ವರದಿ ಎಡತೊರೆ ಮಹೇಶ್
ಎಚ್.ಡಿ.ಕೋಟೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಾಲ್ಮೀಕಿ ಅವರ ಕೊಡುಗೆ ಇದೆ, ರಾಜ್ಯದಲ್ಲಿ ತನ್ನದೇ ಆದ ಇತಿಹಾಸವನ್ನು ನಾಯಕ ಸಮುದಾಯ ಹೊಂದಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹನುಮಂತನಗರ ದಿದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ತಳಿಗೆ ಮಲಾರ್ಪಣೆ ಮಾಡಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮುಖಾಂತರ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡಿ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮನನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ
ರಾಮಾಯಣ ಬರೆದ ವಾಲ್ಮೀಕಿ, ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರ ಬೇಡರ ಕಣ್ಣಪ್ಪ, ಏಕಲವ್ಯ, ವೀರ ಮದಕರಿನಾಯಕ, ದಾನಕ್ಕೆ ಹೆಸರಾದ ನಾಯಕ ಸಮಾಜ ಹೋರಾಟ ಮಾಡಿ ತಮ್ಮ ಹಕ್ಕುಗಳನ್ನು ಪಡೆಯಬೇಕು. ಹೋರಾಟದ ಮೂಲಕ ಮೀಸಲಾತಿ ಹೆಚ್ಚಳವಾಗಿದೆ.
ಎಂದರು,
ನಂತರ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಮಹರ್ಷಿ ವಾಲ್ಮೀಕಿಯ ರಾಮಾಯಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಈ ದೇಶದ ಅತ್ಯುತ್ತಮವಾದ ಗ್ರಂಥಗಳು. ರಾಜಕೀಯ ಬೇರೆ ಸಮಾಜ ಎಂದು ಬಂದಾಗ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು ಆ ಮುಖೇನ ಸಮಾಜವನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸಮಾಜದ ಬಂಧುಗಳು ಮಾಡಬೇಕು ಎಂದರು,

ಮುಖ್ಯ ಭಾಷಣಕಾರ ಪ್ರೊ.ಮಾರುತಿ ಟಿ.ಆರ್ ಮಾತನಾಡಿ, ಸಮಾಜದಲ್ಲಿ ಋಷಿ ಪರಂಪರೆ, ಜಗದ್ಗುರು, ಜನ ಪರಂಪರೆ ಇದೆ. ತೇತ್ರಾಯುಗದಲ್ಲಿ ರಾಮಾಯಣ ಬರೆದು ತತ್ವಜ್ಞಾನಿ, ಮಾನವತಾವಾದಿಯಾಗಿ ದೇಶದ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಎಂದರು.
ನಂತರ ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ, ಹಿಂದು ಧರ್ಮಕ್ಕೆ ರಾಮಾಯಣ ನೀಡಿದ ಶ್ರೀ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ. ರಾಮನ ಭೋದನೆಗಳು, ಸತ್ಯ, ಕರ್ತವ್ಯ ಆದ್ಯಾತ್ಮಿಕ ಜ್ಞಾನದಿಂದ ಅಂದಿನ ಕಾಲದಲ್ಲಿಯೇ ಪುಷ್ಪಕ ವಿಮಾನ ಪರಿಕಲ್ಪನೆ ನೀಡಿ ತಂತ್ರಜ್ಞಾನದ ಮಹತ್ವವನ್ನು ತಿಳಿಸಿದ್ದಾರೆ ಎಂದರು,
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀನಿವಾಸ್, ಸರಗೂರು ತಹಶೀಲ್ದಾರ್ ಮೋಹನ್ ಕುಮಾರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್, ಸಮಾಜದ ಅಧ್ಯಕ್ಷರು ಮುಖಂಡರು ಅಧಿಕಾರಿ ವರ್ಗದವರು ಇದ್ದರು,
