Wednesday, November 12, 2025
Google search engine

Homeಸ್ಥಳೀಯಮೈಸೂರು ನಗರ ಪೊಲೀಸರಿಗೆ ಸಮಗ್ರ ಪ್ರಶಸ್ತಿ

ಮೈಸೂರು ನಗರ ಪೊಲೀಸರಿಗೆ ಸಮಗ್ರ ಪ್ರಶಸ್ತಿ

ಮೈಸೂರು : 2025ರ ದಕ್ಷಿಣ ವಲಯ ಪೊಲೀಸ್ 7ನೇ ಕರ್ತವ್ಯ ಕೂಟದಲ್ಲಿ ಮೈಸೂರು ನಗರ ಪೊಲೀಸರಿಗೆ ಸಮಗ್ರ ಪ್ರಶಸ್ತಿ ಲಭಿಸಿದೆ.

7ನೇ ರೇಂಜ್ ಪೊಲೀಸ್ ಡ್ಯೂಟಿ ಮೀಟ್ – 2025 ರಲ್ಲಿ ಮೈಸೂರು ನಗರ ಪೊಲೀಸರು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೀಟ್ನಲ್ಲಿ ಮೈಸೂರು ನಗರ ಪೊಲೀಸರು ಒಟ್ಟು 4 ಚಿನ್ನ, 6 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 11 ಪದಕಗಳನ್ನು ಗೆದ್ದಿದ್ದಾರೆ. ಈ ಕರ್ತವ್ಯಕೂಟದಲ್ಲಿ ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಮೈಸೂರು ಜಿಲ್ಲೆಯ ಪೊಲೀಸರು ಭಾಗವಹಿಸಿದ್ದರು. ಅತಿ ಹೆಚ್ಚು ಚಿನ್ನದ ಪದಕದ ಸಹಿತವಾಗಿ ಕೂಟದಲ್ಲಿ ಅತಿ ಹೆಚ್ಚು ಪದಕ ಪಡೆದ ಮೈಸೂರು ನಗರ ಪೊಲೀಸ್ ತಂಡ ಸಮಗ್ರ ಚಾಂಪಿಯನ್ಶಿಪ್ ತನ್ನದಾಗಿಸಿಕೊಂಡಿದೆ.

ಇದರ ಸಂಪೂರ್ಣ ವಿವರ ಇಲ್ಲಿದೆ

ಮೈಸೂರು ನಗರ ಪೊಲೀಸರ ಮುಡಿಗೆ ಸಮಗ್ರ ಪ್ರಶಸ್ತಿ
ಚಿನ್ನ 04 ಬೆಳ್ಳಿ 06 ಕಂಚು 01 ಲಭಿಸಿದ್ದು, ಸಿದ್ದೇಶ್ ಎಂ ಎಲ್ ಪಿಎಸ್ಐ 3 ಚಿನ್ನ 1 ಬೆಳ್ಳಿ 1 ಕಂಚು, ಸಂತೋಷ್ ಆರ್ಎಸ್ಐ ಬೆಳ್ಳಿ 01, ನಾಗೇಂದ್ರ ಎಎಚ್ಸಿ ಚಿನ್ನ 01 ಬೆಳ್ಳಿ 01, ಪುರುಷೋತ್ತಮ ಬೆಳ್ಳಿ 01, ಹೇಮಂತ್ ಬೆಳ್ಳಿ 02, ಉತ್ತಮ ಶ್ವಾನ ಪ್ರಶಸ್ತಿ – ಕೃಷ್ಣ ಶ್ವಾನ

ಪ್ರಶಸ್ತಿ ಪಡೆದ ಎಲ್ಲಾ ಸಿಬ್ಬಂದಿಗೂ, ಶ್ವಾನ ದಳದ ಸಿಬ್ಬಂದಿಗೂ ಹಾಗೂ ತರಬೇತಿ ನೀಡಿದ ತರಬೇತಿದಾರರಿಗೂ ಮೈಸೂರು ನಗರದ ಎಲ್ಲಾ ಪೊಲೀಸ್ ಸಿಬ್ಬಂದಿ ಪರವಾಗಿ ಪೊಲೀಸ್ ಕಮಿಷನರ್ ಅಭಿನಂದನೆಗಳನ್ನು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular