ಹುಣಸೂರು: ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಉದ್ದೇಶ ಸ್ನೇಹ ಸೇತುವೆಯಾಗಿದ್ದು, ಕ್ರೀಡೆ ಮೂಲಕ ಗಟ್ಟಿಗೊಳಿಸುವ ಪ್ರಯತ್ನವಾಗಿದೆ ಎಂದು ವಲಯ 6 ರ ಸಹಾಯಕ ಗೌರ್ನರ್ ರಾಜೇಗೌಡ ತಿರುಮಲಾಪುರ ತಿಳಿಸಿದರು.
ಭಾನುವಾರ ನಗರದ ಹಸ್ಮುಖಿ ರಾಮಯ್ಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹುಣಸೂರು ರೋಟರಿ ಕ್ಲಬ್ ಆಯೋಜನೆ ಮಾಡಿದ್ದ ವಲಯ 6ರ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಲಯ ಮಟ್ಟದ ಕ್ರೀಡೆಗಳನ್ನು ಆಚರಿಸಿದಾಗ. ರೋಟರಿ ಸಂಸ್ಥಗೆ ಹಿರಿಮೆ ಹೆಚ್ಚಾಗಲಿದ್ದು. ಹುಣಸೂರು ರೋಟರಿ ಸಂಸ್ಥೆ ಮುಂಚೂಣಿಯಲ್ಲಿರುವುದರಿಂದ ತನ್ನಿರುವಿಕೆಯನ್ನು ತೋರಿಸಲು ಸಾಧ್ಯವಾಗಲಿದೆ ಎಂದರು.
ವಲಯ ಸೇನಾನಿ ಕೆ.ರಮೇಶ್ ಮಾತನಾಡಿ, ರೋಟರಿ ಸಂಸ್ಥೆ ಕೇವಲ ಮನು ಕುಲದ ಸೇವೆಗೆ ಸೀಮಿತವಾಗದೆ ಸದಸ್ಯರ ಆರೋಗ್ಯ ದೃಷ್ಠಿಯಿಂದ ಕ್ರೀಡೆಗೆ ಆದ್ಯತೆ ನೀಡಿ. ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸಲು ಪ್ರತಿವರ್ಷ ಕಬ್ಬಡಿ,ಕ್ರಿಕೆಟ್, ಬ್ಯಾಡ್ಮಿಂಟನ್ ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಹಕಾರಿಯಾಗಿದೆ ಎಂದರು.
ರೋಟರಿ ಶಾಲೆಯ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ವೃತ್ತಿಪರ ಜತೆಗೆ.ಸೇವಾ ಮನೋಭಾವನೆ ಇಟ್ಟುಕೊಂಡು. ಸೇವೆಗೆ ಒತ್ತು ನೀಡುವುದು ಸಾಮಾನ್ಯ ವಿಷಯವಲ್ಲ. ಸಮಾಜದಲ್ಲಿ ಹಸಿದವರಿಗೆ ಅನ್ನ, ಆರೋಗ್ಯ,ವಿದ್ಯೆ ಸಿಗಲು ವಿಶ್ವದೆಲ್ಲೆಡೆ ಶ್ರಮಿಸುತ್ತಿರುವ ರೋಟರಿ ಸಂಸ್ಥೆಯ ಪಾತ್ರ ದೊಡ್ಡದಿದೆ ಎಂದರು.
ಹುಣಸೂರು ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಮಾತನಾಡಿ, ಕ್ರೀಡೆ ಬದುಕಿನ ಒಂದು ಬಾಗವಾಗಿದ್ದು. ದೈನಂದಿನ ಜೀವನದ ನಡುವೆ ಒಂದಷ್ಟು ಸಮಯವನ್ನು ಓದಿನಷ್ಟೆ, ಯೋಗ, ನಡುಗೆ, ಕ್ರೀಡಾ ಚಟುವಟಿಕೆಗೆ ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ. ಆರೋಗ್ಯ ಸಮತೋಲನ ಸಿಗಲಿದ್ದು. ರೋಟರಿ ಅದಕ್ಕೆ ಒತ್ತು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಪಕ್ಕದ ಕೆ.ಆರ್.ನಗರ ರೋಟರಿ ಅಧ್ಯಕ್ಷ ದಯಾನಂದ್, ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಅಧ್ಯಕ್ಷ ಜಗನ್, ಪಿರಿಯಾಪಟ್ಟಣ ರೋಟರಿ ಐಕಾನ್ ಕ್ಲಬ್ಬಿನ ಅಧ್ಯಕ್ಷ ಸಂಪತ್, ರೊ.ರಾಜಶೇಖರ್, ರೊ.ಡಾ.ರಘು, ರೊ.ಚನ್ನಕೇಶವ್, ರೊ.ಡಾ.ಪ್ರಸನ್ನ ಕೆ.ಪಿ., ರೊ.ಜಿ.ವಿ.ಶ್ರೀ ನಾಥ್, ರೊ.ಸಿದ್ದೇಶ್ವರ್, ರೊ.ಚಂದ್ರೇಗೌಡ ಉಂಡವಾಡಿ, ರೊ.ವಕೀಲ ಲಕ್ಷ್ಮಿಕಾಂತ್ ,ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ ಇದ್ದರು.



