ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶಾಲೆಗಳಲ್ಲಿ ಆಹಾರ ಮೇಳ ಮಾಡುವುದರಿಂದ ಮಕ್ಕಳಲ್ಲಿ ಅದರ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತದೆ ಎಂದು ತಹಸಿಲ್ದಾರ್ ರುಕಿಯಾ ಬೇಗಂ ಹೇಳಿದರು.
ಪಟ್ಟಣದ ಶ್ರೀ ಭೈರವೇಶ್ವರ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ತಿನ್ನುವಂತಹ ಆಹಾರ ಹೇಗಿರಬೇಕು. ಅದು ಯಾವ ಗುಣಮಟ್ಟದಿಂದ ಕೂಡಿರಬೇಕು ಹಾಗೂ ಅದಕ್ಕೆ ಇರುವ ಮೌಲ್ಯಗಳ ಬಗ್ಗೆ ಮಕ್ಕಳು ತಿಳಿಯಲು ಆಹಾರ ಮೇಳ ಅತ್ಯಂತ ಪ್ರಮುಖವಾದ ಕಾರ್ಯಕ್ರಮವಾಗಿದೆ ಎಂದರು.

ಮಕ್ಕಳು ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವ ಮೂಲಕ ಸದಾ ಕ್ರಿಯಾಶೀಲರಾಗಿರಲು ಇಂತಹ ಮೇಳಗಳು ಉಪಯುಕ್ತವಾಗಿವೆ ಎಂದರು. ಮೇಳದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ತಾವು ತಯಾರಿಸಿಕೊಂಡು ಬಂದಿದ್ದ ವಿವಿಧ ತಿಂಡಿ ಪದಾರ್ಥಗಳನ್ನು ಪ್ರದರ್ಶನ, ಮಾರಾಟ ಮಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ತಹಸಿಲ್ದಾರ್ ರುಕಿಯಾ ಬೇಗಂ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಭೈರವೇಶ್ವರ ಇಂಟರ್‌ನ್ಯಾಷನಲ್ ರ್ ನ್ಯಾಷನಲ್ ಸ್ಕೂಲ್‌ನ ಸ್ಕೂಲ್‌ನ ಗೌರವಾ ಗೌರವಾಧ್ಯಕ್ಷ ಎಸ್.ಕೆ. ರಮೇಶ್, ಕಾರ್ಯದರ್ಶಿ ತ್ರಿವೇಣಿ, ಮುಖ್ಯ ಶಿಕ್ಷಕಿ ಯಶಸ್ವಿನಿ, ಸಂಯೋಜಕಿ ಅರ್ಪಿತ ಸೇನ್, ಶಿಕ್ಷಕರುಗಳಾದ ಚಾಂದಿನಿ, ಹೀನ ಕೌಸರ್, ಲಕ್ಷ್ಮಿ, ಪವಿತ್ರ, ಅರ್ಪಿತ, ಸುಪ್ರೀತಾ, ಪ್ರೀತಿ, ರುಚಿತ, ಮಾರುತಿ, ಪ್ರಜ್ವಲ್, ಆಫ್ರಿನ್ ತಾಜ್, ಮಂಜುನಾಥ್, ಹರ್ಷಿತ, ಯೋಗಾನಂದ, ಅಶ್ವಿನಿ, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.



