ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಹಾರ್ಟ್ ಸಂಸ್ಥೆ ಮೈಸೂರು, ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಎಚ್ ಡಿ ಕೋಟೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಎಚ್.ಡಿ. ಕೋಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಚ್ ಡಿ ಕೋಟೆ, ಪಾರ್ಥ ಬ್ರಿಕ್ಸ್ ಇಂಡಸ್ಟ್ರಿ ಜಕ್ಕಹಳ್ಳಿ, ನಂಬಿಕೆ ಫುಡ್ ಪ್ರಾಡಕ್ಟ್ ಪ್ರೈವೇಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಚ್ ಡಿ ಕೋಟೆ, ರೋಟರಿ ಕ್ಲಬ್ ಹೆಚ್.ಡಿ ಕೋಟೆ ,ವರ್ತಕರ ಮಂಡಳಿ ಎಚ್.ಡಿ ಕೋಟೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ಸಿಗಬೇಕು. ಪೌಷ್ಠಿಕ ಆಹಾರ ಪ್ರತಿಯೊಬ್ಬರಿಗೂ ಮುಖ್ಯ, ಆದಿವಾಸಿಗಳಿಗೆ ನಂದಿನಿ ತುಪ್ಪ ಹಾಗೂ ಪೌಷ್ಠಿಕ ಕಾಳುಗಳನ್ನು ನೀಡಲಾಗುತ್ತಿದೆ. ತಾಲೂಕಿನ ಅಭಿವೃದ್ಧಿಗಾಗಿ ಸಂಘ ಸಂಸ್ಥೆಗಳ ಮೂಲಕ ನ್ಯೂನ್ಯತೆಗಳನ್ನು ತಿಳಿದು ಕೆಲಸ ಮಾಡಬೇಕು. ಸಂಘ ಸಂಸ್ಥೆಗಳು ಜನಪರವಾಗಿ ಕೆಲಸ ಮಾಡಲಾಗುತ್ತಿದೆ.
ಹಾರ್ಟ್ ಸಂಸ್ಥೆಯು ಗರ್ಭಿಣಿ, ಬಾಣಂತಿಯರಿಗೂ ಚಿಕಿತ್ಸೆ ಸೌಲಭ್ಯ ನೀಡುತ್ತಿರುವುದು ಸ್ವಾಗತಾರ್ಹ, ಮುಂದಿನ ದಿನಗಳಲ್ಲಿ ಆದಿವಾಸಿಗಳು ವಾಸಿಸುವ ಸ್ಥಳದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸುವುದು ಉತ್ತಮ, ಈಗಾಗಲೇ ಹಾರ್ಟ್ ಸಂಸ್ಥೆಯ ವತಿಯಿಂದ ಸುಮಾರು 5000 ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು 800ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ಸಂಸ್ಥೆಗೆ ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಹಾರ್ಟ್ ಸಂಸ್ಥೆಯು ಮೂರು ಚಿಂತನೆಗಳನ್ನು ಅವಲಂಬಿಸಿದೆ ಅದು ಆರೋಗ್ಯ, ಶಿಕ್ಷಣ ಪುನರ್ವಸತಿ. ಸಂಸ್ಥೆಯು ಆರೋಗ್ಯಕ್ಕೆ ಮೊದಲನೆಯ ಆದ್ಯತೆ ಕೊಟ್ಟಿದ್ದು ಆರೋಗ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಅತಿ ಹೆಚ್ಚಾಗಿ ಸಂಭವಿಸುತ್ತಿದೆ ಬಹುತೇಕ ಜನರು ಆರೋಗ್ಯದ ಸಮಸ್ಯೆ ಮೂರನೇ ಹಂತ ನಾಲ್ಕನೇ ಹಂತಕ್ಕೆ ತಲುಪಿದಾಗ ಆಸ್ಪತ್ರೆಗೆ ದಾಖಲಾಗುತ್ತಾರೆ ಇದನ್ನು ಮನಗಂಡು ನಾವು ನಮ್ಮ ಸಂಸ್ಥೆಯ ವತಿಯಿಂದ ಖಾಯಿಲೆಯ ಆರಂಭಿಕ ಹಂತದಲ್ಲಿ ರೋಗವನ್ನು ಕಂಡು ಹಿಡಿದು ಗುಣಪಡಿಸುವ ಕೆಲಸವನ್ನು ನಮ್ಮ ಸಂಸ್ಥೆಯು ಮಾಡುತ್ತಿದೆ ಈಗಾಗಲೇ ಸುಮಾರು 5000 ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಮಾಡಿದ್ದೇವೆ ಈ ದಿನ ಸುಮಾರು 250ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಶಿಬಿರದಲ್ಲಿ ಹೃದಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಶ್ವಾಸಕೋಶ, ದಂತ ತಪಾಸಣೆ, ಶ್ರವಣ ದೋಷ, ಸ್ತ್ರೀ ರೋಗ ತಪಾಸಣೆ, ಕಣ್ಣಿನ ತಪಾಸಣೆ, ಪೈಲ್ಸ್ ತಪಾಸಣೆ, ನರ ರೋಗ ತಪಾಸಣೆ ಸೇರಿದಂತೆ ಇನ್ನಿತರ ಸಾಮಾನ್ಯ ರೋಗಗಳ ಬಗ್ಗೆ ಸುಮಾರು 250ಕ್ಕೂ ಹೆಚ್ಚು ಜನರು ಇದರ ಸದುಪಯೋಗವನ್ನು ಪಡೆದುಕೊಂಡರು.
