ಕೊಪ್ಪಳ: ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡ್ತೆದ್ದೇವೆ. ಯಾರು ಈ ಸರ್ಕಾರವನ್ನು ಡಿಸ್ಟಬ್೯ ಮಾಡೋಕೆ ಆಗೋಲ್ಲ. ಸರ್ಕಾರ ಬೀಳಿಸುವಷ್ಟು ಕೆಳ ಮಟ್ಟದ ಜನ ನಾವಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಮಾತನಾಡಿದ ಅವರು, ಸಿಎಲ್ ಪಿ ಸಭೆಯಲ್ಲಿ ಶಾಸಕರು ಕ್ಷಮೆ ಕೇಳಿದ್ದಾರೆಂದು ಗೃಹ ಸಚಿವರು ಹೇಳಿದ್ದು ಮಾದ್ಯಮದಲ್ಲಿ ವರದಿಯಾಗಿತ್ತು. ಅದಕ್ಕೆ ನಾನು ಪರಮೇಶ್ವರ ಅವರಿಗೆ ಪ್ರಶ್ನೆ ಮಾಡಿದ್ದು ಸತ್ಯ. ಟ್ವಿಟ್ ಮಾಡಿದ್ದೆ, ಕ್ಷಮೆ ಕೇಳೋ ಪ್ರಶ್ನೆಯೇ ಬಂದಿಲ್ಲ ಅಂತ ಹೇಳಿದ್ದೆ. ಅದಕ್ಕವರು , ಬ್ರದರ್ ನಾನು ಆ ಅರ್ಥದಲ್ಲಿ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಲ್ಲಿ ಅಸಮಧಾನ ಎನ್ನೋದು ಇಲ್ಲ ಎಂದು ತಿಳಿಸಿದರು.
ಕೆಲವರು ಬಂದು ಶಾಸಕರ ಸಹಿ ಸಂಗ್ರಹ ಮಾಡಿದ್ರು. ಅದಕ್ಕೆ ನಾನು ಸಹಿ ಮಾಡಿದ್ದೇನೆ. ಆಡಳಿತ ಸುಧಾರಣೆಗಾಗಿ ಸಲಹೆ ನೀಡಿದ್ದೇವೆ. ಇನ್ನುಸಲಹೆ ನೀಡುತ್ತೇವೆ ಎಂದು ತಿಳಿಸಿದರು.
ಸಿಎಲ್ ಪಿ ಸಭೆ ಕರೆಯೋದಕ್ಕೆ ನಮ್ಮ ಬೈಲಾದಲ್ಲಿ ಅವಕಾಶವಿದೆ. ಶಾಸಕರು ಅದನ್ನ ಕೇಳಬಹುದು ಅಂತ ಸಭೆಯಲ್ಲಿ ಹೇಳಿದ್ದೇನೆ. ಅದನ್ನು ಸಕರಾತ್ಮಕವಾಗಿ ತಗೊಬೇಕು, ನಕರಾತ್ಮಕವಾಗಿ ತೆಗೆದುಕೊಳ್ಳಬಾರದು ಎಂದರು.
ನಮ್ಮಲ್ಲಿ ಹೊಸ ಸಚಿವರ ಮಧ್ಯೆ ಸ್ವಲ್ಪ ಸಮನ್ವಯದ ಕೊರತೆ ಇತ್ತು. ಅದಕ್ಕಾಗಿ ಸಮನ್ವಯ ಸಮೀತಿ ರಚನೆಯಾದ್ರೆ ತಪ್ಪೇನಿಲ್ಲ. ಅದ್ರಿಂದ ನಮ್ಮಂತ ಹಿರಿಯ ಶಾಸಕರಿಗೆ ಒಳ್ಳೆಯದಾಗುತ್ತೆ. ಈ ಭಾರಿ ಬಹಳಷ್ಟು ಜನ ಹಿರಿಯ ಶಾಸಕರು ಆಯ್ಕೆಯಾಗಿದ್ದೇವೆ. ಕೆಲ ಸಚಿವರ ತಂದೆಯವರ ಜೊತೆಗೂ ಕೆಲಸ ಮಾಡಿದ್ದೇವೆ. ಹೀಗಾಗಿ ಇವರ ಹತ್ತಿರ ಕೈಕಟ್ಟಿ ನಿಂತುಕೊಳ್ಳೋದಕ್ಕೆ ಸ್ವಲ್ಪ ಮುಜುಗರ ಆಗುತ್ತೆ ಎಂದು ಹೇಳಿದರು.
ಸಲಹೆ ಕೊಟ್ಡಿದ್ದಕ್ಕೆ ಅಸಮಧಾನ ಅಂತ ಅಲ್ಲ. ನಮ್ಮ ಮತ್ತು ಸಚಿವರ ಮಧ್ಯೆ ಯಾವುದೇ ಅಸಮಧಾನವಿಲ್ಲ. ಬಿ.ಆರ್ ಪಾಟೀಲರಿಗೂ ಸ್ಪಂದನೆ ಮಾಡಿದ್ದಾರೆ. ಕೆಲ ಸಚಿವರಿಗೆ ಅನುಭವದ ಕೊರತೆಯಿರುತ್ತೆ. ಪಾಪ ಅವರಿಗೂ ಸಮಯ ಬೇಕು ಎಂದರು.
ಐಎಎಸ್ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡ್ತಿಲ್ಲ
ಐಎಎಸ್ ಅಧಿಕಾರಿಗಳಿಗೆ ಲಾಗಾಮೇ ಇಲ್ಲ. ಸಚಿವರು, ಶಾಸಕರು ಬಂದ್ರೆ ಶಿಷ್ಟಾಚಾರ ಪಾಲನೆ ಮಾಡ್ತಿಲ್ಲ. ಹಿಂದಿನ ಸರ್ಕಾರದವರು ಹಾಗೇ ಮಾಡಿಟ್ಟಿದ್ದಾರೆ ಎಂದು ಕಿಡಿಕಾರಿದರು.
ದೆಹಲಿ ಸಭೆಗೆ ನಾನು ಹೋಗ್ತಿಲ್ಲ.
ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿರುವುದರಿಂದ ದೆಹಲಿ ಸಭೆಗೆ ನಾನು ಹೋಗ್ತಿಲ್ಲ.ನಂಗೇನು ಅಧೀಕೃತ ಅಹ್ವಾನ ಬಂದಿಲ್ಲ. ಇಲ್ಲಿನ ನಾಯಕರೇ ಹೇಳಿದ್ದರು. ನನಗೆ ದೊರೆತಿರುವ ಮಾಹಿತಿ ಪ್ರಕಾರ ಲೋಕಸಭೆ ಏಲೆಕ್ಷನ್ ಸಂಬಂಧ ಸಭೆ ಕರೆದಿದ್ದಾರೆ ಎಂದರು.