Thursday, October 16, 2025
Google search engine

Homeರಾಜಕೀಯಬೆದರಿಕೆ ಕರೆಗಳ ನಡುವೆಯೂ ಆರ್‌ಎಸ್‌ಎಸ್ ಸಂಸ್ಕೃತಿಯ 20 ಅನ್‌ಎಡಿಟ್ ವಿಡಿಯೋ ಬಿಡುಗಡೆ: ಪ್ರಿಯಾಂಕ್ ಖರ್ಗೆ

ಬೆದರಿಕೆ ಕರೆಗಳ ನಡುವೆಯೂ ಆರ್‌ಎಸ್‌ಎಸ್ ಸಂಸ್ಕೃತಿಯ 20 ಅನ್‌ಎಡಿಟ್ ವಿಡಿಯೋ ಬಿಡುಗಡೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು : ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಕ್ಕೆ ಪತ್ರ ಬರೆದ ಬಳಿಕ ನನಗೆ ಬೆರದಿಕೆ ಕರೆಗಳು ಬಂದಿವೆ. ಬಹಳ ಕೆಟ್ಟದ್ದಾಗಿ ಬೈಯ್ದಿದ್ದಾರೆ. ಬಿಜೆಪಿಯವರು ಅದಕ್ಕೆ ದಾಖಲೆ ಕೇಳಿದ್ರು, ಈಗ ಆರ್‌ಎಸ್‌ಎಸ್ ಸಂಸ್ಕೃತಿ ತೋರಿಸುವಂಹತ ಎಡಿಟ್ ಆಗದ 20 ವಿಡಿಯೋ ರಿಲೀಸ್ ಮಾಡಿದ್ದೇನೆ. ಇನ್ನೂ ಕೆಟ್ಟದ್ದಾಗಿ ಬೈದಿರುವ ವಿಡಿಯೋಗಳಿವೆ ನನ್ನ ಮರ್ಯಾದೆ ಉಳಿಸಿಕೊಳ್ಳಲು ಅವುಗಳನ್ನು ರಿಲೀಸ್ ಮಾಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದಾಗ ಬಿಜೆಪಿಯವರು ದಾಖಲೆ ಕೇಳಿದ್ದರು, ರಿಲೀಸ್ ಮಾಡಿದ್ದೇನೆ. ಅನ್‌ಎಡಿಟೆಡ್ 20 ವಿಡಿಯೋಗಳು ಆರ್‌ಎಸ್‌ಎಸ್ ಸಂಸ್ಕೃತಿ ತೋರಿಸುತ್ತವೆ. ನನಗೆ ಇನ್ನೂ ಕೆಟ್ಟದಾಗಿ ಬೈದಿದ್ದಾರೆ. ಆದರೆ ನನ್ನ ಮರ್ಯಾದೆ ಉಳಿಸಿಕೊಳ್ಳಲು ಅದನ್ನ ರಿಲೀಸ್ ಮಾಡಿಲ್ಲ.

ಇನ್ನೂ ದೂರು ಕೊಡುವ ಬಗ್ಗೆ ಚರ್ಚೆ ಮಾಡಿ, ಗೃಹ ಸಚಿವ ಪರಮೇಶ್ವರ್ ಅವರ ಜೊತೆಯೂ ಮಾತಾಡ್ತೀನಿ. ದೂರು ಕೊಡುವುದು ಸುಲಭ, ಆದ್ರೆ ಆ ವ್ಯಕ್ತಿಗೆ ಶಿಕ್ಷೆ ಆಗುತ್ತೆ, ಆ ಮನಸ್ಥಿತಿ ತುಂಬಿದ ಆರ್‌ಎಸ್‌ಎಸ್‌ಗೆ ಏನು ಶಿಕ್ಷೆ? ಸದ್ಯಕ್ಕೆ ನನ್ನ ಫೋನ್ ಸ್ವಿಚ್‌ಆಫ್ ಮಾಡಿದ್ದೀನಿ, ಆದರೆ ಅದೇ ಪರಿಹಾರ ಅಲ್ಲ ಎಂದು ತಿಳಿಸಿದ್ದಾರೆ.

ಗೂಗಲ್ ಎಐ ಹಬ್ ಆಂಧ್ರಪ್ರದೇಶದ ಪಾಲಾದ ವಿಚಾರವಾಗಿ ಮಾತನಾಡಿ, ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಅನಂತ ಬೆಂಗಳೂರಲ್ಲಿ ಇದೆ. ಎಐ ತಂತ್ರಜ್ಞಾನದ ಹಬ್‌ನಲ್ಲಿ ಬೆಂಗಳೂರು ಜಗತ್ತಿನಲ್ಲಿ ನಾಲ್ಕನೇ ದೊಡ್ಡ ಸಿಟಿಯಾಗಿದೆ. ಆಂಧ್ರಪ್ರದೇಶದವರು ಬಾರೀ ರಿಯಾಯಿತಿ ಕೊಡ್ತಾ ಇದಾರೆ. ಹಾಗಾಗಿ ಹೂಡಿಕೆದಾರರು ಅಲ್ಲಿಯೂ ಹೋಗ್ತಿದ್ದಾರೆ ಎಂದಿದ್ದಾರೆ.

ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ ಬಳಿಕ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು. ಈ ಹಿನ್ನೆಲೆ ಸದ್ಯ ರೇಸ್‌ಕೋರ್ಸ್ನ ಸರ್ಕಾರಿ ನಿವಾಸ ಮತ್ತು ಸದಾಶಿವನಗರದ ಖಾಸಗಿ ನಿವಾಸಗಳೆರಡಕ್ಕೂ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.

ಕೆಎಸ್‌ಆರ್‌ಪಿ ತುಕಡಿ ಹಾಗೂ ಸ್ಥಳೀಯ ಪೊಲೀಸರಿಂದ ಭದ್ರತೆ ಒದಗಿಸುತ್ತಿದ್ದಾರೆ. ಜೊತೆಗೆ ಆರ್‌ಎಸ್‌ಎಸ್ ಸಂಘ ಅಥವಾ ಬಿಜೆಪಿ ಅಥವಾ ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ಮಾಡುವ ಸಾಧ್ಯತೆ ಹಿನ್ನೆಲೆ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ದಂಡು ಆಗಮಿಸಿದ್ದು, ಅಂಬೇಡ್ಕರ್ ಫೋಟೋ ಹಿಡಿದು ಬೆಂಬಲ ಸೂಚಿಸಿ ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

RELATED ARTICLES
- Advertisment -
Google search engine

Most Popular