ಶಿಬಿರದಲ್ಲಿ ಅವಾಂಟ್ ಬಿ ಕೆ ಜಿ ಆಸ್ಪತ್ರೆ ಮೈಸೂರು, ನಾರಾಯಣ್ ಹೆಲ್ತ್, ಮೈಸೂರು, ವಿವೇಕಾನಂದ ಸ್ಮಾರಕ ಆಸ್ಪತ್ರೆ ಸರಗೂರು, ಎ ಎಸ್ ಜಿ ಕಣ್ಣಿನ ಆಸ್ಪತ್ರೆ ಮೈಸೂರು, ಸಿಪ್ಲ ಬ್ರೀತ್ ಫ್ರೀ ಮೈಸೂರು, ಶ್ರೀ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೆಚ್ ಡಿ ಕೋಟೆ, ಪಾರ್ವತಿ ಹೆಲ್ತ್ ಕೇರ್ ಹೆಚ್ ಡಿ ಕೋಟೆ ಭಾಗವಹಿಸಿದ್ದರು
ಶಿಬಿರದಲ್ಲಿ ತಾಲೂಕು ದಂಡಾಧಿಕಾರಿ ಶ್ರೀನಿವಾಸ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಟಿ ರವಿಕುಮಾರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕ ವ್ಯವಸ್ಥಾಪಕ ಪ್ರವೀಣ್ ಗೌಡರ್, ರೋಟರಿ ಕ್ಲಬ್ ಅಧ್ಯಕ್ಷ ಧರ್ಮೇಶ್, ವರ್ತಕರ ಮಂಡಳಿ ಅಧ್ಯಕ್ಷ ವಿನಯ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯೋಜನಾಧಿಕಾರಿ ಭಾಸ್ಕರ್,ನಿವೃತ ಶಿಕ್ಷಕ ಸ್ವಾಮಿ ಮಾಸ್ಟರ್, ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಪಿ.ಆರ್. ಓ ಬಂಗಾರ ಶೆಟ್ಟಿ, ಪಾರ್ಥ ಬ್ರಿಕ್ಸ್ ಇಂಡಸ್ಟ್ರಿ ಮಾಲೀಕ ದೀಪು ಅರಸ್, ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಕಾರ್ಯದರ್ಶಿ ರಮೇಶ್, ಪುರಸಭಾ ಸದಸ್ಯ ಮಿಲ್ ನಾಗರಾಜ್, ಡಿ.ಸಿ.ಸಿ ಸದಸ್ಯ ಪರಶಿವಮೂರ್ತಿ, ಬಿ ವಿ ಬಸವರಾಜು, ಜೀವಿಕ ಬಸವರಾಜು, ಕಾಂಗ್ರೆಸ್ ವಕ್ತಾರ ಅಶೋಕ್, ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಲೋಕೇಶ್ ಸೇರಿದಂತೆ ಸಾರ್ವಜನಿಕರು ಶಿಬಿರಾರ್ಥಿಗಳು ಹಾಜರಿದ್ದರು.



