Thursday, November 27, 2025
Google search engine

Homeರಾಜಕೀಯಕುರ್ಚಿ ಕಾದಾಟಕ್ಕೆ ಬಿಗ್‌ ಟ್ವಿಸ್ಟ್ :‌ ಸ್ವಾಮೀಜಿಗಳ ಎಂಟ್ರಿ

ಕುರ್ಚಿ ಕಾದಾಟಕ್ಕೆ ಬಿಗ್‌ ಟ್ವಿಸ್ಟ್ :‌ ಸ್ವಾಮೀಜಿಗಳ ಎಂಟ್ರಿ

ಮಂಡ್ಯ : ಕಾಂಗ್ರೆಸ್​ನಲ್ಲಿ ಸಿಎಂ ಬದಲಾವಣೆ ವಿಚಾರದ ಭಾರೀ ಚರ್ಚೆ ನಡೆಯುತ್ತಿವೆ. ಈಗ ಈ ಹಗ್ಗ-ಜಗ್ಗಾಟಕ್ಕೆ ಜಾತಿ ಕಾರ್ಡ್ ಎಂಟ್ರಿ ಆಗಿದ್ದು, ಸೈಲೆಂಟ್​ ಆಗಿದ್ದ ಒಕ್ಕಲಿಗ ಸಮುದಾಯ ಈಗಾಗಲೇ ಸಿದ್ದರಾಮಯ್ಯ 2 ವರೆ ವರ್ಷ ಸಿಎಂ ಆಗಿದ್ದಾರೆ, ಸದ್ಯ ಡಿಕೆಶಿ ಸಿಎಂ ಆಗಬೇಕು ಎಂದು ಒಕ್ಕಲಿಗ ಸಮುದಾಯವು ಡಿಕೆಶಿ ಪರ ಜೊತೆಯಾಗಿ ನಿಂತಿದೆ.

ಈ ಬಗ್ಗೆ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಾಲನಂದನಾಥ ಸ್ವಾಮೀಜಿ ಕೂಡ ಬೇಸರ ಹೊರಹಾಕಿದ್ದು, ಪಕ್ಷಕ್ಕಾಗಿ ದುಡಿದಿರುವ ಡಿಕೆ ಶಿವಕುಮಾರ್​ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಶ್ರೀಗಳು ಹೇಳಿಕೆ ನೀಡಿದ್ದರು. ಇದರ ನಡುವೆ ಒಕ್ಕಲಿಗ ಮಠದ ಪೀಠಾಧಿಪತಿ ದೆಹಲಿಗೆ ಪ್ರಯಾಣ ಬೆಳೆ‌ಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಈ ಹಿನ್ನಲೆ ಕುರುಬ ಸಮುದಾಯದ ಸ್ವಾಮೀಜಿಗಳು ಕೂಡ ಅಲರ್ಟ್ ಆಗಿದ್ದು, ಸಿದ್ದರಾಮಯ್ಯ ಪರ ಧ್ವನಿ ಎತ್ತಲು ರೆಡಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಒಕ್ಕಲಿಗ ಮಠದ ಪೀಠಾಧಿಪತಿ ದೆಹಲಿಗೆ:

ಕಾಂಗ್ರೆಸ್​ನಲ್ಲಿ ಸಿಎಂ ಬದಲಾವಣೆ ವಿಚಾರದ ಬೆನ್ನಲ್ಲೇ, ಡಿಸಿಎಂ ಡಿಕೆಶಿ ಪರ ಲಾಬಿ ನಡೆಸಲು ಸಚಿವರು ಹಾಗೂ ಶಾಸಕರು ಹೈಕಮಾಂಡ್ ಕದ ತಟ್ಟಿದ್ದಾರೆ. ಇದರ ನಡುವೆಯೇ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಲಾನಂದನಾಥಸ್ವಾಮಿ ಅವರು ದೆಹಲಿಗೆ ತೆರಳಿದ್ದು, ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿರುವುದಾಗಿ ಮಠದ ಮೂಲಗಳ ಮಾಹಿತಿ ನೀಡಿದೆ. ಆದರೆ ಸಿಎಂ ಅಧಿಕಾರ ಹಂಚಿಕೆ ವಿಚಾರದ ಚರ್ಚೆಯ ನಡುವೆ ಶ್ರೀಗಳು ದೆಹಲಿ ಪ್ರವಾಸ ಕೈಗೊಂಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕುರುಬ ಸಮುದಾಯದ ಮಠಾಧೀಶರು ಅಲರ್ಟ್​:

ನಾಯಕತ್ವ ಬದಲಾವಣೆ ವಿಚಾರದಲ್ಲಿ ಮಠಾಧೀಶರು ಎಂಟ್ರಿ ಕೊಟ್ಟಿದ್ದು, ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯದ ಶ್ರೀಗಳ ಹೇಳಿಕೆ‌ ಬೆನ್ನಲ್ಲೇ ಇದೀಗ ಕುರುಬ ಸಮುದಾಯದ ಮಠಾಧೀಶರು ಅಲರ್ಟ್ ಆಗಿದ್ದು, ಸಿದ್ದು ಪರ ಧ್ವನಿ ಎತ್ತಲು ಕಾಗಿನೆಲೆ ಕನಕಗುರು ಪೀಠದ ಸ್ವಾಮೀಜಿ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ವೇಳೆ ಕಾಗಿನೆಲೆ ಕನಕಗುರು ಪೀಠಧ್ಯಾಕ್ಷರು ನಿರಾಂಜನಾನಂದಪುರಿ ಶ್ರೀಗಳು ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗುವ ಸಾಧ್ಯತೆ ಕೂಡ ಇದ್ದು, ಕುರುಬ ಸಮುದಾಯ ಸ್ವಾಮೀಜಿಗಳನ್ನ ಒಟ್ಟುಗೂಡಿಸಿ ಸಿಎಂ ಪರ ಧ್ವನಿ ಎತ್ತಲಿದ್ದಾರೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular