ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವದ ಮುನ್ನವೇ ಕಾವೇರಿದ ವಾತಾವರಣ ನಿರ್ಮಾಣವಾಗುತ್ತಿದೆ -ಗಡಿನಾಡ ಬೆಳಗಾವಿ ರಾಜ್ಯೋತ್ಸವದ ಸಂಭ್ರಮಕ್ಕೆ ಸಜ್ಜಾಗಿರುವ ಈ ವೇಳೆಯಲ್ಲೇ ನಾಡದ್ರೋಹಿ ಎಂಇಎಸ್ ಸಂಘಟನೆಯವರು “ಕರಾಳ ದಿನ”ದ ಹೆಸರಿನಲ್ಲಿ ಮತ್ತೆ ನಾಡದ್ರೋಹದ ನಾಟಕಕ್ಕೆ ವೇದಿಕೆ ಸಿದ್ಧಪಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ಮೇಲ್ನೋಟಕ್ಕೆ “ಅನುಮತಿ ಇಲ್ಲ” ಎನ್ನುತ್ತಿದ್ದರೂ, ಅವರ ನಿಲುವು “ಮೌನ ಸಮ್ಮತಿ’ಯಂತೆಯೇ ಕಾಣುತ್ತಿದೆ. ನಾಡದ್ರೋಹಿಗಳ ಚಟುವಟಿಕೆಗಳ ಮೇಲೆ ಸ್ಪಷ್ಟ ಕ್ರಮಕೈಗೊಳ್ಳದಿರುವ ಪೊಲೀಸರ ಈ ನಿಷ್ಕ್ರಿಯತೆ ಈಗ ಕನ್ನಡ ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.
ಕರಾಳ ದಿನಕ್ಕೆ ಬ್ರೇಕ್ ಹೇಗೆ?
ಕರವೇ ಸೇರಿದಂತೆ ಹಲವಾರು ಕನ್ನಡ ಸಂಘಟನೆಗಳು ಈ ಬಾರಿ ನಾಡದ್ರೋಹಿ ಕರಾಳ ದಿನದ ಚಟುವಟಿಕೆಗೆ ತಿರುಗೇಟು ನೀಡಲು ಸಜ್ಜಾಗಿವೆ.
ಮೂಲಗಳ ಪ್ರಕಾರ, “ಕರಾಳ ದಿನ”ಕ್ಕೆ ಪೊಲೀಸರು ಮೌನ ಸಮ್ಮತಿ ಸೂಚಿಸಿದರೆ ಕರವೇ ಕಾರ್ಯಕರ್ತರು ನೇರವಾಗಿ ಸ್ಥಳಕ್ಕೆ ನುಗ್ಗಿ ತಡೆ ಮಾಡಲು ನಿರ್ಧರಿಸಿದ್ದಾರೆ.
ಈ ಹಿಂದೆ ಮಹಾಮೇಳಾವ್ ಸಂದರ್ಭದಲ್ಲಿ “ಕರವೇ ನುಗ್ಗಿತ್ತು., ಈ ಬಾರಿ ‘ಕರಾಳ ದಿನ’ಕ್ಕೆ ಅನುಮತಿ ನೀಡಿದರೆ ಮತ್ತೆ ನುಗ್ಗುತ್ತೇವೆ, ತಡೆಯುತ್ತೇವೆ! ಎಂದು ಕರವೇ ಅಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.

ಕರವೇ ಗೌಡರ ಆಗಮನ
ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ನಾರಾಯಣಗೌಡರು ರಾಜ್ಯೋತ್ಸವದಂದು ಬೆಳಗಾವಿಗೆ ಬರುವ ಆಧ್ಯತೆಗಳು ಹೆಚ್ಚಾಗಿವೆ.
ಇತ್ತೀಚೆಗೆ ನಡೆದ ಕನ್ನಡ ದೀಕ್ಷೆ ಕಾರ್ಯಕ್ರಮ ದಲ್ಲಿ ಕರಾಳ ದಿನಕ್ಕೆ ಅನುಮತಿ ಕೊಡಬಾರದು. ಒಂದು ವೇಳೆ ಕರಾಳ ದಿನ ಮಾಡಿದರೆ ಅದನ್ನು ತಡೆಯುವ ಕೆಲಸವನ್ನು ಕರವೇ ಸೇನಾನಿಗಳು ಮಾಡಬೇಕು ಎಂದು ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಲಿದ್ದಾರೆಂದು ಗೊತ್ತಾಗಿದೆ.

ಅದ್ದೂರಿ ಸಿದ್ದತೆ..
ಇದೆಲದರ ನಡುವೆ ಕರ್ನಾಟಕ ರಾಜ್ಯೋತ್ಸವ ಕ್ಕೆ ಗಡಿನಾಡು ಬೆಳಗಾವಿ ಸಿಂಗಾರಗೊಳ್ಳತೊಡಗಿದೆ.
ಕಿತ್ತೂರು ಚೆನ್ನಮ್ಮನ ಮೂರ್ತಿ ಅಲಂಕಾರ ಒಂದು ಕಡೆ ನಡೆದಿದ್ದರೆ ಮತ್ತೊಂದು ಕಡೆಗೆ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯೋತ್ಸವ ಸಂಬಂಧ ವಿಶೇಷ ಟೀ ಶರ್ಟಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಒಟ್ಟಾರೆ ಬೆಳಗಾವಿಯಲ್ಲಿ ಎಂಇಎಸ್ ಸದ್ದಡಗಿಸಿ ಕನ್ನಡ ಹಿರಿಮೆ ಇನ್ನಷ್ಟು ಹೆಚ್ಚಳ ಮಾಡುವ ಹೊಣೆ ಪೊಲೀಸರ ಮೇಲಿದೆ.
ಕಾದು ನೋಡಬೇಕು.



