ಚಾಮರಾಜನಗರ: ಭಾರತದ 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಹೋರಾಟ ಅವಿಸ್ಮರಣೀಯ. ಉತ್ತರ ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಲಕ್ಷ್ಮೀಬಾಯಿ ಮೊದಲಿಗರು . ಬ್ರಿಟಿಷರ ವಿರುದ್ಧ ಘರ್ಜಿಸಿದ ದಿಟ್ಟ ಮಹಿಳೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈಹಿಂದ್ ಪ್ರತಿಷ್ಠಾನ , ಋಗ್ವೇದಿ ಯೂಥ್ ಕ್ಲಬ್ ಹಾಗೂ ಯುವ ಸಂಘಟನೆಗಳ ಒಕ್ಕೂಟ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜನ್ಮ ದಿನದಲ್ಲಿ ಮಾತನಾಡಿ, ಲಕ್ಷ್ಮೀಬಾಯಿ ಮೊದಲ ಹೆಸರು ಮಣಿಕರ್ಣಿಕ. ಬಾಲ್ಯದಲ್ಲಿಯೇ ಕುದುರೆ ಸವಾರಿ, ಯುದ್ಧ ವಿದ್ಯೆ, ಸೈನಿಕ ತರಬೇತಿ ಪಡೆದವರು. ಝಾನ್ಸಿ ದೊರೆ ಗಂಗಾಧರರಾವ್ ರವರನ್ನು ವಿವಾಹವಾಗಿ ಝಾನ್ಸಿಯ ರಾಣಿಯಾದರು. ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟಿತ್ತು. ನಂತರ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುದ್ಧ ಹೋರಾಡಿದ ರಾಣಿ ಬ್ರಿಟಿಷರಿಗೆ ಸಿಂಹಿಣಿ ಯಾದಳು. ಸೈನಿಕರಲ್ಲಿ ಸ್ಪೂರ್ತಿ ತುಂಬಿ ಹೋರಾಡಿದ ಧೀರ ಮಹಿಳೆ. ರಣರಂಗದಲ್ಲಿ ಹೋರಾಡುತ್ತಲೇ ಮಾಡಿದ ಝಾನ್ಸಿ ರಾಣಿಯ ಧೈರ್ಯ, ಸಾಹಸ ಎದೆಗಾರಿಕೆ ಭಾರತೀಯ ಮಹಿಳೆಯ ಪ್ರತೀಕವಾಗಿದ್ದಾರೆ. ರಾಣಿ ಲಕ್ಷ್ಮೀ ಬಾಯಿಯವರನ್ನು 1857 ಕ್ರಾಂತಿಯ ಜೋನ್ ಆಫ್ ಆರ್ಕ ಎಂದೇ ಕರೆಯಲಾಗಿದೆ ಎಂದರು.
ಯುವ ಸಂಘಟನೆ ಯ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ ಮಾತನಾಡಿ ಆದರ್ಶ ಸ್ವಾತಂತ್ರ ಹೋರಾಟಗಾರ ರಾದ ರಾಣಿಯ ಇತಿಹಾಸ ಮಾದರಿ. ಯುವ ಪೀಳಿಗೆ ದೇಶ ಭಕ್ತಿ ಹೊಂದಬೇಕು. ರಾಷ್ಟ್ರೀಯ ವೀರರ ಇತಿಹಾಸ ಅರಿಯಬೇಕು ಎಂದರು.
ಝಾನ್ಸಿ ರಾಣಿ ಲಕ್ಷ್ಮಿಯ ಬಾಯಿಯವರ ಇತಿಹಾಸದ ಕತೆಗಳನ್ನು ತಿಳಿಸಲಾಯಿತು.
ಋಗ್ವೇದಿ ಯೂತ್ ಕ್ಲಬ್ ಸದಸ್ಯರಾದ ಮಹೇಂದ್ರ, ಆದರ್ಶ, ರಕ್ಷಿತ್ ,ಸಂಜು, ಸೂರ್ಯ, ನಾಗೇಂದ್ರ, ಪ್ರಸಾದ್, ಶ್ರೀನಿವಾಸ ಇದ್ದರು.



