ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನನ್ನ ಅಧಿಕಾರ ಅವಧಿಯಲ್ಲಿ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಎರಡು ತಾಲೂಕುಗಳ ಎಲ್ಲಾ ಗಡಿಭಾಗಗಳ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಹರಂಬಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ 50 ಲಕ್ಷಗಳ ವೆಚ್ಚದ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 10 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಅನೇಕ ಗಡಿ ಪ್ರದೇಶಗಳು ಅಭಿವೃದ್ಧಿ ಕಾಣದೆ ನಿರ್ಲಕ್ಷಕ್ಕೆ ಒಳಗಾಗಿದ್ದು ಅವುಗಳ ಅಭಿವೃದ್ಧಿಯಿಂದ ಕ್ಷೇತ್ರದ ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು.
ಇಂದು ಪುಣ್ಯ ಪೂಜೆ ನೆರವೇರಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸಿ ದೀರ್ಘಕಾಲ ಬಾಳಿಕೆ ಬರುವಂತೆ ಕ್ರಮ ವಹಿಸಬೇಕು ಅಲ್ಲದೇ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸ್ಥಳೀಯರು ಕಾಮಗಾರಿ ವೀಕ್ಷಣೆ ಮಾಡಿ ಎಚ್ಚರ ವಹಿಸಬೇಕು. ಪಟ್ಟಲದಮ್ಮ ದೇವಸ್ಥಾನ ರಸ್ತೆ, ಸೈಟ್ ಬೀದಿ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುವುದಲ್ಲದೆ ಮೂರು ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ದೊಡ್ಡರಗುಡಿಯಿಂದ ಜೈನಳ್ಳಿವರೆಗೆ 2.50 ಕೋಟಿ ವೆಚ್ಚದಲ್ಲಿ ಪಿಎಂಜಿಎಸ್ ವೈ ವತಿಯಿಂದ ರಸ್ತೆ ಅಭಿವೃದ್ಧಿ ಹರಂಬಳ್ಳಿ ಇಂದ ಕೆ.ಆರ್.ಪೇಟೆ ಗಡಿ ಭಾಗದವರೆಗೆ ನಬಾರ್ಡ್ ವತಿಯಿಂದ ಅನುದಾನ ಬಿಡುಗಡೆಯಾಗಲಿದ್ದು ಅದನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಎಂದರು.
ಈಗಾಗಲೇ ಕ್ಷೇತ್ರದ ಹಲವಾರು ಗ್ರಾಮಗಳು ಅಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದು ನಮ್ಮ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಮಾಡಿದ್ದು ಶೀಘ್ರದಲ್ಲಿ ಭವನಗಳ ನಿರ್ಮಾಣಕ್ಕೆ ಅನುದಾನ ಹಾಗೂ ಕೆಆರ್ ನಗರ ಪಟ್ಟಣದ ಇಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸರ್ಕಾರದಿಂದ ನಾಲ್ಕು ಕೋಟಿ ಶಾಸಕರ ನಿಧಿಯಿಂದ ಒಂದು ಕೋಟಿ ಹಾಕಲಾಗಿದ್ದು ಒಟ್ಟು ಐದು ಕೋಟಿ ಅನುದಾನದಲ್ಲಿ ಪವನ ಪೂರ್ಣಗೊಳಿಸಿ ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರ ಬೇಡಿಕೆಯಂತೆ ಈ ಗ್ರಾಮಕ್ಕೆ ಅಗತ್ಯ ಇರುವ ಬಸ್ ಸಂಚಾರ ವಿದ್ಯುತ್ ಸಮಸ್ಯೆ ಹಕ್ಕುಪತ್ರಗಳ ಸಮಸ್ಯೆ ಎಲ್ಲವನ್ನು ಮನಗೊಂಡಿದ್ದು ಶೀಘ್ರವಾಗಿಯೇ ಇತ್ಯರ್ಥಪಡಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಮಹದೇವಮ್ಮ, ಶೇಖರ್, ರಾಮಚಂದ್ರೇಗೌಡ, ವಿಎಸ್ ಎಸ್ ಎನ್ ಉಪಾಧ್ಯಕ್ಷೆ ಕವಿತಾ, ನಗರ ಕಾಂಗ್ರೆಸ್ ಅದ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ಕೆ.ಪಿ.ಪ್ರಸನ್ನ, ಸಂತೋಷ್, ವಿಜಯ್, ಲಕ್ಷ್ಮಣ, ಪದ್ಮಣ, ಸತೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಚೇತನ್, ಸತ್ಯವತಿ, ಶಾಸಕರ ಕಾರ್ಯದರ್ಶಿ ಹರಂಬಳ್ಳಿ ನವೀನ್, ಪಿಎಂಜಿಎಸ್ ವೈ ಎಇಇ ಜಿ.ಆರ್.ಮಂಜುನಾಥ್, ನಿರ್ಮಿತಿ ಕೇಂದ್ರದ ಎಇ ತುಳುಸಿ ಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು.



