Sunday, October 12, 2025
Google search engine

Homeರಾಜ್ಯಸುದ್ದಿಜಾಲಪ್ರೀತಿ ಮಾಡಿ ಮದುವೆಯಾದ ಮಗಳ ತಿಥಿ ಮಾಡಿದ ತಂದೆ

ಪ್ರೀತಿ ಮಾಡಿ ಮದುವೆಯಾದ ಮಗಳ ತಿಥಿ ಮಾಡಿದ ತಂದೆ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: 19 ವರ್ಷದ ಹುಡುಗಿ, 29 ವರ್ಷದ ಹುಡುಗ ಪರಸ್ಪರ ಪ್ರೀತಿಸಿ ಮನೆಯಿಂದ ಪರಾರಿಯಾದ ಹಿನ್ನೆಲೆಯಲ್ಲಿ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ತಿಥಿ ಮಾಡಿ ತಂದೆ ಊರಿಗೆ ಊಟ ಹಾಕಿಸಿದ ಘಟನೆ ರಾಯಭಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಸುಶ್ಮಿತಾ ಶಿವಗೌಡ ಪಾಟೀಲ ಎಂಬಾಕೆ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿದ್ದಳು. ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನೊಂದಿಗೆ ಪರಾರಿಯಾಗಿದ್ದ ಸುಶ್ಮಿತಾ ತಂದೆಗೆ ನಾಲ್ಕು ಜನ ಹೆಣ್ಣುಮಕ್ಕಳು, ಇವಳು ಕೊನೆಯವಳಾಗಿದ್ದಳು.

ಮನೆತನದ ಸಂಸ್ಕಾರ ಮುರಿದು ಮಗಳು ಓಡಿಹೋಗಿದ್ದರಿಂದ ಮನನೊಂದಿರೋ ಶಿವಗೌಡ ಪಾಟೀಲ. ಮೊದಲಿಗೆ ರಾಯಬಾಗ ಪೊಲೀಸ್ ಸ್ಟೇಷನ್‌ನಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದ ಶಿವಗೌಡ ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭರ್ಜರಿ ಭೋಜನ ಹಾಕಿಸಿದ ನೊಂದ ತಂದೆ ಶಿವಗೌಡ ಮಗಳ ಪ್ರೀತಿಗೆ ಸಾವಿನ ತಿಥಿ ಮಾಡಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular