ವರದಿ :ಸ್ಟೀಫನ್ ಜೇಮ್ಸ್.
ರೈತರ ನಿಗದಿತ ಬೆಲೆಯ ಬೆಂಬಲಕ್ಕಾಗಿ, ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಹೋರಾಟ ಮಾಡಿದರು .
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಾತನಾಡಿ ,ಸರ್ಕಾರವು ಕಬ್ಬಿಗೆ ಪ್ರತಿ ಟನ್‌ಗೆ 3,500 ರೂಪಾಯಿ ಬೆಂಬಲ ಬೆಲೆಯಾಗಿ ಘೋಷಿಸಬೇಕು ಮತ್ತು ಬಾಕಿ ಪಾವತಿಗಳನ್ನು ವಿಳಂಬವಿಲ್ಲದೆ ಪಾವತಿಸಬೇಕು ನಾವು ಸರ್ಕಾರಕ್ಕೆ ಸಮಯ ನೀಡುತ್ತಿದ್ದೇವೆ. ಅದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ವಿಫಲವಾದರೆ, ರಾಜ್ಯಾದ್ಯಂತ ತೀವ್ರ ಆಂದೋಲನವನ್ನು ಪ್ರಾರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಈ ಸಂಧರ್ಭದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು .
ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲರಾದ ಸುರೇಶ ಗವನ್ನವರ,ಉಪಾಧ್ಯಕ್ಷರಾದ ಗಣೇಶ ರೋಕಡೆ ಹಾಗೂ ಜಿಲ್ಲಾ ಮುಖಂಡರುಗಳಾದ ಬಾಳು ಜಡಗಿ,ಹೋಳೆಪ್ಪಾ ಸುಲಧಾಳ,ಸುಧೀರ ಪಾಟೀಲ,ಮದು ಇಟಗಿ,ಸತೀಶ ಗುಡದವರ,ವಿಠಲ್ ಕಡಕೋಳ, ವಿಠಲ ಹಿಂಡಲ್ಗೇಕರ, ಭೂಪಾಲ್ ಅತ್ತು,ರಮೇಶ್ ಯರಗಣ್ಣವರ ಹಾಗೂ ತಾಲೂಕಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.



