ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ
ಅನುಮತಿ ಇಲ್ಲದೆ ಎಂಇಎಸ್ ನವರು ಕರಾಳ ದಿನಾಚಾರಣೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಕಾನೂನು ರೀತಿಯಲ್ಲಿಯೇ ಬಿಸಿ ಮುಟ್ಟಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಿನ್ನೆ ಬಂದು ಕರಾಳ ದಿನಾಚಾರಣೆ ಆಚರಿಸಲು ಅನುಮತಿ ಕೋರಿ ಬಂದಿದ್ದರು. ಆದರೆ ಅವರಿಗೆ ಅನುಮತಿ ಕೊಟ್ಟಿಲ್ಲ. ಆದರೆ ಇಂದು ಏಕಾಏಕಿ ಕಾನೂನು ಉಲ್ಲಂಘನೆ ಮಾಡಿ ಕರಾಳ ದಿನಾಚಾರಣೆ ಮಾಡಿದ್ದಾರೆ. ಅವರಿಗೆ ಕಾನೂನು ಮೂಲಕವೇ ಬಿಸಿ ಮುಟ್ಟಿಸುವುದಾಗಿ ಎಚ್ಚರಿಕೆ ನೀಡಿದರು.
ಎಂಇಎಸ್ ಮುಖಂಡ ಶುಭಂ ಸೇಳಕೆ ಮೇಲೆ ಪ್ರಚೋಧನಕಾರಿ ಭಾಷಣ ಮಾಡದಂತೆ ಐದು ಬಾಂಡ್ ಪಡೆಯಲಾಗಿದೆ. ಬಾಂಡ್ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಶುಭಂ ಸೇಳಕೆ 5 ಲಕ್ಷ ಜಮಾ ಮಾಡಬೇಕು ಇಲ್ಲ ಜೈಲಿಗೆ ಹೋಗಬೇಕು ಎಂದು ಖಡಕಾಗಿ ಹೇಳಿದರು.
ಮಾಳಮಾರುತಿ ಸಿಪಿಐ ಜೆ.ಎಂ.ಕಾಲೆಮಿರ್ಚಿ ಸೇಳಕೆ ಜೊತೆಗೆ ಸೆಲ್ಪಿ ತೆಗೆದುಕೊಂಡ ವಿಚಾರ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂರು ಜನ ಮಹಾರಾಷ್ಟ್ರ ನಾಯಕರನ್ನು ಕೊಲ್ಲಾಪುರ ಗಡಿ ಭಾಗದಲ್ಲಿ ಅವರನ್ನು ತಡೆದಿದ್ದಾರೆ. ಒಂದು ವೇಳೆ ನಗರ ಪ್ರವೇಶ ಮಾಡಿದರೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.



