Wednesday, November 26, 2025
Google search engine

Homeರಾಜ್ಯಸುದ್ದಿಜಾಲಮೃತ ಮಹಾಂತೇಶರವರ ರಾಮದುರ್ಗದ ಮನೆಯಲ್ಲಿ ನಿರವ ಮೌನ

ಮೃತ ಮಹಾಂತೇಶರವರ ರಾಮದುರ್ಗದ ಮನೆಯಲ್ಲಿ ನಿರವ ಮೌನ

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಹಾಂತೇಶ್ ಬಿಳಗಿ ಸೇರಿದಂತೆ ಮೂವರು ಮೃತಪಟ್ಟ ಘಟನೆ ಸೋಮವಾರ ಕಲಬುರಗಿ ಜಿಲ್ಲೆಯ ಜೀವರ್ಗಿಯಲ್ಲಿ ನಡೆದಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ್ ಬೀಳಗಿ ನಿವಾಸದಲ್ಲಿ ನಿರವ ಮೌನ ಆವರಿಸಿದೆ.
ಮಹಾಂತೇಶ್ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತಪಟ್ಟಿದ್ದಾರೆ. ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ  ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರು ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇನ್ನೂ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೃತಪಟ್ಟ ಹಿನ್ನೆಲೆಯಲ್ಲಿ ಹುಟ್ಟುರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ ನಲ್ಲಿರುವ ಮನೆಯಲ್ಲಿ‌ ನಿರವಮೌನ ಆವರಿಸಿದೆ.
ಮಹಾಂತೇಶ್ ನಿವಾಸದ ಎದುರು ಜಮಾವಣೆಗೊಳ್ಳುತ್ತಿರುವ ಸಂಬಂಧಿಕರು ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸುತ್ತಿದ್ದಾರೆ. ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು,‌ ಸ್ನೇಹಿತರು ಮಹಾಂತೇಶ್ ಬೀಳಗಿ ನೆನೆದು ಭಾವುಕರಾಗಿದ್ದಾರೆ.
ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಬೆಳೆದಿದ್ದ ಮಹಾಂತೇಶ್ ಡಿಗ್ರಿ ವರೆಗೂ ರಾಮದುರ್ಗ ಓದಿ ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ತಂದೆ ಮೃತಪಟ್ಟ ಬಳಿಕ ತಾಯಿ ನಾಲ್ಕು ಜನ ಮಕ್ಕಳನ್ನ ಸಾಕಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ ನಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದ ಎಂದು ಸ್ನೇಹಿತರು ಭಾವುಕರಾದರು.

RELATED ARTICLES
- Advertisment -
Google search engine

Most Popular