ರಾಜ್ಯಧರ್ಮ ಹೈಲೈಟ್ಸ್
ಬೆಳಗಾವಿ: ಅಕ್ಟೋಬರ್ 19ರಂದು ನಡೆಯಲಿರುವ ಚುನಾವಣೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ . ಮಾಡಿದ ಮಾಜಿ ಸಂಸದ ರಮೇಶ್ ಕತ್ತಿ. ಅಣ್ಣನ ಮಗ ಶಾಸಕ ನಿಖಿಲ್ ಕತ್ತಿ, ಪುತ್ರ ಪೃಥ್ವಿ ಕತ್ತಿ ಜೊತೆಗೆ ಆಗಮಿಸಿ ನಾಮಪತ್ರ ಸಲ್ಲಿಕೆ.



ಡಿಸಿಸಿ ಬ್ಯಾಂಕ್ ನಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಕೆ. ಜಾರಕಿಹೊಳಿ ಬ್ರದರ್ಸ್ ವರ್ಸಸ್ ಕತ್ತಿ ಕುಟುಂಬದ ಮಧ್ಯೆ ಮತ್ತೊಂದು ಸುತ್ತಿನ ಫೈಟ್. ರಮೇಶ್ ಕತ್ತಿ ಸೋಲಿಸಲು ಈಗಾಗಲೇ ತಂತ್ರಗಾರಿಕೆ ಹೆಣೆದಿರುವ ಜಾರಕಿಹೊಳಿ ಬ್ರದರ್ಸ್. ನಾಮಪತ್ರ ಸಲ್ಲಿಕೆ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮ್ಮಿಕ್ಕಿದ ರಮೇಶ್ ಕತ್ತಿ. ಅಕ್ಟೋಬರ್ 11ರ ವರೆಗೂ ನಾಮ ಪತ್ರ ಸಲ್ಲಿಕೆಗೆ ಅವಕಾಶ.