Monday, November 17, 2025
Google search engine

Homeರಾಜ್ಯಸುದ್ದಿಜಾಲಪೊಲೀಸ್ ರಾಜೇಂದ್ರ ಗೆ ಪಿ .ಎಚ್ .ಡಿ

ಪೊಲೀಸ್ ರಾಜೇಂದ್ರ ಗೆ ಪಿ .ಎಚ್ .ಡಿ

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ‘ಕರ್ನಾಟಕ ಪೊಲೀಸ್‌ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ರಾಜೇಂದ್ರ ಬಡೇಸಗೋಳ ಅವರಿಗೆ ಪಿ.ಎಚ್‌.ಡಿ ಪದವಿ ಪ್ರದಾನ ಮಾಡಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗರಾಜ ಹಳ್ಳಿಯವರ ರಾಜೇಂದ್ರ ಬಡೇಸಗೋಳ ಅವರಿಗೆ ಸಂಶೋಧನಾ ಮಾರ್ಗದರ್ಶಕರಾಗಿದ್ದರು. ಪ್ರಸ್ತುತ ರಾಜೇಂದ್ರ ಬಡೇಸಗೋಳ ಅವರು ಬೆಳಗಾವಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ‘ಹಿರಿಯ ಗುಪ್ತಚರ ಸಹಾಯಕ’ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ. ಗುಪ್ತಚರ ಇಲಾಖೆಯಲ್ಲಿ ಇವರ ದಕ್ಷ ಮತ್ತು ಅಪ್ರತಿಮ ಕಾರ್ಯ ಸೇವೆಗೆ 2022 ರಲ್ಲಿ ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular