ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಾಡು -ನುಡಿ – ಸಂಸ್ಕೃತಿಯ ಉಳಿವಿನ ಹೋರಾಟದ ವಿಚಾರ ಬಂದಾಗ ಆಟೋ ಚಾಲಕರ ಸಂಘಗಳು ಸಂಘಟಿತ ಹೋರಾಟ ನಡೆಸುತ್ತಾರೆ ಇವರ ಕನ್ನಡ ಅಭಿಮಾನವನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ ಹಳಿಯೂರು ಎಚ್.ಕೆ.ಮಧುಚಂದ್ರ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಶ್ರೀ ವಿನಾಯಕ ಆಟೋಚಾಲಕರ ಸಂಘದಿಂದ ಆಯೋಜಿಸಿದ್ದ 70ನೇ ಕನ್ನಡ ರಾಜೋತ್ಸವ ಕಾರ್ಯವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಹಳ್ಳಿಯಿಂದ ಪಟ್ಟಣ ಪ್ರದೇಶಕ್ಕೆ ಹೋಗುವರಲ್ಲಿ ಇಂದು ಕನ್ನಡ ಭಾಷೆ ಮರೆಯಾಗುತ್ತಿದ್ದು ಎಲ್ಲಿಯೇ ಹೋದರು ತಮ್ಮ ಮಾತೃ ಭಾಷೆ ಕನ್ನಡವನ್ನು ಮರೆಯ ಬಾರದು ಎಂದ ಅವರು ಈ ಮೂಲಕ ಕನ್ನಡ ಭಾಷೆಯ ಹಿರಿಯಮೆಯನ್ನು ಹೆಚ್ಚಿಸ ಬೇಕು ಜತಗೆ ಕನ್ನಡ ಬಾಷೆ ವಿಚಾರ ಬಂದಾ ಹೋರಾಟದ ಜತಗೆ ಜೀವ ಕೊಡಲು ಸಿದ್ದರಿರ ಬೇಕು ಎಂದರು.
ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು.ಎ.ಕುಚೇಲ್ ಮಾತನಾಡಿ ಕರ್ನಾಟಕ ಏಕೀಕರಣದ ಹಿನ್ನಲೆಯಲ್ಲಿ ಮೈಸೂರು ಸಂಸ್ಥಾನದ ಹೆಸರು ತೆಗೆದು ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡ ರಾಜೋತ್ಸವಕ್ಕೆ ಅರ್ಥ ಕೊಟ್ಟ ಕೀರ್ತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಲ್ಲಿಸುತ್ತದೆ ಎಂದು ಅವರು ಕನ್ನಡ ನಮ್ಮ ಹೃದಯದ ಭಾಷೆಯಾಗಿದ್ದು ಈ ರಾಜೋತ್ಸವ ಆಚರಣೆಯನ್ನು ಒಂದು ತಿಂಗಳು ಅಚರಣೆ ಮಾಡಿದರು ಸಾಲದು ವರ್ಷ ಪೂರ್ತಿ ಅಚರಿಸುವ ಮೂಲಕ ರಾಜೋತ್ಸವ ಅಚರಣೆಗೆ ಅರ್ಥ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಉದ್ಯಮಿ ಎಚ್.ಕೆ. ಮಧುಚಂದ್ರ ಅವರನ್ನು ಆಟೋ ನಿಲ್ದಾಣ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಚ್.ಆರ್.ಮಹೇಶ್, ಎಚ್.ಆರ್.ಕೃಷ್ಣಮೂರ್ತಿ, ಎಚ್.ಎಸ್.ಜಗದೀಶ್, ವಕೀಲ ಎಚ್.ಎಚ್.ಹರೀಶ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಭಾಸ್ಕರ್, ಯುವ ಜೆಡಿಎಸ್ ಮುಖಂಡ ಎಚ್.ಕೆ.ಮಧುಚಂದ್ರ, ಸಂಘದ ಅಧ್ಯಕ್ಷ ಪುರಿ ಮಂಜ, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಮಾಕ್ಸ್ ಸಂತೋಷ್, ಕಾರ್ಯದರ್ಶಿ ರವಿರಂಗಾ, ಸದಸ್ಯರಾದ ಮಧು, ಲೋಕೇಶ್, ಜಾವೀದ್, ಪಾಷ ವೆಂಕಟೇಶ್, ದೇವರಾಜ್, ಪುನೀತ್, ರೇವಣ್ಣ, ಚಂದ್ರ,ದೀಪು ಮುಖಂಡರಾದ ಟೈಲರ್ ಕೃಷ್ಣಪ್ಪ, ಮಟನ್ ಜಮೀಲ್, ಹೋರಿವಸಂತ್, ಡಿಪೋ ಪ್ರವೀಣ್, ಅಕ್ರಮ್, ಷರೀಪ್, ಅಕ್ಮಲ್ ಷರೀಪ್, ರಾಘವೇಂದ್ರ, ಟೈಲರ್ ಚೆಲುವ, ಬೆಣಗನಹಳ್ಳಿ ನಾಗೇಶ್, ಸ್ವೀಟ್ ಭದ್ರ,ಸೇರಿದಂತೆ ಮತ್ತಿತರರು ಹಾಜರಿದ್ದರು.



