ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡಿದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದೇನೆ ಹೊರತು ಹಳೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವ ದರ್ದು ನನಗೆ ಬಂದಿಲ್ಲ ನನಗೂ ಅರಿವಿದೆ ಎಂದು ಶಾಸಕ ಡಿ ರವಿಶಂಕರ್ ತಿರುಗೇಟು ನೀಡಿದರು.
ಲಾಲನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಐದು ಲಕ್ಷದ ಕಾಂಪೌಂಡ್ ನಿರ್ಮಾಣ ಹಾಗೂ 25 ಲಕ್ಣದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
2022-23 ನೇ ಸಾಲಿನಲ್ಲಿ ನೀವು ಹತ್ತು ಕೋಟಿ ವೆಚ್ಚದ ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದರೇ ಕಾಮಗಾರಿ ಏಕೆ ಪ್ರಾರಂಭಿಸಲಿಲ್ಲ, ನಿಮ್ಮ ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದರೇ ಅಗ್ರಿಮೆಂಟ್ ಏಕೆ ಮಾಡಲಿಲ್ಲ, ಎಂದು ಪ್ರಶ್ನೆ ಮಾಡಿದರು.
ಹತ್ತು ಕೋಟಿ ಕಾಮಗಾರಿಗೆ ನೆನೆಗುದ್ದಿಗೆ ಬಿದ್ದಾಗ ನಾನು ಬದಲಿ ಕಾಮಗಾರಿ ಹೆಸರು ಸೇರಿಸಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹಲವಾರು ಬಾರಿ ಅಲೆದು ಅನುಮೋದನೆ ಮಾಡಿಸಿ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ದಾಖಲೆಗಳನ್ನು ಮಾಧ್ಯಮದವರಿಗೆ ಹಾಗೂ ಲಾಲನಹಳ್ಳಿ ಗ್ರಾಮಸ್ಥರಿಗೆ ಪ್ರಕಟಿಸಿದರು.
ಇದಕ್ಕೂ ಮೊದಲು ಶಾಸಕ.ಡಿ.ರವಿಶಂಕರ್ ಲಾಲನಹಳ್ಳಿ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಶ್ರೀ ಸಿದ್ದೇಶ್ವರ ದೇವಸ್ಥಾನಕ್ಜೆ ನಾನು ಐದು ಲಕ್ಷ ಅನುದಾನ ಹಣ ನೀಡಿರುವುದು ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಕ್ಕೆ ಮತಯಾಚನೆಗೆ ಬಂದ ಸಂದರ್ಭದಲ್ಲಿ ಗ್ರಾಮದ ಮುಖಂಡರು ಶಾಸಕರಾದ ಮೇಲೆ ಅನುದಾನ ಹಾಕಿ ಎಂದು ಮನವಿ ಮೇರೆಗೆ ದೇವಸ್ಥಾನದ ಅಭಿವೃದ್ಧಿಗೆ ಕ್ಷೇತ್ರದ ಶಾಸಕನಾಗಿ ಅನುದಾನ ಹಣ ನೀಡಿದ್ದೇನೆ ಇದರಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದರು. ಅಭಿವೃದ್ಧಿ ಕೆಲಸಕ್ಕೆ ಕೈಜೊಡಿಸುವ ಬದಲು ಎಲ್ಲಾ ಕಡೆಗಳಲ್ಲಿ ಜೆಡಿಎಸ್ ಪಕ್ಷದವರು ಅನಗತ್ಯವಾಗಿ ಗದ್ದಲ ಮಾಡುತ್ತಿದ್ದಾರೆ, ನೀವು ಶಾಸಕರಾಗಿದ್ದ ವೇಳೆ ನಾನು ಮತ್ತು ಕಾರ್ಯಕರ್ತರು ಹದಿನೈದು ವರ್ಷಗಳು ಯಾವುದೇ ತೊಂದರೆ ಕೊಡಲಿಲ್ಲ ಇದನ್ನು ನೀವು ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳ ಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಸಲಹೆ ನೀಡಿದರು.
ತಾ.ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ತಾ.ಪಂ.ಮಾಜಿ ಸದಸ್ಯ ಹಾಡ್ಯ ಮಹದೇವ ಸ್ವಾಮಿ, ಅಖಿಲಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕೆಂಪರಾಜು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಮಾತನಾಡಿ ಗ್ರಾಮದಲ್ಲಿ ಸಮಾಜವನ್ನು ಹೊಡೆದಾಡುವ ಪರಿಸ್ಥಿತಿಯನ್ನು ಜಾದಳದವರು ಮಾಡುತ್ತಿದ್ದಾರೆ ಇದು ನಿಮಗೆ ಶೋಬೆ ತರುವುದಿಲ್ಲ, ಗ್ರಾಮಕ್ಕೆ ಪೊಲೀಸ್ ತುಕಡಿ ಬಂದಿದೆ ಇದಕ್ಕೆ ಮೂಲ ಜಾದಳ ಮುಖಂಡರು ಕಾರಣರು ಎಂದು ಜಾದಳ ಪಕ್ಷದ ವಿರುದ್ದ ಗುಡುಗಿದರು.
ಜಿ.ಪಂ.ಮಾಜಿ ಸದಸ್ಯರಾದ ಮಾರ್ಚಹಳ್ಳಿ ಶಿವರಾಮ್, ಸಿದ್ದಪ್ಪ, ಮೈಮುಲ್ ನಾಮಕರಣ ಸದಸ್ಯೆ ಮಲ್ಲಕಾ ರವಿಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಗ್ರಾ.ಪಂ.ಸದಸ್ಯರಾದ ಗುರು, ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಜೆ.ರಮೇಶ್, ಉದಯ್ ಶಂಕರ್, ಎಂ.ಎಸ್.ಮಹದೇವ್, ತಾ.ಕಾಂಗ್ರೆಸ್ ವಕ್ತಾರ ಜಾಬೀರ್, ವೀರಶೈವ ಮುಖಂಡರಾದ ಬೋಜರಾಜ್, ಗಿರೀಶ್, ಮನೋಜ್, ದಲಿತ ಮುಖಂಡ ಜಯಣ್ಣ ಹಾಗೂ ಗ್ರಾಮದ ಮುಖಂಡರು ಇದ್ದರು.



