Wednesday, October 8, 2025
Google search engine

Homeರಾಜ್ಯಸುದ್ದಿಜಾಲಡಾ.ಸಾ.ರಾ.ಧನುಷ್ ಅವರ ಸೇವಾಭಾವನೆ ವೈದ್ಯಕೀಯ ವೃತ್ತಿಗೆ ಮಾದರಿ: ಕೆ.ಎಲ್. ರಮೇಶ್ ಪ್ರಶಂಸೆ

ಡಾ.ಸಾ.ರಾ.ಧನುಷ್ ಅವರ ಸೇವಾಭಾವನೆ ವೈದ್ಯಕೀಯ ವೃತ್ತಿಗೆ ಮಾದರಿ: ಕೆ.ಎಲ್. ರಮೇಶ್ ಪ್ರಶಂಸೆ

ಕೆ.ಆರ್.ನಗರ : ರೋಗಿಗಳು ವೈದ್ಯರನ್ನೇ ದೇವರು ಎನ್ನುತ್ತಾರೆ. ವೈದ್ಯನಾರಾಯಣೋ ಹರಿಃ ಎನ್ನುತ್ತಾರೆ. ಈ ವೃತ್ತಿಯಲ್ಲಿ ಹಣ ಮಾಡುವುದಕ್ಕಿಂತ ಸೇವೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬುದನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಪುತ್ರ ಯುವ ವೈದ್ಯ ಕೀಲು ಮತ್ತು ಮೂಳೆ ತಜ್ಞ ಡಾ.ಸಾ.ರಾ.ಧನುಷ್ ಅವರು ತಮ್ಮ ವೃತ್ತಿ ಜೀವನದಲ್ಲಿ ನಾಡಿನ ಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಕೆ.ಅರ್.ನಗರ ಕ್ಷೇತ್ರದ ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಹೇಳಿದರು.

ಕೆ.ಅರ್.ನಗರ ತಾಲೂಕಿನ ಡೋರನಹಳ್ಳಿಯ ಸಂತ ಅಂತೋನಿ ಪುಣ್ಯ ಕ್ಷೇತ್ರದಲ್ಲಿರುವ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಅಯೋಜಿಸಲಾಗಿದ್ದ ಯುವ ವೈದ್ಯ ಡಾ.ಸಾ.ರಾ.ಧನುಷ್ ಅವರ 30 ವರ್ಷದ ಸರಳವಾಗಿ ನಡೆದ ಹುಟ್ಟು ಹಬ್ಬ ಆಚರಣೆಯಲ್ಲಿ ಮಾತನಾಡಿದರು.

ಯುವ ವೈದ್ಯ ಡಾ.ಸಾ.ರಾ.ಧನುಷ್ ಅವರ ವೈದ್ಯಕೀಯ ಸೇವೆ, ನೊಂದವರ, ಬಡವರ ಪರವಾಗಿ ಮಾಡುತ್ತಿದ್ದಾರೆ. ವೈದ್ಯಕೀಯ ಸೇವೆಯನ್ನು ಬದುಕಿನಲ್ಲಿ ಬದುಕಾಗಿಸಿ ಕೊಂಡಿದ್ದಾರೆ, ಯಾವುದೇ ಪ್ರತಿಫಲಾಪೇಕ್ಷ ಪಡೆಯದೇ ನಿತ್ಯ ಕ್ಷೇತ್ರದ ರೋಗಿಗಳ ಜೊತೆ ಸೌಜನ್ಯದಿಂದ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಬಾಲ್ಯದಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಜನಪರ ಸೇವೆಯನ್ನು ಕಣ್ಮುಂದೆ ನೋಡಿ ಬೆಳೆದಿರುವ ಡಾ.ಸಾ.ರಾ.ಧನುಷ್ ಅವರು ತಂದೆಯಂತೆ ಸಮಾಜ ಸೇವೆಯಲ್ಲಿ ಅಸಕ್ತಿ ಹೊಂದಿದ್ದಾರೆ, ಆದರೆ ಓದಿನಲ್ಲಿ ಬಹಳ ಮುಂದೆ ಇದ್ದು ರಾಜಕಾರಣದಲ್ಲಿ ಅಷ್ಟೇನೂ ಅಸಕ್ತಿ ಇಲ್ಲದಿದ್ದರೂ ಜನ ಸೇವೆ ಮಾಡುವ ಬಯಕೆ ಹೊಂದಿದ್ದಾರೆ ಎಂದು ತಿಳಿಸಿದರು.

ಯುವ ವೈದ್ಯ ಡಾ.ಸಾ.ರಾ.ಧನುಷ್ ವೈದ್ಯಕೀಯ ಕ್ಷೇತ್ರದಲ್ಲಿ ತೊಡಿಗಿಸಿ ಕೊಂಡು ಬಹಳಷ್ಟು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಸಹಾಯ ಹಸ್ತ ಚಾಚುತ್ತಿದ್ದಾರೆ ಎಂದರಲ್ಲದೆ ಕೃತಕ ಕಾಲು ಜೋಡಣೆಯಲ್ಲಿ‌ ನೈಪುಣ್ಯತೆ ಹೊಂದಿರುವ ಡಾ.ಧನುಷ್ ಐನೂರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗದ್ದಾರೆ ಎಂದು ಹೇಳಿದರು.

