Friday, October 10, 2025
Google search engine

Homeಅಪರಾಧನಟ ದರ್ಶನ್​​​​ಗೆ ಜೈಲಲ್ಲಿ ಕನಿಷ್ಠ ಸೌಲಭ್ಯ ಕೊರತೆ: ಕೋರ್ಟ್‌ಗೆ ಅರ್ಜಿ, ನಾಳೆ ಆದೇಶ

ನಟ ದರ್ಶನ್​​​​ಗೆ ಜೈಲಲ್ಲಿ ಕನಿಷ್ಠ ಸೌಲಭ್ಯ ಕೊರತೆ: ಕೋರ್ಟ್‌ಗೆ ಅರ್ಜಿ, ನಾಳೆ ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರು ಬಹಳ ಪರದಾಡುತ್ತಿದ್ದಾರೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕನಿಷ್ಠ ಸವಲತ್ತು ಸಿಗದೇ ಪ್ರತಿದಿನ ನರಕ ಅನುಭವಿಸುತ್ತಿದ್ದಾರೆ ಎಂದು ಆರೋಪ ಮಾಡಿ ಅವರ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅದರ ವಿಚಾರಣೆ ಇಂದು ಮಾಡಲಾಗಿದೆ.

 ನಾಳೆಗೆ ಆದೇಶ ಕಾಯ್ದಿರಿಸಿದ ಕೋರ್ಟ್: ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ದರ್ಶನ್‌ ಪರ ವಕೀಲರು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಲಾಗಿದ್ದು,  ಈ ಸಮಯದಲ್ಲಿ ವಾದ ಪ್ರತಿವಾದ ಆಲಿಸಿದ ಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ವಕೀಲರು ಮಾಡಿದ ವಾದಕ್ಕೆ ದರ್ಶನ್ ಪರ ವಕೀಲ ಸುನಿಲ್ ಆಕ್ಷೇಪ ವ್ಯಕ್ತಪಡಿಸಿದ್ದು, ನಿಜಕ್ಕೂ ನ್ಯಾಯಾಂಗ ನಿಂದನೆ ಅಪರಾಧ ಆಗಿದೆಯಾ? ಇಲ್ಲವೋ ಎಂದು ಪರಿಶೀಲನೆ ಮಾಡಬೇಕು. ಸದ್ಯ ಕೋರ್ಟ್‌ ದರ್ಶನ್ ಸಲ್ಲಿಸಿದ ಅರ್ಜಿ ಸಂಬಂಧ ವಿಚಾರಣೆ ಮಾಡುತ್ತಿದೆ. ದರ್ಶನ್‌ಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಖುದ್ದು ನ್ಯಾಯಾಧೀಶರೇ ಬಂದು ಪರಿಶೀಲನೆ ಮಾಡಿದರೆ ಪ್ರಾಸಿಕ್ಯೂಷನ್ ಗೆ ಭಯ ಏಕೆ? ದರ್ಶನ್‌ ಅವರಿಗೆ ಅವರಿಗೆ ಸವಲತ್ತು ನೀಡಲಾಗಿದೆಯಾ  ಇಲ್ಲವೋ ಎಂಬುದನ್ನ ಕೋರ್ಟ್‌ ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲೇಖಿಸಿ ಸುನಿಲ್ ವಾದ ಮಾಡಿದ್ದಾರೆ.

ಇದಕ್ಕೆ ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಈ ಮಾರ್ಗಸೂಚಿ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ. ನ್ಯಾಯಾಧೀಶರಿಗೆ ಬೇರೆ ಬೇರೆ ಕೆಲಸಗಳು ಇರುತ್ತದೆ ಎಂದು ವಾದ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ  ಆರೋಪಿ ದರ್ಶನ್​ಗೆ  ಯಾಕೋ‌ ಟೈ‌ಮ್​ ಸರಿ ಇಲ್ಲ ಅನ್ಸುತ್ತೆ. ಐಷಾರಾಮಿ ಲೈಫ್​ ಲೀಡ್​ ಮಾಡುತ್ತಿದ್ದ ನಟ ಕೇವಲ ಒಂದು ಬೆಡ್‌ಶೀಟ್, ದಿಂಬು, ವಾಕಿಂಗ್​ ಮಾಡೋದಕ್ಕೂ ಕೋರ್ಟ್​ನಲ್ಲಿ ಬೇಡಿಕೊಳ್ಳೋ ಪರಿಸ್ಥಿತಿ ಬಂದಿದೆ. ಪರಪ್ಪನ ಅಗ್ರಹಾರದಲ್ಲಿ ರೌಡಿ ವಿಲ್ಸನ್​ ಗಾರ್ಡನ್ ನಾಗನ ಜೊತೆ ಸಿಗರೇಟ್ ಸೇದುತ್ತಾ, ಚಹಾ ಹೀರುತ್ತಾ ಹಾಯಾಗಿ ಕುಳಿತಿದ್ದ ಫೋಟೋ ವೈರಲ್ ಆಗಿತ್ತು. ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿದ್ದು ಕೂಡಾ ಜಗತ್ತಿಗೇ ಗೊತ್ತಾಯ್ತು. ಅದನ್ನೆಲ್ಲಾ ಗಮನಿಸಿದ್ದ ಸುಪ್ರೀಂ ಕೋರ್ಟ್ ದರ್ಶನ್​ಗೆ ಸಾಮಾನ್ಯ ಕೈದಿಗೆ ಸಿಗೋ ಸೌಲಭ್ಯಗಳನ್ನಷ್ಟೇ ನೀಡಬೇಕು ಎಂದು ಸೂಚಿಸಿತ್ತು. ಅದೇ ಕಾರಣಕ್ಕೆ ಜೈಲಾಧಿಕಾರಿಗಳು ಕಟ್ಟುನಿಟ್ಟಿನಿಂದ ವರ್ತಿಸುತ್ತಿದ್ದಾರೆ. ಕೋರ್ಟ್ ಹೇಳಿದ್ರೆ ಮಾತ್ರವೇ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ರೋಸಿ ಹೋಗಿರೋ ದರ್ಶನ್​ ಮಾನವ ಹಕ್ಕು ಆಯೋಗದ ಬಾಗಿಲು ಬಡಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ

ಜೈಲಿನಲ್ಲಿ ಕೆಲ ಸಾಮಾನ್ಯ ಸೌಕರ್ಯಗಳು ಸಿಗುತ್ತಿಲ್ಲವೆಂದು ನಟ ದರ್ಶನ್​ ದೂರಿದ್ದು, ಜೈಲಧಿಕಾರಿಗಳ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ದೂರಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ನಟ ದರ್ಶನ್, ಮಾನವ ಹಕ್ಕು ಆಯೋಗಕ್ಕೆ ಹೋಗಲು ನಿರ್ಧಾರ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular