ಮೈಸೂರು: ಬಿಎಸ್‌ಎನ್‌ಎಲ್ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಿಸಲು ಆಗ್ರಹಿಸಿ ಅಖಿಲ ಭಾರತ ಬಿಎಸ್‌ಎನ್‌ಎಲ ಡಿಓಟಿ ಪಿಂಚಣಿದಾರರ ಸಂಘ, ಸಂಚಾರ್ ನಿಗಮ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಎಸ್‌ಎನ್‌ಎಲ್-ಎಂಟಿಎನ್‌ಎಲ್ ಪಿಂಚಣಿದಾರರ ಸಂಘದ ಜಂಟಿ ವೇದಿಕೆ ವತಿಯಿಂದ ಜಯಲಕ್ಷ್ಮೀಪುರಂನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಡಿಒಟಿ ಆಡಳಿತದವರು ೨೦೧೭ರಿಂದಲೇ ಅನಗತ್ಯ ಸುಳ್ಳು ನೆಲೆಗಟ್ಟಿನಲ್ಲಿ ಬಿಎಸ್‌ಎನ್‌ಎಲ್ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಯನ್ನು ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದರು. ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ನಿವೃತ್ತ ನೌಕರರಿಗೆ ೨೦೧೭ರ ಜ.೧ರಿಂದ ಅನ್ವಯವಾಗುವಂತೆ ಶೇ.೧೫ ಪಿಂಚಣಿ ಹೆಚ್ಚಿಸಬೇಕು. ಇಲ್ಲದಿದ್ದರೆ ಆ.೨೧ ರಿಂದ ೨೫ ರವರೆಗೆ ನವದೆಹಲಿಯ ಜಂತರ್ ಮಂತರ್‌ದಲ್ಲಿ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಬಿಎಸ್‌ಎನ್‌ಎಲ್ ಪಿಂಚಣಿದಾರರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.