ಇದಕ್ಕೂ ಮೊದಲು ಡೋರ್ನಹಳ್ಳಿ ಸಂತ ಅಂಧೋಣಿ ಬಸಿಲಿಕಾ ಚರ್ಚ್ ನ ಫಾದರ್ ಡೆವಿಡ್ ಸಗಾಯ್ ರಾಜ್ ಅವರಿಂದ ಆರ್ಶೀವಾದ ಪಡೆದು ಕೊಂಡರು.

ಬಳಿಕ ನೆರದಿದ್ದ ನೂರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಸಾ.ರಾ.ಸ್ನೇಹ ಬಳಗದವರು, ಅಭಿಮಾನಿಗಳು ಡಾ.ಸಾ.ರಾ.ಧನುಷ್ ಅವರಿಗೆ ಶಾಲು, ಹಾರಹಾಕಿ ತಮ್ಮ ಅಭಿಮಾನದ ಅಭಿಮಾನ‌ ಮೆರೆದರು. ಬುದ್ಧಿಮಾಂದ್ಯ ಮಕ್ಕಳ ಜೊತೆ ಕೇಕ್ ಕತ್ತರಿಸಿ ದ ಬಳಿಕ ವೃದ್ದಾಶ್ರಮದಲ್ಲಿ ಸಪಂಕ್ತಿ ಭೋಜನವನ್ನು ಆಶ್ರಮದ ವೃದ್ದರ ಜೊತೆ ಸವಿದರು.

ಸಾಲಿಗ್ರಾಮ ತಾಲೂಕು ಜಾದಳ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪುರಸಭೆ ಸದಸ್ಯ ಕೆ.ಉಮೇಶ್, ಕೆ.ಎಲ್.ಜಗದೀಶ್, ತಾ.ಜಾದಳ ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಯುವ ಜೆಡಿಎಸ್ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾ.ಒಕ್ಕಲಿಗರ ಸಂಘದ ನಿರ್ಧೆಶಕ ಮಂಜುಗೌಡ, ‌ದೇವೇಂದ್ರ, ಕೇಶವ್, ಮುಖಂಡರಾದ ಹೊಸಹಳ್ಳಿ ಪುಟ್ಟರಾಜು, ಬಾಲಾಜಿಗಣೇಶ್, ಅನೀಫ್ ಗೌಡ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಣಾಯಿಣಿ, ತಾಲ್ಲೂಕು ಜಾದಳ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮೀ, ಕಾರ್ಯದರ್ಶಿ ಭಾಗ್ಯಮ್ಮ, ರೀಚಾ, ಪ್ರಭಾ, ವೀಣಾ, ರೀಟಾ ಮೇರಿ, ಗ್ರಾ.ಪಂ.ಸದಸ್ಯ ತಿಪ್ಪೂರು ಭಾಸ್ಕರ್, ಸತ್ಯನಾರಾಯಣ್, ಜಾದಳ ಮುಖಂಡರಾದ ಟ್ಯಾಂಕ್ ಮಹೇಶ್, ಎರೆಮನುಗನಹಳ್ಖಿ ಸುನೀಲ್, ಸಿ.ವಿ.ಗುಡಿ ಸಾಗರ್, ವಡ್ಡರಕೊಪ್ಪಲು ಶ್ರೀಧರ್, ನಾಗೇಶ್,ಲಾಲನಹಳ್ಳಿ ಮಹೇಶ್, ಬಸವಾಪಟ್ಟಣ ಯೋಗೇಶ್, ಮುಬಾರಕ್, ಹೊಸೂರು ಮದುಚಂದ್ರ, ರವೀಶ್, ಲಯನ್ಸ್ ನಂದೀಶ್, ಪಾಲಾಕ್ಷ, ಹೆಬ್ಬಾಳು ಶಿವಣ್ಣ, ಪ್ರಭಾಕರ್, ಹೆಬ್ಬಾಳು ಶಂಕರ್, ಚೌಕಳ್ಳಿ ಆನಂದ್,ತಂದ್ರೆ ಮಂಜು, ಚೀರನಹಳ್ಳಿ ಶ್ರೀನಿವಾಸ್, ಮುದುಗುಪ್ಪೆ ಮೋಹನ ಸೇರಿದಂತೆ ಅನೇಕರು ಇದ್ದರು.

ಯುವ ವೈದ್ಯ ಕೀಲು ಮತ್ತು ಮೂಳೆ ತಜ್ಞ ಡಾ.ಸಾ.ರಾ.ಧನುಷ್ ಅವರನ್ನು ಸಾ.ರಾ.ಸ್ನೇಹ ಬಳಗದಿಂದ ಬಾರಿ ಗಾತ್ರದ ಹಾರಹಾಕಿ ಅಭಿನಂದಿಸಲಾಯಿತು.
RELATED ARTICLES
- Advertisment -
Google search engine

Most Popular