ಮಂಡ್ಯ: ಕಾಡಾನೆಗಳ ಗ್ಯಾಂಗ್ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಹಾಸ ಪಡುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಡ್ರೋನ್ ಸರ್ವೆ ಮೊರೆ ಹೋಗಿದ್ದಾರೆ.
ಡ್ರೋನ್ ಕ್ಯಾಮರಾ ಮೂಲಕ ಆನೆಗಳ ಓಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಚಿಕ್ಕಮುಲಗೂಡು-ದೊಡ್ಡಮುಲಗೂಡು ಗ್ರಾಮದಲ್ಲಿ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಚಿಕ್ಕಮುಲಗೂಡು ಜಮೀನಿನಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಕಬ್ಬಿನ ಗದ್ದೆಗೆ ನುಗ್ಗಿ ಬೆಳೆ ನಾಶ ಮಾಡಿವೆ.
ಕಳೆದ ವಾರದ ಹಿಂದೆಯೇ ಕನಕಪುರ ತಾಲೂಕಿನ ಸಾತನೂರು ಭಾಗದಿಂದ ಮದ್ದೂರಿಗೆ ಬಂದಿದ್ದ ಆನೆಗಳು, ಕಳೆದರೆಡು ದಿನಗಳಿಂದ ಶ್ರೀರಂಗಪಟ್ಟಣ, ಟಿ.ನರಸೀಪುರ ತಾಲ್ಲೂಕಿನ ವಿವಿದೆಡೆ ಸಂಚರಿಸಿ ಮಳವಳ್ಳಿ ಭಾಗಕ್ಕೆ ತೆರಳುತ್ತಿವೆ. ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ ಸೇರಿ ಹಲವು ಕಡೆ ರೈತರ ಬೆಳೆ ನಾಶ ಪಡಿಸಿವೆ.
ಈ ಹಿನ್ನೆಲೆ ಡ್ರೋನ್ ಕ್ಯಾಮರಾ ಮೂಲಕ ಆನೆಗಳ ಸರ್ವೆ ಮಾಡಲು ಅಧಿಕಾರಿಗಳ ಮುಂದಾಗಿದ್ದು, ಕ್ಯಾಮರಾ ಮೂಲಕ ಆನೆಗಳ ಚಲನವಲನಗಳನ್ನು ಗಮನಿಸಿ ಅರಣ್ಯದ ಕಡೆಗೆ ಓಡಿಸಲು ಪ್ರಯತ್ನಿಸಲಾಗುತ್ತಿದೆ.