ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ
ರಾಜ್ಯೋತ್ಸವದಂದೇ ಪೊಲೀಸ್ ಇಲಾಖೆ ಅನುಮತಿ ಇಲ್ಲದೇ ಕರಾಳ ದಿನದ ಮೆರವಣಿಗೆ ನಡೆಸಿದ. 36ಜನ ನಾಡದ್ರೋಹಿಗಳ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಮಾರ್ಕೆಟ ಪೊಲೀಸ್ ಠಾಣೆಯ ಪಿಎಸ್ ಐ ವಿಠಲ ಹಾವನ್ನವರ ಅವರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.
ಬಿಎಸ್ ಕಾಯ್ದೆ 2023 ಸೆಕ್ಷನ್ ೧(ಎ), ೧೯೭, ೨೯೭, ೩೯೨, ೩೯೪, ೩೯೦ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಾಜಿ ಶಾಸಕ ಮನೋಹರ ಕಲ್ಲಪ್ಪ ಕಿಣೇಕರ, ಮಾಲೋಜಿರಾವ್ ಅಷ್ಟೆಕರ, ಪ್ರಕಾಶ ಮರಗಾಳಿ,ಶುಭಂ ಶೆಳಕೆ,ರಮಾಕಾಂತ ಕೊಂಡುಸ್ಕರ, ರಣಜಿತ್ ಪಾಟೀಲ, ಅಮರ ಯಳ್ಳೂರಕರ, ಗಜಾನನ ಪಾಟೀಲ,ನೇತಾಜಿ ಜಾಧವ, ಅಂಕುಶ ಅರವಿಂದ ಕೇಸರಕರ,ಮದನ್ ಬಾಮನೆ, ಪ್ರಶಾಂತ ಭಾತಖಾಂಡೆ,ಜಯೇಶ ಭಾತಖಾಂಡೆ, ಮಹೇಶ ನಾಯಿಕ, ಕಿರಣ ಗಾವಡೆ, ರೇಣು ಕಿಲ್ಲೇಕರ, ಸರಿತಾ ಪಾಟೀಲ, ಕಿರಣ ಉದ್ದರೆ, ಶ್ರೀಕಾಂತ ಕದಮ್, ಚಂದ್ರಕಾಂತ ಕೊಂಡುಸ್ಕರ ಸೇರಿದಂತೆ ಒಟ್ಟು 36 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.



