Wednesday, October 8, 2025
Google search engine

Homeರಾಜ್ಯಸುದ್ದಿಜಾಲ60% ರಷ್ಟು ಕನ್ನಡ ಕಡ್ಡಾಯ ಜಾರಿಗೆ ತರಬೇಕಾಗಿದೆ: ಶ್ರೀನಿವಾಸ ತಾಳೂಕರ ಮನವಿ

60% ರಷ್ಟು ಕನ್ನಡ ಕಡ್ಡಾಯ ಜಾರಿಗೆ ತರಬೇಕಾಗಿದೆ: ಶ್ರೀನಿವಾಸ ತಾಳೂಕರ ಮನವಿ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ : ಕರ್ನಾಟಕ ಸರಕಾರದ ಅಧಿಸೂಚನೆಯಂತೆ ಬೆಳಗಾವಿ ಮಹಾನಗರ ಪಾಲಿಕೆಯು ಬರುವ ನವೆಂಬರ 1ರ ವಳಗಾಗಿ ತಾನು ಅಳವಡಿಸಿರುವ ಎಲ್ಲ ಫಲಕಗಳಲ್ಲಿ 60% ರಷ್ಟು ಕನ್ನಡ ಅನುಷ್ಠಾನಗೊಳಿಸಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸರ್ವೋದಯ ಸೇವಾ ಸಂಘಟನೆಯವರಾದ ಶ್ರೀನಿವಾಸ ತಾಳೂಕರ ಮತ್ತಿತರರು ಮನವಿ ಮಾಡಿದರು .

ರಾಜ್ಯ ಸರಕಾರ ಕಳೆದ ವರ್ಷ ನವೆಂಬರ 1 ರಂದು 60% ರಷ್ಟು ಕಡ್ಡಾಯವಾಗಿ ಫಲಕಗಳಲ್ಲಿ ಕನ್ನಡ ಬರೆಯಿಸಬೇಕು ಹಾಗೂ ಕನ್ನಡಕ್ಕೆ ಅಗ್ರಸ್ಥಾನ ನೀಡಿ ಆದೇಶ ಜಾರಿಗೆ ತರಬೇಕೆಂದು ಎಲ್ಲ ಇಲಾಖೆಗಳಿಗೆ ಅದಿಸೂಚನೆ ಹೊರಡಿಸಿತ್ತು. ಅದರಂತೆ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪಾರಸ್ತರಿಗೆ ನೋಟಿಸ್ ನೀಡಿ ಫಲಕಗಳಲ್ಲಿ 60% ರಷ್ಟು ಕನ್ನಡ ಬಳಸುವಂತೆ ಆದೇಶ ಮಾಡಿತ್ತು. ಅದರಂತೆ ವ್ಯಾಪಾರಸ್ತರು ಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಿ ಗೌರವಿಸಿ ಕನ್ನಡ ಬರೆಯಿಸಿರುವದು ಸ್ವಾಗತಾರ್ಹ ಸಂಗತಿಯಾಗಿದೆ.

ಆದರೆ ಬೆಳಗಾವಿ ಮಹಾನಗರ ಪಾಲಿಕೆಯು ನಗರದ ರಸ್ತೆಗಳಿಗೆ, ಉಧ್ಯಾನಗಳಿಗೆ, ವೃತ್ತಗಳಿಗೆ, ಖುಲ್ಲಾ ಜಾಗೆಗಳಿಗೆ, ಸರಕಾರಿ ಕಛೇರಿಗಳ ಮಾರ್ಗಸೂಚಿ ಫಲಕಗಳು, ಪೌರ ಕಾರ್ಮಿಕ ವಸತಿ ಗೃಹಗಳಿಗೆ, ರೇಲ್ವೆ ಮೇಲು ಸೇತುವೆಗಳಿಗೆ, ಕೆರೆ ಹೊಂಡಗಳಿಗೆ ಹೀಗೆ ಪಾಲಿಕೆ ಹದ್ದಿಯಲ್ಲಿ 60% ರಷ್ಟು ಕನ್ನಡ ಅನುಷ್ಠಾನದ ಸರಕಾರದ ಆದೇಶ ಗಾಳಿಗೆ ತೂರಿ ಬೆಳಗಾವಿ ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿಯೇ ಪಾಲಿಕೆಯ ಸುಮಾರು 3500 ಫಲಕಗಳನ್ನು ಅಳವಡಿಸಿದೆ. ಅವುಗಳನ್ನು ಬದಲಾಯಿಸಿ ಪಾಲಿಕೆಯ ಫಲಕಗಳಲ್ಲಿ ಕನ್ನಡಕ್ಕೆ ಅಗ್ರ ಸ್ಥಾನವನ್ನು ಕೊಟ್ಟು 60% ರಷ್ಟು ಕನ್ನಡಕಡ್ಡಾಯ ಜಾರಿಗೆ ತರಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ

RELATED ARTICLES
- Advertisment -
Google search engine

Most Popular