ಕರ್ನಾಟಕ ಕಾಂಗ್ರೇಸ್ ಸರ್ಕಾರವು ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ನೀಡುತ್ತಿರುವುದನ್ನ ಶ್ಲಾಘಿಸೋಣ ಮತ್ತು ಅದೇ ಸಮಯದಲ್ಲಿ ನಾನು ರಾಜ್ಯ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾರಿಗೆ ಇಲಾಖೆಗೆ ವಿನಂತಿಸಿಕೊಳ್ಳುವುದೇನೆಂದರೆ ದಯವಿಟ್ಟು ಎಲ್ಲಾ ಸರ್ಕಾರಿ ಬಸ್ ಗಳ ಸ್ಥಿತಿಗಳನ್ನ ಅರಿಯಬೇಕು.
ಉಚಿತ ಬಸ್ ಪ್ರಯಾಣವೆಂದು ಹೆಚ್ಚಾಗಿ ಎಲ್ಲಾ ಬಸ್ ನಲ್ಲೂ ಜನ ತುಂಬಿರುತ್ತಾರೆ. ಬಹಳಷ್ಟು ಬಸ್ ಗಳು ಹೆಚ್ಚು ಹೆಚ್ಚು ಕಪ್ಪು ಹೊಗೆ ಹೊರಹಾಕುತ್ತಿವೆ. ಬಹಳಷ್ಟು ಕಡೆ ಬಸ್ ದಾರಿ ಮದ್ಯೆ ಹಾಳಾಗಿ ನಿಂತಿರುತ್ತದೆ ಮೊನ್ನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ ಓಡುತ್ತಿರುವಾಗ ಬಸ್ ನ ಸ್ಟೇರಿಂಗ ತುಂಡಾಗಿರುವುದನ್ನ ಕೇಳಿದ್ದೇವೆ. ಚಾಮುಂಡಿ ಬೆಟ್ಟದಿಂದ ಬರುವಾಗ ಬಸ್ ಹಾಳಾಗಿರುವುದನ್ನೂ ಕೇಳಿದ್ದೇವೆ.
ದಯವಿಟ್ಟು ಸಾರಿಗೆ ಇಲಾಖೆಯವರು ಪ್ರತಿಯೊಂದು ಬಸ್ ಸಂಚಾರಕ್ಕೆ ಸರಿಯಾಗಿ ಇದೆಯೋ ಎಂದು ಖಾತ್ರಿಮಾಡಬೇಕು
ಮಾಲಿನ್ಯ ನಿಯಂತ್ರಣ ಇಲಾಖೆಯವರು ಪ್ರತಿಯೊಂದು ಬಸ್ ನ ಹೊಗೆ ತಪಾಸಣೆ ಮಾಡಿ ಕಪ್ಪು ದಟ್ಟ ಹೊಗೆ ಹೊರಬರುವುದನ್ನ ಏಕೆಂದು ಪ್ರಶ್ನಿಸಿ ಅಂತಹ ಬಸ್ ಓಡಾಡದಂತೆ ಕ್ರಮ ವಹಿಸಿಕೊಳ್ಳಬೇಕು. ಇದರಿಂದ ಜನರ ಸಾವು ನೋವು ಕೂಡ ಸಂಭವಿಸುವುದರ ಜೊತೆ ವಾಯು ಮಾಲಿನ್ಯ ಉಂಟಾಗುತ್ತದೆ.
RTO ದವರು ಕೂಡ ಪ್ರತಿಯೊಂದು ಬಸ್ ನ Fitness Certificate ಪರೀಕ್ಷಿಸಬೇಕು. ಬಸ್ ನ ಪರಿಸ್ಥಿತಿ ಬಿಗಡಾಯಿಸಿ ಹಾಗೆಯೇ ಓಡಿಸಿದರೆ ಸಾರ್ವಜನಿಕರ ದೀವಕ್ಕೂ ಕುತ್ತು ಬರಬಹುದೆಂದು ತಿಳಿಸುತ್ತಾ ಸಂಭಂದಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಲಿ ಎಂದು ಆಶಿಸುತ್ತೇನೆ
ಕೆ ಮಹೇಶ ಕಾಮತ್
ಪರಿಸರ ಪೌಂಡೇಶನ್