Tuesday, October 14, 2025
Google search engine

Homeರಾಜ್ಯಸುದ್ದಿಜಾಲಮದುವೆ ನೆಪದಲ್ಲಿ ಹನಿಟ್ರ್ಯಾಪ್‌: ಸೌದಿ ಉದ್ಯೋಗಿ ಕೇರಳ ನಿವಾಸಿಯಿಂದ ಲಕ್ಷಾಂತರ ವಂಚನೆ

ಮದುವೆ ನೆಪದಲ್ಲಿ ಹನಿಟ್ರ್ಯಾಪ್‌: ಸೌದಿ ಉದ್ಯೋಗಿ ಕೇರಳ ನಿವಾಸಿಯಿಂದ ಲಕ್ಷಾಂತರ ವಂಚನೆ

ಮಂಗಳೂರು: ಹುಡುಗಿ ನೋಡುವ ವಿಚಾರದಲ್ಲಿ ಫೋಟೋ, ವೀಡಿಯೋ ತೆಗೆದು ಹನಿಟ್ರ್ಯಾಪ್‌ಮಾದರಿಯಲ್ಲಿ ಬೆದರಿಕೆಯೊಡ್ಡಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.

ಸೌದಿಯಲ್ಲಿ ಉದ್ಯೋಗದಲ್ಲಿರುವ ಕೇರಳ ನಿವಾಸಿ ಮಹಮ್ಮದ್ ಅಶ್ರಫ್ ತಾವರಕಡನ್( 53) ಎಂಬವರು ದೂರು ನೀಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಾದ ಮಹಮ್ಮದ್ ಅಶ್ರಫ್ ತಾವರಕಡನ್ ಎಂಬವರು ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ ಮದುವೆಯ ಸಲುವಾಗಿ ಮಂಗಳೂರಿಗೆ ಬಂದಿದ್ದು, ಅಲ್ಲಿಗೆ ಕರೆಸಿದ ಬಶೀರ್, ಸಫಿಯಾ ಮತ್ತು ಇತರ ಆರೋಪಿತರು ಅವರನ್ನು ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು, ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80 ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ ಎಂದು ಪಿರಿಯಾದಿದಾರರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 145/2025 ಕಲಂ: 318(4), 308(2), 115(2), 351(2), r/w 3(5) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular