ಹುಣಸೂರು: ಸಹಕಾರಿ ಕ್ಷೇತ್ರ ಜಿಲ್ಲೆ ಮತ್ತು ರಾಜ್ಯದಲ್ಲಿ 72 ವಸಂತಗಳಿಂದಲೂ ಜನತೆಗೆ ಸಹಕಾರಿಯಾಗಿ ಕೆಲಸಮಾಡಿ ಆರ್ಥಿಕ ಶಕ್ತಿಯಾಗಿ ನೆಲೆಯೂರಿದ್ದು, ರೈತರ ಆಶಾ ಭಾವನೆಗಳಿಗೆ ಸೇತುವೆಯಾಗಿ ನಿಂತಿದೆ ಎಂದು ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 19 .11.ರ ಬೆಳಿಗ್ಗೆ 10. ಗಂಟೆಗೆ. ನಗರದ ಮುನೇಶ್ವವರ ಕಾವಲ್ ಮೈದಾನದಲ್ಲಿ 72ನೇ, ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ,ಬೆಂಗಳೂರು, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ನಿ, ಸಹಕಾರ ಇಲಾಖೆ ಮೈಸೂರು, ಮೈಸೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮೈಸೂರು_ ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘ ಹಾಗೂ ಹುಣಸೂರು ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದರು.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಶಾಸಕ ಜಿ.ಡಿ.ಹರೀಶ್ ಗೌಡ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಲಿದ್ದಾರೆ.ಅಧ್ಯಕ್ಷತೆ ಜಿಲ್ಲಾ ಸಹಕಾರಿ ಹಾಕು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಕೆ.ಎಸ್ ಕುಮಾರ್ ವಹಿಸಲಿದ್ದಾರೆ.
ಅದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ನಗರದ ಆಂಜನೇಯ ದೇವಸ್ಥಾನದ ಬಳಿಯಿಂದ ಸುಮಾರು 1500 ಮಹಿಳೆಯರೊಂದಿಗೆ ಕಳಸದ ಜೊತೆಗೆ ಪೂಜೆ ಸಲ್ಲಿಸಿ ಮೆರವಣಿಗೆ ಹೊರಡಲಾಗುವುದು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಹಕಾರಿಗಳಿಗೆ ಸನ್ಮಾನ. ಮೈ.ಜಿ.ಸ.ಹಾ.ಉ.ಸಂಘದ ಅಧ್ಯಕ್ಷ ಕೆ.ಈರೇಗೌಡ, ಹಾಗೂ ಜಿಲ್ಲಾ ಸಹಕಾರ ಯುನಿಯನ್ ಉಪಾಧ್ಯಕ್ಷ ಬಿ.ಎನ್. ಸದಾನಂದ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.
ಮುಖ್ಯ ಅಥಿಗಳಾಗಿ, ಮೈ.ಜಿ.ಸ.ಹಾ.ಉ.ಸಂಘದ ನಿರ್ದೇಶಕ ಎ.ಟಿ.ಸೋಮಶೇಖರ್, ಕೆ.ಉಮಾಶಂಕರ್, ಶ್ರೀ ಮತಿ ಶಿವಗಾಮಿ, ಕೆ.ಜಿ.ಮಹೇಶ್, ಎಸ್.ರಾಮಕೃಷ್ಣೇಗೌಡ, ಮಹದೇವಸ್ವಾಮಿ, ಗದ್ದಿಗೆ ಸೂರ್ಯಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಹೆಚ್.ಪ್ರೇಮ್ ಕುಮಾರ್, ಹೆಚ್.ಆರ್.ಉದಯ ಕುನಾರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ತಾಲೂಕಿನ ಜನತೆಗೆ ಆರೋಗ್ಯ ಸಿಗಬೇಕು ಎಂಬ ಕಾರಣಕ್ಕೆ ನುರಿತ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಅದರ ಸದುಪಯೋಗ ಪಡಿಸಬೇಕಾಗಿ ಜನತೆಗೆ ಮತ್ತು ಸಹಕಾರಿ ಕುಟುಂಬಕ್ಕೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹೆಚ್. ಪ್ರೇಮ್ ಕುಮಾರ್, ಉಪಾಧ್ಯಕ್ಷ ಹೊನ್ನಪ್ಪ ರಾವ್ ಕಾಳಿಂಗೆ, ನಿರ್ದೇಶಕರಾದ ಆಸ್ವಾನ್ ಕೆಂಪೇಗೌಡ, ಹೆಚ್.ಜಿ.ವೆಂಕಟೇಶ್, ಮಹೇಶ್, ರೇವಣ್ಣ, ಸೋಮಶೇಖರ್, ಇಂದುಕಲಾ ಶ್ರೀ ಗೌಡ, ಮಂಗಳ ಗೌರಿ, ಹಾಗೂ ಅಧಿಕಾರಿಗಳಾದ ಸೂಪವೇಜರ್ ಗೌತಮ್, ಇಶಾಂತ್, ಅಂಜಲಿ, ಸುಮಂತ್,ಆನಂದ್ ಇದ್ದರು.



