Monday, November 24, 2025
Google search engine

Homeರಾಜ್ಯಸುದ್ದಿಜಾಲಗ್ರಂಥಾಲಯಗಳ ಸಂಖ್ಯೆ ಹೆಚ್ಚಿದರೆ ಸಮಾಜಮುಖಿ ಜನರ ಸಂಖ್ಯೆ ದ್ವಿಗುಣ: ಶಾಸಕ ಡಿ. ರವಿಶಂಕರ್

ಗ್ರಂಥಾಲಯಗಳ ಸಂಖ್ಯೆ ಹೆಚ್ಚಿದರೆ ಸಮಾಜಮುಖಿ ಜನರ ಸಂಖ್ಯೆ ದ್ವಿಗುಣ: ಶಾಸಕ ಡಿ. ರವಿಶಂಕರ್

ಸ್ವ-ಸಹಾಯ ಸಂಘಗಳ ಸಂಜೀವಿನಿ ಶೆಡ್ ಮತ್ತು ಗ್ರಂಥಾಲಯ ಉದ್ಘಾಟನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಂಥಾಲಯಗಳು ಹೆಚ್ಚಾದಷ್ಠು ಶಿಕ್ಷಿತರು ಮತ್ತು ಸಮಾಜ ಮುಖಿ ಜನರ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಡಿಜಿಟಲ್ ಗ್ರಂಥಾಲಯ ಮತ್ತು ಸ್ವ- ಸಹಾಯ ಸಂಘಗಳ ಎನ್ ಆರ್ ಎಲ್ ಎಂ ಸಂಜೀವಿನಿ ಶೆಡ್ ಉದ್ಘಾಟಿಸಿ ಮಾತನಾಡಿದರು‌.

ಗ್ರಾಮಗಳ ಯುವಕರು ಹಾಗೂ ಆಸಕ್ತರು ನಿತ್ಯ ನಿಗದಿತ ಅವದಿಯಲ್ಲಿ ಗ್ರಂಥಾಲಯಗಳಿಗೆ ಬೇಟಿ ನೀಡಿ ದಿನ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದಿಕೊಂಡು ಇತರರಿಗೂ ಜ್ಞಾನದ ದೀವಿಗೆ ಹಚ್ಚಬೇಕೆಂದರು.
ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ ಮತ್ತು ಶಾಸಕರ ನಿಧಿಯಿಂದ ಹೆಚ್ಚು ಹಣ ವ್ಯಯಿಸಿ ಮತ್ತಷ್ಟು ಗ್ರಂಥಾಲಯ ನಿರ್ಮಾಣ ಮಾಡಿಸುವುದಾಗಿ ತಿಳಿಸಿದ ಶಾಸಕರು ದೇವಾಲಯಗಳಿಗೆ ನೀಡುವಷ್ಠು ಆಧ್ಯತೆ ಮತ್ತು ಪ್ರಾಧಾನ್ಯತೆಯನ್ನು ಗ್ರಂಥಾಲಯಗಳಿಗೆ ನೀಡಬೇಕೆಂದರು.

ಜನ್ಮ ದಿನ ಮತ್ತು ಇತರ ಮೋಜಿನ ಕಾರ್ಯಕ್ರಮಗಳಿಗೆ ಅನಗತ್ಯವಾಗಿ ಹಣ ಪೋಲು ಮಾಡುವ ಬದಲು ಪ್ರತಿ ವರ್ಷ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ವಿದ್ಯಾರ್ಥಿಗಳಿಗೆ ಪಾಠೋಪಕರಣ ಕೊಡಿಸುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸರ್ಕಾರಿ ಉದ್ಯೋಗಗಳಿಗೆ ತೆರಳಲು‌ ಸಹಕಾರಿಯಾಗುವಂತಹ ಉತ್ತಮ ಪುಸ್ತಕಗಳು ಇರಲಿದ್ದು ಅವುಗಳನ್ನು ಓದಿ ಇತರರಿಗೆ ಮಾದರಿಯಾಗುವ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇದರ ಜತೆಗೆ ಸ್ವ- ಸಹಾಯ ಸಂಘಗಳ ಎನ್ ಆರ್ ಎಲ್ ಎಂ ಸಂಜೀವಿನಿ ಶೆಡ್ ಬಳಕೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಸ್ವ ಉದ್ಯೋಗ ಸೇರಿದಂತೆ ಜೀವನಕ್ಕೆ ಅನುಕೂಲವಾಗುವ ದಾರಿ ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ, ತಾ.ಪಂ.ಇಒ ವಿ.ಪಿ.ಕುಲದೀಪ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಶ್ರೀನಿವಾಸ್, ಉಪಾಧ್ಯಕ್ಷೆ ರುಕ್ಮಿಣಿರವಿ, ಸದಸ್ಯರಾದ ಕೆ.ಎಂ.ಜಗದೀಶ್, ಕೆ.ಮಂಜುನಾಥ್, ಪ್ರಭಾವತಿಧನರಾಜು, ಶೈಲಾನಟೇಶನಾಯಕ, ದೊಡ್ಡಸ್ವಾಮಿ, ರಮೇಶ್, ಮಂಜುಳಶ್ರೀನಿವಾಸ್, ರಾಧಮ್ಮದಾಸಾಚಾರ್, ಹೆಚ್.ವಿ.ಗೀತಾಮಹದೇವ್, ನಾಗಮಣಿಸತೀಶ್, ಕೆ.ಆರ್.ಪ್ರಕಾಶ್, ಆರ್.ಶೋಭಾನಟರಾಜು, ಕೆ.ಸಿ.ರವಿ, ಸುಶೀಲಹರೀಶ್, ಪಿಡಿಒ ಬಿ.ದಿವ್ಯಜ್ಯೋತಿ, ಕಾರ್ಯದರ್ಶಿ ಬೋರೇಗೌಡ, ಬಿಲ್ ಕಲೆಕ್ಟರ್ ಕೆ.ಎಸ್.ಅಶೋಕ್, ಗ್ರಂಥಪಾಲಕ ಸೋಮಶೇಖರ್, ಕಂಪ್ಯೂಟರ್ ಆಪರೇಟರ್ ಶ್ರುತಿ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular