ಮೈಸೂರು: ಒಬ್ಬನೇ ಒಬ್ಬ ಕೈಗಾರಿಕ್ಯೋದಮಿ, ರಾಜ್ಯದಿಂದ ಯಾವುದೇ ಕಂಪನಿಗಳು ಹೊರಹೋಗಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಅವರಿಂದ ಕೇಂದ್ರ ಸರ್ಕಾರ ನಡೆಯುತ್ತಿದೆ. ಗೂಗಲ್ ಎ ಐ ರಾಜ್ಯಕ್ಕೆ ಕೈ ತಪ್ಪಲು ರಾಜ್ಯ ಸರ್ಕಾರ ಕಾರಣವಲ್ಲ. ಕೇಂದ್ರ ಸರ್ಕಾರ ಚಂದ್ರಬಾಬು ನಾಯ್ಡು ಅವರಿಗೆ ೨೨ ಸಾವಿರ ಕೋಟಿ ಅನುದಾನ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಗಿಫ್ಟ್ ನೀಡಿದ್ದಾರೆ. ಅದನ್ನು ಬಿಟ್ಟರೆ ಯಾವ ಕಂಪನಿಯೂ ಸಹ ರಾಜ್ಯದಿಂದ ಹೊರಹೋಗಿಲ್ಲ ಎಂದು ತಿಳಿಸಿದರು.
ನಮ್ಮಲ್ಲೂ ಒಂದು ಸೆಮಿಕಂಡಕ್ಟರ್ ಇಂಡ್ರಸ್ಟ್ರಿ ಬರುತ್ತಿದೆ. ಜಪಾನ್, ಸೌತ್ ಕೊರಿಯಾದಿಂದ ಹೆಚ್ಚು ಹೂಡಿಕೆ ಬರಲಿದೆ. ಅಷ್ಟೆ ಅಲ್ಲದೇ ರಾಜ್ಯಕ್ಕೆ ೧೦ ಲಕ್ಷದ ೨೦ ಸಾವಿರ ಕೋಟಿ ರಾಜ್ಯಕ್ಕೆ ಬರಲಿದೆ. ಜಪಾನ್ ಹೂಡಿಕೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ನಾವು ಮೊದಲ ಭೇಟಿಯಲ್ಲಿ ಅವರನ್ನು ಆಕರ್ಷಿಸಿದ್ದೇವೆ ಎಂದರು.
ಪಶ್ಚಿಮ ಮಹಾರಾಷ್ಟ್ರದಲ್ಲಿ ಚುನಾವಣೆಗಾಗಿ ಪ್ರೀತಿಯ ಸಹೋದರಿ ಎಂಬ ಯೋಜನೆ ಮೂಲಕ ಚುನಾವಣೆ ಗೆದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳನ್ನು ಚುನಾವಣೆಗಾಗಿ ಜಾರಿಗೆ ತಂದಿಲ್ಲ. ಆದರೆ ನಮ್ಮ ಬದ್ಧತೆಗಾಗಿ ಎಲ್ಲಾ ಜಾತಿಯವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಪ್ರತಿ ಸಮುದಾಯದವರಿಗೂ ಸಹ ಗ್ಯಾರಂಟಿ ಯೋಜನೆಗಳು ಸಿಗುತ್ತಿದೆ ಎಂದು ತಿಳಿಸಿದರು.
ಕಾವೇರಿ ತೀರ್ಪು ಬಂದಿದ್ದು ನಾನು ನೀರಾವರಿ ಮಂತ್ರಿಯಾಗಿದ್ದಾಗ. ೧೯೨ ಟಿಎಂಸಿ ನೀರನ್ನು ಹೊರಗಡೆ ಬಿಡಬೇಕಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಾಹ್ಲಿ ನಾರೀಮನ್ ಅವರನ್ನು ಒಪ್ಪಿಸಿ ಕೋರ್ಟಿಗೆ ಕರೆತಂದು ಒಂದು ತಿಂಗಳ ಕಾಲ ಚರ್ಚಿಸಿ ೧೯೨ ಟಿಎಂಸಿ ಇದ್ದದ್ದು ೧೭೭ ಟಿಎಂಗೆ ತಂದರು. ಇದರಿಂದ ೧೪.೫ ಟಿಎಂಸಿ ನೀರು ನಮಗೆ ಜಾಸ್ತಿಯಾಯಿತು ಎಂದರು.
ಬೆಂಗಳೂರು ನಗರಕ್ಕೆ ನೀರು ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದರು. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಂದಿನ ಮದ್ರಾಸ್ (ಚೆನ್ನೈಗೆ ತೆಲಗುಗುಂದ ಪ್ರಾಜೆಕ್ಟ್ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳು ತಲಾ ೫ ಟಿಎಂಸಿಯಂತೆ ೧೫ ಟಿಎಂಸಿ ನೀರನ್ನು ಮಾನವೀಯತೆ ಆಧಾರ ಮೇಲೆ ತಮಿಳು ನಾಡಿಗೆ ಕೋಟಿದ್ದೇವೆ ಎಂದು ತಿಳಿಸಿದಾಗ ಸಂಪೂರ್ಣ ಚಿತ್ರಣ ಬದಲಾಯಿತು ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಸ್ತಾವನೆ ಸಿದ್ದಪಡಿಸಿ ೬೫ ಟಿಎಂಸಿ ಮೇಕೆದಾಟು ಅಣೆಕಟ್ಟು ಕಟ್ಟಬೇಕೆಂದು ಹೇಳಿ ಕೇಂದ್ರ ಜಲ ಆಯೋಗಕ್ಕೆ ಹಾಗೂ ಸದರನ್ ರಾಜ್ಯ ಆಯೋಗಕ್ಕೆ ಮನವಿ ನೀಡಿದ್ದೇವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಬೇರೆಯಲ್ಲ. ಕೃಷ್ಣ ಮತ್ತು ಕಾವೇರಿ ನಮಗೆ ಎರಡು ಕಣ್ಣುಗಳಿಂದ್ದತೆ ಎಂದರು.
ಶಾಸಕ ಹರೀಶ್ ಗೌಡ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕಾಡಾ ನಿಗಮದ ಅಧ್ಯಕ್ಷ ಮರಿಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯರಾದ ನಾಗಭೂಷಣ್, ಸಿದ್ದಪ್ಪ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲತಾಸಿದ್ಧಶೆಟ್ಟಿ ಮತ್ತಿತರರು ಹಾಜರಿದ್ದರು.



