Thursday, November 27, 2025
Google search engine

Homeರಾಜಕೀಯಅಧಿಕಾರ ಹಂಚಿಕೆ, ಬಿಗ್ ಅಪ್ಡೇಟ್ ಕೊಟ್ಟ ಖರ್ಗೆ

ಅಧಿಕಾರ ಹಂಚಿಕೆ, ಬಿಗ್ ಅಪ್ಡೇಟ್ ಕೊಟ್ಟ ಖರ್ಗೆ

ಬೆಂಗಳೂರು : ನಾಯಕತ್ವ ಬದಲಾವಣೆ ಕಿಚ್ಚು ಕಾವೇರಿದ್ದು, ನಾಯಕರ ಕುರ್ಚಿ ಫೈಟ್​ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತೆ ಕಾಣುತಿದೆ. ಸಂಸದ ರಾಹುಲ್​ ಗಾಂಧಿಗೆ ರಿಪೋರ್ಟ್ ಕಾರ್ಡ್​ ನೀಡಲು ದೆಹಲಿಗೆ ತೆರಳಿದ ಮಲ್ಲಿಕಾರ್ಜುನ ಖರ್ಗೆ 2ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅಧಿಕಾರದ ಹಗ್ಗ-ಜಗ್ಗಾಟಕ್ಕೆ ನ.29 ರಂದು ಫುಲ್​ ಸ್ಟಾಪ್​​ ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅಧಿಕಾರ ಹಂಚಿಕೆ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಅಪ್ಡೇಟ್ ನೀಡಿದ ಖರ್ಗೆ ರಾಹುಲ್​ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕ ಭೇಟಿಗೆಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿಎಂ-ಡಿಸಿಎಂ ಇಬ್ಬರನ್ನ ಕರೆಸಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸೇರಿದಂತೆ ಮೂರ್ನಾಲ್ಕು ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಯೇ ಮಾತುಕತೆ ನಡೆಸುವುದಾಗಿ ಹಾಗೂ ಎಲ್ಲವನ್ನ ಸೆಟಲ್​ ಮಾಡ್ತೀವಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾನು ದೆಹಲಿ ಹೋದ ಮೇಲೆ ಮೂರ್ನಾಲ್ಕು ಜನರನ್ನು ಕರೆಸಿ ಎಲ್ಲರೂ ಒಟ್ಟಿಗೆ ಕೂತು ಚರ್ಚೆ ನಡೆಸುತ್ತೇವೆ ಮತ್ತು ಮುಂದಿನ ಎರಡು ವರ್ಷ ಯಾವ ರೀತಿ ನಡೆಯಬೇಕು ಅಂತ ತೀರ್ಮಾನ ಮಾಡುತ್ತೇವೆ. ಎಲ್ಲವನ್ನು ಸೆಟಲ್ ಮಾಡ್ತೀವಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ನಡುವೆ ಇತ್ತ ಸಿಎಂ ನಿವಾಸದಲ್ಲಿ ಮೀಟಿಂಗ್ ನಡೆದಿದ್ದು, ಕ್ಯಾಬಿನೆಟ್ ಸಭೆಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಸಚಿವರಾದ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹಾದೇವಪ್ಪ ಹಾಗೂ ಕೆ.ಎನ್ ರಾಜಣ್ಣ ಜೊತೆ ಅಹಿಂದ ನಾಯಕರು ಭೇಟಿ ನೀಡಿ ದಿಢೀರ್ ಸಭೆ ನಡೆಸಿದ್ದಾರೆ.​

RELATED ARTICLES
- Advertisment -
Google search engine

Most Popular