಿವರು ಸಂಪುಟ ಪುನರ್ ರಚನೆ ಆಗಲಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆ ಆಗಲಿದ್ದು ಎಸ್ ಟಿ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಸ್ ಟಿ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆ ಆಗುತ್ತದೆ. ಸಂಪುಟ ಪುನರ್ ರಚನೆಯ ವೇಳೆ ಸಚಿವ ಸ್ಥಾನ ನೀಡುವ ಕುರಿತು ನೋಡೋಣ ಎಂದು ತಿಳಿಸಿದರು. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಎಂದು ಕೊನೆಯ ದಿನವಾಗಿದ್ದು, ಸಮೀಕ್ಷೆಗೆ ಕೊನೆಯ ದಿನದಲ್ಲಿ ಮೀಟಿಂಗ್ ಕರೆದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇನ್ನು ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ಹಿರಿಯವಕೀಲ ಶೂ ಎಸೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಸನಾತನವಾದಿಗಳು ಮತ್ತು ಮನುವಾದಿಗಳ ಕೆಲಸವಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದರಿಂದ ಸಿಜೆ ಗವಾಯಿ ಅವರು ವಿಚಲಿತ ಆಗಲಿಲ್ಲ. ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ. ಗವಾಯಿ ಶೂ ಎಸೆದ ವಕೀಲನನ್ನು ಕ್ಷಮಿಸಿದ್ದಾರೆ ಇದು ಅವರ ದೊಡ್ಡ ಗುಣ ಎಂದು ತಿಳಿಸಿದರು.