Sunday, October 12, 2025
Google search engine

Homeರಾಜ್ಯಸುದ್ದಿಜಾಲಯುವಕರು ಸಂಗೊಳ್ಳಿರಾಯಣ್ಣ ನಂತಹ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಡಿ. ರವಿಶಂಕರ್‌

ಯುವಕರು ಸಂಗೊಳ್ಳಿರಾಯಣ್ಣ ನಂತಹ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಡಿ. ರವಿಶಂಕರ್‌

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಂಹಸ್ವಪ್ನವಾಗಿ ಕಾಡುವ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಯುವಕರು ಸಂಗೊಳ್ಳಿರಾಯಣ್ಣ ನಂತಹ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಿ. ರವಿಶಂಕ‌ರ್ ಹೇಳಿದರು.

ಚುಂಚನಕಟ್ಟೆ ಸಮೀಪದ ಅಂಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ಮಾಡಿ ಮಾತನಾಡಿದ ಅವರು, ಸರ್ವ ಸಮುದಾಯದ ನಾಯಕ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತ ಸಂಗೊಳ್ಳಿರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ದೂರ ದೃಷ್ಟಿಯಿಂದ ಅವರ ಪ್ರತಿಮೆಯನ್ನು ಗ್ರಾಮಸ್ಥರ ಹಾಗೂ ಯುವಕರ ಸಹಕಾರದೊಂದಿಗೆ ಪ್ರತಿಮೆ ನಿರ್ಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಪ್ರತಿಮೆ ಹಾಗೂ ರಸ್ತೆಗಳಿಗೆ ಹೆಸರನ್ನು ಇಡುವುದರ ಜತೆಗೆ ಅವರ ಆದರ್ಶ, ತತ್ವ, ಸೈದ್ಧಾಂತಿಕ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಇಂತಹ ಮಹನೀಯರಿಗೆ ಗೌರವ ಕೊಟ್ಟಂತೆ ಆಗುವುದು ಎಂದು ಹೇಳಿದರು.

ಹಾಡ್ಯ ಮಹದೇವ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕ‌ರ್, ಗ್ರಾಪಂ ಉಪಾಧ್ಯಕ್ಷದೊಡ್ಡಗೌಡ, ಎಲ್‌ಐಸಿ ಮಹದೇವ, ಗ್ರಾಪಂ ಸುರೇಶ್, ಮಹದೇವ್, ವಂದನಾ, ಕುಮಾರಸ್ವಾಮಿ, ಗೌಡಯ್ಯ, ಸುರೇಶಣ್ಣ, ಯತೀಶ್, ಹರೀಶ್ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular