Friday, October 10, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿಯಲ್ಲಿ ಬೀದಿ ನಾಯಿಗಳ ಆತಂಕ: ಮಕ್ಕಳ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ

ಬೆಳಗಾವಿಯಲ್ಲಿ ಬೀದಿ ನಾಯಿಗಳ ಆತಂಕ: ಮಕ್ಕಳ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ಕುಂದಾನಗರಿಯ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ನಿತ್ಯ ಭಯದಲ್ಲೇ ಸಂಚರಿಸುವಂತಾಗಿದೆ. ‌ ನಿತ್ಯ ಹೀಗಾದರೆ ಮಕ್ಕಳು ಹಾಗೂ ವೃದ್ಧರನ್ನು ರಕ್ಷಿಸುವವರಾರು? ಎಂಬ ಪ್ರಶ್ನೆ ಉದ್ಬವವಾಗಿದೆ.
ಮಾರುತಿ ನಗರ ಒಂದನೇ ಅಡ್ಡರಸ್ತೆಯಲ್ಲಿ ಮನೆ ಬಳಿ ಆಟ ಆಡುತ್ತಿದ್ದ ಆರಾಧ್ಯ ಎಂಬ ಬಾಲಕಿಗೆ ಬೀದಿ ನಾಯಿ ಕಚ್ಚಿದ್ದರಿಂದ ಮಗುವಿನ ಮುಖಕ್ಕೆ ಗಂಭೀರ ಗಾಯವಾಗಿದೆ. ಮಗುವಿನ ಸ್ಥಿತಿ ನೋಡಿದ ಜನ ಪಾಲಿಕೆ ಆಯುಕ್ತ ಶುಭ ಅವರಿಗೆ ಚಿಮಾರಿ ಹಾಕುತ್ತಿದ್ದಾರೆ.

ಎಲ್ಲೇಲ್ಲಿ ನಾಯಿಗಳ ಕಾಟ- ಮಾರುತಿ ಗಲ್ಲಿ, ಮಹಾಂತೇಶ ನಗರ ದೇಸಾಯಿ ಲಾನ್‌ ಹಿಂಭಾಗ, ಸದಾಶಿವನಗರ, ವಿಶ್ವೇಶ್ವರಯ್ಯಾ ನಗರ, ಹುನುಮಾನ ನಗರ, ಸೌಹಾದ್ರಿ ನಗರ, ವೀರಭದ್ರ ನಗರ, ಶಿವಾಜಿ ನಗರ, ಅಶೋಕ ನಗರ, ಮಾಲಿನಿ ನಗರ, ಆರ್‌ ಟಿಓ ಸರ್ಕಲ್‌, ಶಹಪುರ, ಸರ್ದಾರ್‌ ಮೈದಾನ, ಬಸ್‌ ನಿಲ್ದಾಣ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿನಾಯಿಗಳು ಹೆಚ್ಚುವ ಜತೆಗೆ ‌ ಆರ್‌ ಟಿಓ ಬಳಿ ನಾನ್ ವೇಜ್ ಅಂಗಡಿ ಮುಂಭಾಗದಲ್ಲೇ ಸಾಕಷ್ಟು ಬೀದಿನಾಯಿಗಳು ಠಿಕಾಣಿ ಹೂಡಿರುತ್ತವೆ. ರಾತ್ರಿ ವೇಳೆ ನಗರದಕ್ಕೆ ಬರುವವರು ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದು ಕಷ್ಟಕರವಾಗಿದೆ. ಅಲ್ಲದೇ ಕೆಲವರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಉದಾಹರಣೆಗಳೂ ಇವೆ.

ಮಕ್ಕಳನ್ನು ಹೊರಗೆ ಕಳುಹಿಸಲು ಭಯ: ನಗರದ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಪಾಲಿಕೆ ಅಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದರೂ ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ಬಿಟ್ಟರೆ ನಾಯಿಗಳ ಹಾವಳಿ ನಿಯಂತ್ರಿಸಲು ಮುಂದಾಗಿಲ್ಲ ಎಂಬ ಆರೋಪಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.


ಭಯದ ವಾತಾವರಣ: ಪ್ರತಿದಿನವೂ ಜನರು ಮನೆಯಿಂದ ಹೊರಬರುವಾಗ ಅಥವಾ ತೆರಳುವಾಗ ದಾರಿಯಲ್ಲಿ ಭಯಬೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ವಿದ್ಯುತ್‌ ಕಡಿತವಾದ ಸಂದರ್ಭದಲ್ಲಿ ರಸ್ತೆಗಳಲ್ಲಿ ಓಡಾಡುವಾಗ ಬೀದಿನಾಯಿಗಳು ದಾಳಿ ಮಾಡುತ್ತವೆ ಎಂದು ಅನೇಕ ನಾಗರಿಕರು ದೂರುತ್ತಿದ್ದಾರೆ.

  • ವಾಹನ ಸವಾರರಿಗೂ ನಾಯಿಗಳ ಕಾಟ

ಬೆಳಗ್ಗೆ ಮತ್ತು ಸಂಜೆ ಕಿಲ್ಲಾ ಕೆರೆ ಹಾಗೂ ಗೋಲ್ಫ್‌ ಮೈದಾನದಲ್ಲಿ ವಾಕಿಂಗ್‌ ಹೋಗುವ ಅನೇಕರು ಇದೀಗ ಕೈಯಲ್ಲಿ ಲಾಠಿ ಹಿಡಿದು ಒಡಾಡಬೇಕಿದೆ. ಶ್ವಾನಗಳಿಂದ ಮುಕ್ತಿ ಪಡೆಯಲು ಜನರು ನರಕಯಾತನೆ ಅನುಭವಿಸುವಂತಾಗಿದೆ. ಪಾದಚಾರಿಗಳಿಗೆ ಮಾತ್ರ ಈ ನಾಯಿಗಳ ಕಾಟ ಸೀಮಿಗೊಂಡಿಲ್ಲ. ದ್ವಿಚಕ್ರವಾಹನ ಚಾಲಕರಿಗೂ ಬೆನ್ನಟ್ಟಿಬಂದು ಕಚ್ಚುತ್ತಿವೆ.

ಬೀದಿ ನಾಯಿಗಳ ಹಾವಳಿ ತಪ್ಪಿಸಿ: ನಿಯಮದ ಪ್ರಕಾರ ಬೀದಿನಾಯಿಗಳನ್ನು ಹಿಡಿದು ಅದಕ್ಕೆ ಸಂತನಹರಣ ಚಿಕಿತ್ಸೆ ಮಾಡಿಸಿ ಪುನಃ ಅದು ಇದ್ಧ ಸ್ಥಳದಲ್ಲಿ ಬಿಡಬೇಕು. ಆದರೆ ಕೇವಲ ಸಂತನಹರಣ ಚಿಕಿತ್ಸೆ ಮಾಡಿದಲ್ಲಿ ನಾಯಿಗಳ ಸಂಖ್ಯೆ ತುಸು ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ, ಆದರೆ ಬೀದಿ ನಾಯಿಗಳು ಸಾರ್ವಜನಿಕರಿಗೆ ಕಚ್ಚುವುದನ್ನು ಮಾತ್ರ ತಪ್ಪಿಸಲಾಗುವುದಿಲ್ಲ. ಆದ್ದರಿಂದ ಪಾಲಿಕೆ ಅದಿಕಾರಿಗಳು ಇನ್ನಾದರು ಈ ಬಗ್ಗೆ ಗಮನ ಹರಿಸಿ ಬೀದಿ ನಾಯಿಗಳ ಹಾವಳಿಯನ್ನು ತಡೆಯಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular