ಹುಣಸೂರು : ಗ್ರಾಮಾಂತರ ಪತ್ರಕರ್ತರ ಹಿತ ಕಾಯುವುದಾಗಿ ನೂತನವಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಬಿ.ಟಿ.ವಿ. ಬ್ಯೂರೋ ಚೀಫ್ ಬಿ.ರಾಘವೇಂದ್ರ ತಿಳಿಸಿದರು.
ಮೈಸೂರಿನಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ರಾಘವೇಂದ್ರ ಅವರು ಹುಣಸೂರಿನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆ ಮತ್ತು ಆರು ತಾಲೂಕಿನ ನನ್ನ ಸಹೋದ್ಯೋಗಿಗಳು ರಾಜ್ಯ ಸಮಿತಿಗೆ ಕಳುಹಿಸಿದ್ದೀರಿ ಎಂತಹುದೇ ಸಂದರ್ಭ ಬಂದರೂ ನಿಮ್ಮ ಧ್ವನಿಯಾಗಿರುವೆ ಎಂದರು.
ಹಲವಾರು ವರುಷದ ಗ್ರಾಮಾಂತರ ಬಸ್ ಪಾಸ್ ಅವ್ಯವಸ್ಥೆಯ ಬಗ್ಗೆ ಅರಿವಿದ್ದು, ನೂತನವಾಗಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಾನಂದ ತಗಡೂರು ಅವರಿಗೆ ಮತ್ತು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪ್ರಭಾಕರ್ ಅವರಿಗೂ ಮಾಹಿತಿ ಇರುವುದರಿಂದ ಬಸ್ ಪಾಸ್ ಎಲ್ಲರಿಗೆ ಕೈಗೆಟಕುವಂತೆ ಅವರೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.
ಮೈ.ಜಿ.ಪ.ಸಂಘದ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ ರಾಘವೇಂದ್ರ ಕಳೆದ ಬಾರಿ ಕೂಡ ರಾಜ್ಯ ಸಮಿತಿಗೆ ಆಯ್ಕೆಯಾಗಿದ್ದರು. ಈ ಬಾರಿ ಮತ್ತೆ ಅವರೇ ಗೆದ್ದಿರುವುದರಿಂದ ಕೆಲಸ ಮಾಡಲು ಸುಲಭವಾಗಿದ್ದು ನಗರ ಮತ್ತು ಗ್ರಾಮಾಂತರ ಪತ್ರಕರ್ತರ ಪರ ನಿಲ್ಲಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ಮೈಸೂರು ಸ್ಥಾನಿಕ ಸಂಪಾದಕ ಸತ್ಯನಾರಾಯಣ ಮಾತನಾಡಿ ಎಲ್ಲರೊಂದಿಗೆ ಬೆರೆಯುವ ಸೌಜನ್ಯವಿರುವ ರಾಘವೇಂದ್ರ ಉತ್ತಮ ಕೆಲಸ ಮಾಡಲಿದ್ದಾರೆ. ಪತ್ರಕರ್ತ ಮಿತ್ರರು ಒಗ್ಗಟ್ಟಿನಿಂದ ಮತಹಾಕುವ ಮೂಲಕ ಶಕ್ತಿ ತುಂಬಿರುವುದು ಖುಷಿತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿಜಯ ಪತ್ರಿಕೆ ಮತ್ತು ರಾಜ್ಯ ಧರ್ಮ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಸಿ.ಎಂ.ಕಿರಣ್ ಕುಮಾರ್, ವಿಶ್ವದೂತ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ, ಹುಣಸೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್, ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಉಪಾಧ್ಯಕ್ಷ ಚಲುವರಾಜ್, ಮೈ.ಜಿ.ಪ.ಸಂಘದ ಕಾ.ಸ.ಸದಸ್ಯ ದಾರಾ ಮಹೇಶ್, ಪತ್ರಕರ್ತರಾದ, ಹೆಚ್.ಕೆ.ಕೃಷ್ಣ, ಕೆ.ಕೃಷ್ಣ, ಶಿವಕುಮಾರ್ ವಿ .ರಾವ್, ಸಚ್ಚಿತ್, ಪ್ರತಾಪ್ , ಸಂಪತ್, ಸ್ವಾಮೀಗೌಡ, ಮನು ಕುಮಾರ್, ಯೋಗಾನಂದ್, ಜಗದೀಶ್ , ಶಂಕರ್, ಜಯರಾಂ, ರಫೀಕ್ , ರವಿ ಇದ್ದರು.



