Monday, April 21, 2025
Google search engine

Homeಸ್ಥಳೀಯವಿಕಲಾಂಗ ನಾಯಿಗಳ ಆರೈಕೆ ಕೇಂದ್ರ ಉದ್ಘಾಟನೆ

ವಿಕಲಾಂಗ ನಾಯಿಗಳ ಆರೈಕೆ ಕೇಂದ್ರ ಉದ್ಘಾಟನೆ


ಮೈಸೂರು: ನಗರದ ಬೋಗಾದಿಯಲ್ಲಿರುವ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ)ನಲ್ಲಿ ವಿಕಲಾಂಗ ನಾಯಿಗಳಿಗೆಂದೆ ಪ್ರತ್ಯೇಕವಾಗಿ ನಿರ್ಮಿಸಿರುವ ವಿಭಾಗವನ್ನು ರಾಜವಶಂಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಾವು ವಿದೇಶಿ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಬದಲು ದೇಸಿ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ವಿದೇಶಿ ನಾಯಿಗಳಿಗೆ ಹೋಲಿಸಿದರೆ ದೇಸಿ ನಾಯಿಗಳು ನಮ್ಮ ಪರಿಸ್ಥಿತಿಗೆ ಹೆಚ್ಚು ಹೊಂದಿಕೊಳ್ಳುತ್ತವೆಯಲ್ಲದೆ ಈ ವಾತಾವರಣಕ್ಕೆ ಸೂಕ್ತವಾದವು. ಅಪಘಾತದಿಂದಲೋ, ಹುಟ್ಟಿನಿಂದಲೋ ವಿಕಲಾಂಗರಾಗಿ ನಿರ್ಲಕ್ಷ್ಯಕ್ಕೆ ಒಳಗಾಗುವ ನಾಯಿಗಳನ್ನು ಆರೈಕೆ ಮಾಡಬೇಕು. ಯಾರೂ ಇಂತಹ ನಾಯಿಗಳನ್ನು ಕಡೆಗಣಿಸಬಾರದು ಎಂದು ಹೇಳಿದರು.
ಡಾ.ಡಿ.ಎಲ್.ಮಾಧವಿ ಅವರು ವಿಭಾಗ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು, ಪರಿತ್ಯಕ್ತ ಅಥವಾ ನಿರ್ಲಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಪ್ರೀತಿಯಿಂದ ಆರೈಕೆ ಮಾಡಲಾಗುತ್ತದೆ. ಅಂಗವಿಕಲ ನಾಯಿಗಳಿಗಾಗಿ ಶಾಶ್ವತ ಸ್ಥಳ ಮತ್ತು ವೈದ್ಯಕೀಯ ಸಹಾಯ ಒದಗಿಸುತ್ತದೆ. ಅಪಘಾತ, ಮಾನವ ಕ್ರೌರ್ಯ, ಜನ್ಮಜಾತ ಕಾಯಿಲೆಗಳಿಂದ ಅಂಗವಿಕಲವಾದ ನಾಯಿಗಳನ್ನು ಉಪಚರಿಸುವುದೇ ಇದರ ಉದ್ದೇಶ.
ಕಾರ್ಯಕ್ರಮದಲ್ಲಿ ದಿವ್ಯ ಅರಸ್, ಪಿಎಫ್‌ಎ ಅಧ್ಯಕ್ಷ ಪ್ರಕಾಶ್, ಟ್ರಸ್ಟಿ ಸುಂದರರಾಜನ್, ಮ್ಯಾನೇಜಿಂಗ್ ಟ್ರಸ್ಟಿ ಸವಿತಾ ನಾಗಭೂಷಣ್, ಜಯಶ್ರೀ ಹಾಗೂ ಶೇಷಸಾಯಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular