Wednesday, October 8, 2025
Google search engine

Homeರಾಜ್ಯಸುದ್ದಿಜಾಲಸಾಲೇಕೊಪ್ಪಲು ಹಾಲು ಉತ್ಪಾದಕರ ಸಂಘದ ಹೊಸ ಕಟ್ಟಡಕ್ಕೆ ₹6 ಲಕ್ಷ ಅನುದಾನ : ದೊಡ್ಡ ಸ್ವಾಮೇಗೌಡ...

ಸಾಲೇಕೊಪ್ಪಲು ಹಾಲು ಉತ್ಪಾದಕರ ಸಂಘದ ಹೊಸ ಕಟ್ಟಡಕ್ಕೆ ₹6 ಲಕ್ಷ ಅನುದಾನ : ದೊಡ್ಡ ಸ್ವಾಮೇಗೌಡ ಭರವಸೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲೇಕೊಪ್ಪಲು ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಶಾಸಕ ಡಿ.ರವಿಶಂಕರ್ ಅವರ ಶಾಸಕರ ನಿಧಿಯಿಂದ 6 ಲಕ್ಷ ಅನುಧಾನ ಕೊಡಿಸುವುದಾಗಿ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ದೊಡ್ಡ ಸ್ವಾಮೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಸಾಲೇಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಾಂಗ್ರೇಸ್ ಬೆಂಬಲಿತ ನಿರ್ದೇಶಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು ಶಾಸಕರ ಜತಗೆ ವಿಧಾನ ಪರಿಷತ್ ಸದಸ್ಯರಿಂದ ಕಟ್ಟಡ ನಿರ್ಮಾಣಕ್ಕೆ ಅನುಧಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಸಂಘದಲ್ಲಿ ಯಾವುದೇ ರಾಜಕೀಯ ಬೆರಸದೇ ಸಂಘದ ಏಳಿಗೆಗಾಗಿ ದುಡಿಯಬೇಕೆಂದು ನಿರ್ದೇಶಕರಿಗೆ ಕಿವಿ ಮಾತು ಹೇಳಿದ ಅವರು ಜಿಲ್ಲಾ ಸಂಘದಿಂದ ರೈತರಿಗೆ ಅದ್ಯತೆಯ ಮೇರೆಗೆ ಹೈನುಗಾರಿಕೆ ಸಾಲ ಕೊಡಿಸಲು ಜಿಲ್ಲಾ ಸಂಘದ ಅಡಳಿತ ಮಂಡಳಿ ರಚನೆ ಅದ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ಎಸ್.ಎನ್.ನೂತನ್ ಗೌಡ, ಮಾಜಿ ಸದಸ್ಯ ಪ್ರಕಾಶ್, ಮುಖಂಡರಾದ ಎಸ್.ಪಿ.ಜಗದೀಶ್, ಅಂಗಡಿ ಕುಮಾರ್, ಮಧು, ಅಭಿಷೇಕ್, ಕಸ್ತೂರಿ ಮಂಜುನಾಥ್, ಕುಳ್ಳೇಗೌಡ, ಸಂಘದ ನಿರ್ದೇಶರಾ ಕರಿಯ ಮೋಹನ್ ಕುಮಾರ್, ಅಶ್ವತಾ,ಆಶೋಕ್,ಸುಂದರ, ಗೀತಾಶಿವಣ್ಣ ಸೇರಿದಂತೆ ಮತ್ತಿತರು ಹಾಜರಿದ್ದರು

RELATED ARTICLES
- Advertisment -
Google search engine

Most Popular