Thursday, November 27, 2025
Google search engine

Homeರಾಜ್ಯಸುದ್ದಿಜಾಲಪತ್ರಕರ್ತರು ಬರವಣಿಗೆಯಿಂದಲೇ ಗುರುತಿಸಿಕೊಳ್ಳಬೇಕು ಹೊರತು ಪ್ರಚಾರದಿಂದಲ್ಲ: ಜಿ.ಎಂ. ರಾಜಶೇಖರ್

ಪತ್ರಕರ್ತರು ಬರವಣಿಗೆಯಿಂದಲೇ ಗುರುತಿಸಿಕೊಳ್ಳಬೇಕು ಹೊರತು ಪ್ರಚಾರದಿಂದಲ್ಲ: ಜಿ.ಎಂ. ರಾಜಶೇಖರ್

ಎಚ್‌.ಡಿ.ಕೋಟೆ: ಬರವಣಿಗೆಯ ಮೂಲಕ ಪತ್ರಕರ್ತರು ಎಂದು ಗುರುತಿಸಿಕೊಳ್ಳಬೇಕೆ ಹೊರತು ಪ್ರಚಾರದಿಂದಲ್ಲ. ಪತ್ರಕರ್ತರು ವಿಷಯದ ಆಳಕ್ಕಿಳಿದು ನೈಜತೆಯ ಸುದ್ದಿ ಮಾಡಬೇಕು ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ತಿಳಿಸಿದರು.

ಯರಹಳ್ಳಿ-ಹ್ಯಾಂಡ್ ಪೋಸ್ಟ್ ಸಮೀಪದ ತಾರಕ ಫಂಕ್ಷನ್ ಹಾಲ್ ನಲ್ಲಿ ನಡೆದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಎಚ್‌.ಡಿ.ಕೋಟೆ ಹಾಗೂ ಸರಗೂರು ಶಾಖೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸರ್ಕಾರದಲ್ಲಿ ಭ್ರಷ್ಟಾಚರ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರ ಪಾತ್ರ ಬಹಳ ಮಹತ್ತರವಾಗಿದೆ ಎಂದರು.

ಯುವ ಪೀಳಿಗೆ ಸೇವಾ ಮನೋಭಾವದಿಂದ ಪತ್ರಿಕೋದ್ಯಮಕ್ಕೆ ಬರಬೇಕು. ಇತ್ತೀಚೆಗೆ ಎಲ್ಲ ವರ್ಗಗಳು ಕಲುಷಿತಗೊಂಡಿವೆ. ಅವುಗಳನ್ನು ಸರಿದಾರಿಗೆ ತರುವ ಜವಾಬ್ದಾರಿ‌ ಪತ್ರಕರ್ತರ ಮೇಲಿರುವುದರಿಂದ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಮಾಜ ಸೇವೆಯ ಮೂಲಕ ಪತ್ರಕರ್ತರು ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದಾರೆ. ಸುದ್ದಿ ಪ್ರಸಾರದ ಒತ್ತಡದಲ್ಲಿ ಕಟುಂಬದೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಲಾಗುತ್ತಿದೆ ಇವುಗಳನ್ನು ಸಡಿಲಗೊಳಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದರು.

ಪತ್ರಕರ್ತರು ಸೇವಾ ಮನೋಭಾವದಿಂ ಕೆಲಸ ಮಾಡುವುದರ ಜೊತೆಗೆ ಒತ್ತಡದಿಂದ ಕಾರ್ಯ ನಿಭಾಯಿಸಬೇಕಿದೆ. ತಮ್ಮ ಸೇವೆಯ ಅವಧಿಯಲ್ಲು ಅನೇಕ ಕಷ್ಟ, ಎಲ್ಲ ತೊಡಕುಗಳನ್ನು ನಿಭಾಯಿಸುಕೊಂಡು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಹಲವು ರೀತಿಯ ತೊಂದರೆಗಳಿವೆ ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸಂಘ ಕಾರ್ಯಪ್ರವೃತ್ತವಾಗಿದೆ. ರಾಜ್ಯದ 28ಜಿಲ್ಲೆಯಲ್ಲಿ ಸಂಘ ಸಕ್ರಿಯವಾಗಿದೆ ಎಂದು ಹೇಳಿದರು.

ಎಚ್.ಡಿ.ಕೋಟೆ ತಹಸಿಲ್ದಾರ್ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿನ‌ ಸರಿ, ತಪ್ಪುಗಳ ಅನಾವರಣ ಮಾಡುವ ಮಹತ್ತರ ಜವಾಬ್ದಾರಿಯನ್ನು ಪತ್ರಕರ್ತರು ಹೊಂದಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರ ಪತ್ರಿಕಾರಂಗ ರಂಗಕ್ಕೆ ಶಾಸನ ಬದ್ಧ ಅಧಿಕಾರ ನೀಡಲಾಗಿದೆ. ಜನರು ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು‌ ಜನರು ನಂಬುವುದರಿಂದ ಬಹಳ ಎಚ್ಚರಿಕೆಯಿಂದ ಪತ್ರಕರ್ತರು ಸುದ್ದಿ ಮಾಡಬೇಕು ಎಂದರು.

