Wednesday, October 8, 2025
Google search engine

Homeಅಪರಾಧಗಿಲ್ಕಿ ವೆಂಕಟೇಶ್ ಹತ್ಯೆ ಹಿಂದೆ ಸೇಡಿನ ಕಹಾನಿ : ಐವರು ಆರೋಪಿಗಳು ಬಂಧನ

ಗಿಲ್ಕಿ ವೆಂಕಟೇಶ್ ಹತ್ಯೆ ಹಿಂದೆ ಸೇಡಿನ ಕಹಾನಿ : ಐವರು ಆರೋಪಿಗಳು ಬಂಧನ

ಮೈಸೂರು : ಮೈಸೂರಲ್ಲಿ ಗಿಲ್ಕಿ ವೆಂಕಿ ಕೊಲೆ ಕೇಸ್ ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮರ್ಡರ್ ಗೆ ಸ್ಕೆಚ್ ಹಾಕಿದ ವೆಂಕಿ ಬೀದಿ ಹೆಣವಾದ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಭೀಕರ ಹತ್ಯೆಯ ಹಿಂದೆ ಸೇಡಿನ ಕಹಾನಿ ಇದೆ ಎಂಬುದು ಗೊತ್ತಾಗಿದೆ. ಅಸಲಿಗೆ ಕೊಲೆಗೆ ಸ್ಕೆಚ್ ಹಾಕಿದ್ದು ಮೃತ ಗಿಲ್ಕಿ ವೆಂಕಟೇಶ್ ಅಂತ ಗೊತ್ತಾಗಿದ್ದು,ಕೊಲೆಗೆ ಸ್ಕೆಚ್ ಹಾಕಿ ಗಿಲ್ಕಿ ವೆಂಕಟೇಶ್ ತಾನೇ ಹತ್ಯೆಯಾಗಿದ್ದಾನೆ. ಈತ ರೌಡಿಶೀಟರ್ ಮಲ್ಲಿಕಾರ್ಜುನ್ ಆಲಿಯಾಸ್ ಹಾಲಪ್ಪನಿಗೆ ಮುಹೂರ್ತ ಇಟ್ಟಿದ್ದನು ಎಂದು ಗೊತ್ತಾಗಿದೆ.

ಗಿಲ್ಕಿ ವೆಂಕಟೇಶ್ ಹಾಗೂ ಶಿಷ್ಯಂದಿರು ವಾರದ ಹಿಂದಷ್ಟೇ ಹಾಲಪ್ಪನ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಅಂತಾ ಜಗಳವಾಡಿದ್ದರು. ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ಹಾಕಿದ್ದ ಸ್ಕೆಚ್ ಗೆ ಹಾಲಪ್ಪ ಬೆಚ್ಚಿಬಿದ್ದಿದ್ದರು.ಹೀಗಾಗಿ ಹಾಲಪ್ಪ ಅಂಡ್ ಟೀಂ ನಿಂದ ಸ್ಕೇಚ್ ಹಾಕಲಾಗಿತ್ತು. ಮಂಗಳವಾರ ಹಾಡಹಗಲೇ ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಐದು ತಿಂಗಳ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಸಾವಿಗೂ ಮೊದಲೇ ಅನೇಕರ ಜತೆ ಗಿಲಿ ಗಿಲಿ ವೆಂಕಟೇಶ್ ಮನಸ್ತಾಪ ಹೊಂದಿದ್ದರು. ಗಿಲಿ ಗಿಲಿ ವೆಂಕಟೇಶ್ ಮೃತ ಕಾರ್ತಿಕ್ ನ ಮಾಜಿ ಗುರು ಎಂದು ಗೊತ್ತಾಗಿದ್ದು,ಕಾರ್ತಿಕ್ ಹತ್ಯೆಯಾದ ಬಳಿಕ ಪಾರುಪತ್ಯ ಸಾಧಿಸಲು ವೆಂಕಟೇಶ್ ಪ್ಲಾನ್ ಮಾಡಿಕೊಂಡಿದ್ದನು. ಬಳಿಕ ಕಾರ್ತಿಕ್ ಗ್ಯಾಂಗ್, ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ನಡುವೆ ಗಲಾಟೆ ಆಗಿತ್ತು.ಕೊಲೆಗೆ ಮೃತ ರೌಡಿಶೀಟರ್ ಕಾರ್ತಿಕ್ ಗ್ಯಾಂಗ್ ನ ಮಲ್ಲಿಕಾರ್ಜುನ್ ಆಲಿಯಾಸ್ ಹಾಲಪ್ಪ, ಬಿಗ್ ಮನೋಜ್ ಆಲಿಯಾಸ್ ಬಿಗ್ ಶೋ ಪ್ಲಾನ್ ಮಾಡಿ ಹೊಡೆದು ಹಾಕಿದ್ದಾರೆ.ಕೊಲೆಯಾದ ಬಳಿಕ ಹಾಲಪ್ಪ ಅಂಡ್ ಬಿಗ್ ಶೋ ಎಸ್ಕೇಪ್ ಆಗಿದ್ದರು. ಮಂಗಳವಾರ ತಡರಾತ್ರಿ ಪೊಲೀಸರ ಮುಂದೆ 5 ಮಂದಿ ಹಂತಕರು ಶರಣಾಗಿದ್ದಾರೆ.ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular