ಚಾಮರಾಜನಗರ:ಎಸ್.ಬಿ.ಐ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗೆ ಊಟ ವಸತಿಗಳೊಂದಿಗೆ ಉಚಿತವಾಗಿ ಹೈನುಗಾರಿಕೆ, ಎರೆಹುಳು ಗೊಬ್ಬರ ಮತ್ತು ಕುರಿ, ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಅಕ್ಟೋಬರ್ ೧೫ ರಂದು ಪ್ರಾರಂಭವಾಗುತ್ತಿದ್ದು, ೧೩ ದಿನಗಳು ತರಬೇತಿ ನೀಡಲಾಗುತ್ತದೆ. ೧೮ ರಿಂದ ೪೫ ವರ್ಷದೊಳಗಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ತರಬೇತಿಗೆ ಬರುವಾಗ ಆಧಾರ್ ಕಾರ್ಡ್, ಪಡಿತರ ಚೀಟಿಯ ನಕಲು ಪ್ರತಿ ಮತ್ತು ೪ ಭಾವಚಿತ್ರಗಳನ್ನು ತರಬೇಕು. ಮಾದಾಪುರದ ಸಂತೇಮರಳ್ಳಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡದಲ್ಲಿರುವ ಎಸ್.ಬಿ.ಐ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೯೬೦೬೦೯೮೮೭೮, ೮೭೨೨೪೮೩೩೯೩, ೯೭೩೯೦೬೭೧೫೫ ಸಂಪರ್ಕಿಸುವAತೆ ಎಸ್.ಬಿ.ಐ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.