ನಾವು ಯಾರ ಪರವೂ ಅಲ್ಲ. ವಿರೋಧವು ಅಲ್ಲ. ಬಡವರ, ಧೀನದಲಿತರ, ನೊಂದವರ ಧ್ವನಿಯಾಗಿ ಕೆಲಸ ಮಾಡಲಿದ್ದೇವೆ. ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ದೊರಕಿಸುವ ನಿಟ್ಟಿನಲ್ಲಿ ನಮ್ಮ ಸಂಘ ಕೆಲಸ ಮಾಡಲಿದೆ. ಪತ್ರಕರ್ತರ ಸವಲತ್ತುಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

-ರಮೇಶ್ ಕೋಟೆ, ಅಧ್ಯಕ್ಷ, ಕರ್ನಾಟಕ ಮಾಧ್ಯಮ‌ ಪತ್ರಕರ್ತರ ಸಂಘ.

ಇತ್ತೀಚಿನ ದಿನಗಳಲ್ಲಿ ನ್ಯೂಸ್ ಚಾನಲ್ ಗಳು ಹೆಚ್ಚಳವಾಗುತ್ತಿವೆ. ಸುದ್ದಿ ಭಿತ್ತರಿಸುವ ಭರದಲ್ಲಿ ನೈಜತೆಯನ್ನು ಮರೆ ಮಾಚಬಾರದು. ಸರ್ಕಾರದ‌ ಯಾವುದೇ ಕಾರ್ಯಕ್ರಮಗಳು ಜನರಿಗೆ ತಲುಪಬೇಕಾದರೆ, ಅವುಗಳು ಯಶಸ್ಸು ಕಾಣಬೇಕಾದರೆ ಪತ್ರಕರ್ತರ ಪಾತ್ರ ಬಹಳ ಮಹತ್ತರವಾಗಿದೆ. ಪ್ರಸಕ್ತ ವಿದ್ಯಮಾನಗಳ ಅರಿವು ಪತ್ರಕರ್ತರಿಗೆ ಇರುತ್ತದೆ. ಸಮಸ್ಯೆಗಳ ಸುದ್ದಿ ಮಾಡುವಾಗ ಸಂಬಂಧಪಟ್ಟವರ ಮಾಹಿತಿ ಪಡೆದು ಸುದ್ದಿ ಮಾಡಬೇಕು.

ಮೋಹನ‌ಕುಮಾರಿ, ಸರಗೂರು ತಹಸಿಲ್ದಾರ್

ಸಾಮಾಜಿಕ‌ ಜವಾಬ್ದಾರಿ‌ ಮೈಗೂಡಿಸಿಕೊಂಡು ಪತ್ರಕರ್ತರು ಕೆಲಸ ಮಾಡಬೇಕು. ಸ್ಥಳೀಯವಾಗಿ ಕೆಲವು ಮಾಹಿತಿಗಳು ನಮಗೆ ಲಭ್ಯವಿಲ್ಲದಿದ್ದಾಗ, ಪತ್ರಕರ್ತರು ತಿಳಿಸುತ್ತಾರೆ. ಆ ಮೂಲಕ ನಾವು ಹಲವು ಕೆಲಸ, ಕಾರ್ಯಗಳನ್ನು ಅವರೊಟ್ಟಿಗೆ ಮಾಡಿದ್ದೇವೆ. ಎಲ್ಲ ವಿದ್ಯಮಾನಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕಾಗಿರುವುದರಿಂದ ಪತ್ರಕರ್ತರು ಸಮಯದ ನಿಗದಿಯಿಲ್ಲದೆ ದಿನದ 24 ಗಂಟೆಯೂ, ಹಬ್ಬ-ಹರಿದಿನಗಳ ಪರಿವಿಲ್ಲದೆ, ಸಂಭ್ರಮವಿಲ್ಲದೆ ಸಮಾಜಕ್ಕೆ ಮಾಹಿತಿ ನೀಡುತ್ತಿದ್ದಾರೆ.

-ಎಸ್. ಗಂಗಾಧರ್, ಆರಕ್ಷಕ ನಿರೀಕ್ಷಕ, ಹೆಚ್.ಡಿ.ಕೋಟೆ.

ರಾಜ್ಯ ಉಪಾಧ್ಯಕ್ಷ ಕೃಷ್ಣನ್, ಕಾರ್ಯದರ್ಶಿಗಳಾದ ಮಂಜುನಾಥ್ ಹಾಗೂ ವಸಂತ್ ಕುಮಾರ್, ಎಚ್‌.ಡಿ.ಕೋಟೆ- ಸರಗೂರು ಅಧ್ಯಕ್ಷ ರಮೇಶ್ ಕೋಟೆ, ಉಪಾಧ್ಯಕ್ಷ ಸೋಮೇಶ್, ಕಾರ್ಯದರ್ಶಿ ಶಿವಲಿಂಗ, ಖಜಾಂಚಿ ರಘುರಾಮ್, ನಿರ್ದೇಶಕರಾದ ಉಮೇಶ್, ಶಿವಕುಮಾರ್, ಶ್ರೀಕಂಠ ಈಶ್ವರ್, ಮುರುಳೀಧರ, ಮಹದೇವಸ್ವಾಮಿ, ಕಬಿನಿ ಗೋವಿಂದರಾಜು, ತಿಮ್ಮರಾಜು, ಲಾವಣ್ಯ, ರಮ್ಯಾ ಇದ್ದರು.

RELATED ARTICLES
- Advertisment -
Google search engine

Most Popular