Monday, November 24, 2025
Google search engine

Homeಸಿನಿಮಾ6 ದಿನಗಳಿಗೆ ₹400 ಕೋಟಿ ದಾಟಿದ 'ಕಾಂತಾರ: ಚಾಪ್ಟರ್ 1

6 ದಿನಗಳಿಗೆ ₹400 ಕೋಟಿ ದಾಟಿದ ‘ಕಾಂತಾರ: ಚಾಪ್ಟರ್ 1

  • ಕಲೆಕ್ಷನ್ ಎಲ್ಲೆಲ್ಲಿ, ಎಷ್ಟೆಷ್ಟು ಗಳಿಕೆ?

ವರದಿ: ಸ್ಟೀಫನ್ ಜೇಮ್ಸ್

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ ಚಾಪ್ಟರ್ 1’ ಸಿನಿಮಾವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ ಧೂಳಿಪಟ ಮಾಡಿದೆ. ನಾಲ್ಕೇ ದಿನಕ್ಕೆ 300+ ಕೋಟಿ ರೂಪಾಯಿಗಳನ್ನು ಗಲ್ಲಾ ಪೆಟ್ಟಿಗೆ ಬಾಚಿಕೊಂಡಿತ್ತು. ಇದೀಗ ಆರು ದಿನಗಳಿಗೆ 400 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಗಳಿಸಿದೆ.

‘ಕಾಂತಾರ ಚಾಪ್ಟರ್ 1’ ಸಿನಿಮಾವು ವಿಶ್ವಾದ್ಯಂತ ಭರ್ಜರಿ ಕಮಾಯಿ ಮಾಡಿದೆ. ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಉತ್ತರ ಭಾರತದಲ್ಲಿ ಕಾಂತಾರ ಹಿಂದಿ ವರ್ಷನ್‌ಗೂ ಸಹ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಆರು ದಿನಗಳಿಗೆ ಈ ಸಿನಿಮಾದ ಗಳಿಕೆಯು 425+ ಕೋಟಿ ರೂ. ಕಮಾಯಿ ಆಗಿದೆ. ವಾರ ತುಂಬುವುದಕ್ಕೂ ಮುನ್ನವೇ ₹400+ ಕೋಟಿ ಕಲೆಕ್ಷನ್


‘ಕಾಂತಾರ ಚಾಪ್ಟರ್ 1’ ಸಿನಿಮಾವು ವಿಶ್ವಾದ್ಯಂತ 425+ ಕೋಟಿ ರೂ. ಅಧಿಕ ಮೊತ್ತವನ್ನು ಗಳಿಕೆ ಮಾಡಿದೆ. ಅಕ್ಟೋಬರ್ 2ರಂದು ತೆರೆಗೆ ಬಂದು, ನಿನ್ನೆಗೆ (ಅ.7) ಆರು ದಿನಗಳಾಗಿವೆ. ಒಂದು ವಾರ ತುಂಬುವುದಕ್ಕೆ 1 ದಿನ ಇರುವಾಗಲೇ ಕಾಂತಾರ 425+ ಕೋಟಿ ರೂ. ಗಳಿಕೆ 2022ರಲ್ಲಿ ತೆರೆಕಂಡಿದ್ದ ‘ಕಾಂತಾರ’ ಸಿನಿಮಾದ ಒಟ್ಟಾರೆ ಗಳಿಕೆ 450 ಕೋಟಿ ರೂ. ಆಗಿತ್ತು. ಇದೀಗ ದಾಖಲೆಯನ್ನು ಏಳು ದಿನಗಳಲ್ಲೇ ಬ್ರೇಕ್ ಮಾಡುವುದಕ್ಕೆ ‘ಕಾಂತಾರ: ಚಾಪ್ಟರ್ 1’ ಸಿನಿಮಾವು ರೆಡಿಯಾಗಿದೆ. ಅಲ್ಲದೆ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ 2ನೇ ಸಿನಿಮಾ ಎಂಬ ಖ್ಯಾತಿಗೂ ‘ಕಾಂತಾರ: ಚಾಪ್ಟರ್ 1’ ಪಾತ್ರವಾಗಲಿದೆ.

‘ಕೆಜಿಎಫ್: ಚಾಪ್ಟರ್ 2’ ಮೊದಲ ಸ್ಥಾನದಲ್ಲಿದೆ. ಕನ್ನಡ ವರ್ಷನ್‌ಗೆ ಎಷ್ಟಾಯ್ತು ಕಲೆಕ್ಷನ್?

‘ಕಾಂತಾರ ಚಾಪ್ಟರ್ 1’ ಸಿನಿಮಾದ ಕನ್ನಡ ವರ್ಷನ್‌ಗೆ ಈವರೆಗೂ ಭಾರತದಲ್ಲಿ ಸಿಕ್ಕಿರುವ ಹಣ ಭರ್ತಿ 90 ಕೋಟಿ ರೂಪಾಯಿ. ಹಿಂದಿ ವರ್ಷನ್‌ನಿಂದ 94 ಕೋಟಿ ರೂಪಾಯಿ ಗಳಿಕೆಯಾದರೆ, ತೆಲುಗು ವರ್ಷನ್‌ನಿಂದ 58 ಕೋಟಿ ರೂಪಾಯಿ ಹಣ ಸಿಕ್ಕಿದೆ.

ಇನ್ನು, ‘ಕಾಂತಾರ ಚಾಪ್ಟರ್ವ 1’ ತಮಿಳು ವರ್ಷನ್‌ನಿಂದ 28 ಕೋಟಿ ರೂಪಾಯಿ ಸಿಕ್ಕರೆ, ಮಲಯಾಳಂ ವರ್ಷನ್‌ನಿಂದ 23 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ. ಎರಡನೇ ವಾರಾಂತ್ಯದ ಗಳಿಕೆಯೂ ಸೇರಿದರೆ, ‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟ್ಟಾರೆ ಗಳಿಕೆ 600+ ಕೋಟಿ ದಾಟುವುದರಲ್ಲಿ ಅನುಮಾನವೇ ಇಲ್ಲ! ಸದ್ಯ ರಿಷಬ್ ಶೆಟ್ಟಿ ಅವರು ಉತ್ತರ ಭಾರತದ ಪ್ರವಾಸದಲ್ಲಿದ್ದು, ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದಾರೆ. ಈಚೆಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಕಾಂತಾರ ಟೀಮ್ ಭೇಟಿ ಮಾಡಿದೆ.

ಕಾಂತಾರ ಚಾಪ್ಟರ್ 1 ಚಿತ್ರವನ್ನು ನೋಡಿ ಖುಷಿಯಾಗಿರುವ ರೇಖಾ ಗುಪ್ತಾ, ”ಈ ಸಿನಿಮಾವು ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಂದರವಾಗಿ ಪ್ರತಿಬಿಂಬಿಸಿದೆ. ನಮ್ಮ ಸಂಪ್ರದಾಯಗಳ ಸಾರವನ್ನು ಜೀವಂತಗೊಳಿಸಿದೆ” ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular