ಮೈಸೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ವಕೀಲರೊಬ್ಬರು ಅಸಹ್ಯಕರ ರೀತಿಯಲ್ಲಿ ಅಮಾನೀಯವಾಗಿ ಶೂ ಎಸೆದಿರುವುದು ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ರಾಷ್ಟ್ರೀಯ ಅವಮಾನ, ಸಂವಿಧಾನದ ಮೇಲೆ ನಡೆದ ನೇರ ದಾಳಿ. ಈ ಘಟನೆಯನ್ನು ಇಡೀ ದೇಶ ಖಂಡಿಸಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಲಯ ಸಂವಿಧಾನದ ಸಂರಕ್ಷಕ, ಸಂವಿಧಾನದ ಸಂರಕ್ಷಕ ಎಂದರೆ ದೇಶದ ರಕ್ಷಕ, ಅದರ ಮೇಲೆ ಸವಾರಿ ಮಾಡುವುದು ಸಂವಿಧಾನ, ರಾಷ್ಟ್ರೀಯವಾದದ ಮೇಲೆ ಅಪಮಾನ. ಹಾಗಾಗಿ ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.