ವರದಿ :ಸ್ಟೀಫನ್ ಜೇಮ್ಸ್.
ಭಾರತವೆಂಬ ಈ ಪುಣ್ಯದ ನೆಲದಲ್ಲಿ ಜನಿಸಿದವರು ಯಾರೂ ಮಹಾತ್ಮಾ ಗಾಂಧೀಜಿಯವರನ್ನು ಅನುದಿನವೂ ನೆನೆಯದೇ ಇರಲು ಸಾಧ್ಯವೇ ಇಲ್ಲ. ಅಂತಹ ಮೇರು ನಾಯಕ ನಮ್ಮ ರಾಷ್ಟ್ರಪಿತ. ಅವರು ಈ ನಮ್ಮ ಕರುನಾಡಿನಲ್ಲಿ ಓಡಾಡಿದ್ದರು, ನಮ್ಮನ್ನು ಜಾಗೃತಗೊಳಿಸಿದ್ದರು. ಸ್ವಾತಂತ್ರ್ಯದ ಬೀಜ ಬಿತ್ತಿದ್ದರು ಎಂಬುದೆಲ್ಲಾ ಮೈನೆವರೇಳಿಸುವ ಸಂಗತಿ.ಕನ್ನಡಿಗರು ಮರಾಠಿಗರು ಕೂಡಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.ಇಂದು ಭಾಷೆ ಮತ್ತು ಗಡಿ ವಿವಾದಕ್ಕೆ ಬೆಳಗಾವಿಯನ್ನು ಗುರಿಮಾಡುವುದು ಸರಿಯಲ್ಲ.ಬೆಳಗಾವಿಯಲ್ಲಿ ಪಂಚ ಭಾಷಿಕ ಜನರು ಎಲ್ಲ ಧರ್ಮ ಜನಾಂಗ ಜಾತಿಯ ನಾವೆಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ.
1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಈ ನೆಪದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ, ಮಹಾತ್ಮ ಗಾಂಧೀಜಿ ಆವರಿಸಿಕೊಳ್ಳತ್ತಾರೆ. ನಮ್ಮವರ ಹೋರಾಟದ ಕಿಚ್ಚು ಎಲ್ಲಿಲ್ಲದಂತೆ ಕಾಡುತ್ತದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದು, ನಮ್ಮ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ. ಇದು ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನವೂ ಹೌದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೇತೃತ್ವದಲ್ಲಿ ನಡೆದ ಮೊತ್ತ ಮೊದಲ ರಾಷ್ಟ್ರೀಯ ಕಾರ್ಯಕ್ರಮ. ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತ ಚಾಲನೆ ನೀಡಿದ. ಪ್ರೇರಣೆ ನೀಡಿದ ಅಧಿವೇಶನ ಎಂದು ಶ್ರೀ ಅಶೋಕ ಚಂದರಗಿ ನುಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ ಹಾಗೂ ಎಕ್ಸಪರ್ಟ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯ . ಬೆಳಗಾವಿ ಇವರ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಮಾಲಿಕೆ -೧೨ ಕಾರ್ಯಕ್ರಮ
ಗುರುವಾರ, ದಿನಾಂಕ: ೩೦- ೧೦-೨೦೨೫ ದಂದು ಎಕ್ಸಪರ್ಟ ಪಿ.ಯು.ಸಿ ಕಾಲೇಜು ಸಭಾಂಗಣ. ಡಾ .ಬಿ.ಡಿ ಜತ್ತಿ ಕಾಲೇಜು ಆವರಣ. ಸಿವಿಲ್ ಆಸ್ಪತ್ರೆ ರೋಡ್ ,ಅಯೋಧ್ಯಾ ನಗರ .ಬೆಳಗಾವಿಯಲ್ಲಿ ಯಶಸ್ವಿಯಾಗಿ ಜರುಗಿತು.



