ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಬಿಎಸ್ ಯಡಿಯೂರಪ್ಪ ಅರ್ಜಿ ಸಲ್ಲಿಸಿದರು. ಇದೀಗ ನ್ಯಾ. ಎಂ. ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು.
ವಿಚಾರಣೆಯ ವೇಳೆ ತಮ್ಮ ತಪ್ಪನ್ನು ವಿಡಿಯೋದಲ್ಲಿ ಬಿಎಸ್ ಯಡಿಯೂರಪ್ಪ ಒಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಅವಳು ನನ್ನ ಮೊಮ್ಮಗಳು ಇದ್ದಂತೆ ಚೆಕ್ ಮಾಡಿದೆ ಅಂತ ಹೇಳಿದ್ದಾರೆ. ಹಳೆಯ ಪೋಕ್ಸೋ ಪ್ರಕರಣಕ್ಕೆ ನ್ಯಾಯ ಕೊಡಿಸುವಂತೆ ಬಂದಿದ್ದರು ಮಹಿಳೆ ತನ್ನ ಮಗಳ ಬಗ್ಗೆ ಬೇಕಿದ್ದರೆ ಚೆಕ್ ಮಾಡಿಕೊಳ್ಳಿ ಎನ್ನುತ್ತಿದ್ದರು.
ಅದನ್ನೇ ಚೆಕ್ ಮಾಡಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಲೈಂಗಿಕ ದೌರ್ಜನ್ಯವನ್ನು ಒಪ್ಪಿಕೊಂಡಿಲ್ಲವೆಂದು ಸಿವಿ ನಾಗೇಶ್ ವಾದ ಮಂಡಿಸಿದರು. ಈ ವೇಳೆ ಪ್ರಾಜಿಕ್ಯೂಷನ್ ಪರವಾಗಿ ವಾದ ಮಂಡನೆಗೆ 15 ನಿಮಿಷ ಸಾಕು ಪ್ರೊ. ರವಿವರ್ಮ ಕುಮಾರ್ ಮನವಿ ಮಾಡಿದ್ದು, ಈ ವೇಳೆ ಯಡಿಯೂರಪ್ಪ ಅರ್ಜಿ ವಿಚಾರಣೆ ಹೈಕೋರ್ಟ್ ನಾಳೆ ಮುಂದೂಡಿತು.