Thursday, November 27, 2025
Google search engine

Homeರಾಜಕೀಯಸಿಎಂ ಯಾರಾದರೂ ಆಗಲಿ, ರಾಜ್ಯಕ್ಕೆ ಒಳ್ಳೇಯದಾಗಬೇಕು – ನಟಿ ರಮ್ಯಾ

ಸಿಎಂ ಯಾರಾದರೂ ಆಗಲಿ, ರಾಜ್ಯಕ್ಕೆ ಒಳ್ಳೇಯದಾಗಬೇಕು – ನಟಿ ರಮ್ಯಾ

ಬೆಂಗಳೂರು : ಸಿಎಂ ಯಾರೆಂದು ನಾನು ಡಿಸೈಡ್ ಮಾಡೋದಲ್ಲ ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಯಾರು ಸಿಎಂ ಆದರು ನನಗೆ ಓಕೆ. ರಾಜ್ಯಕ್ಕೆ ಒಳ್ಳೇಯದಾಗಬೇಕು ಎಂದು ಸ್ಯಾಂಡಲ್‌ವುಡ್ ಕ್ವೀನ್ , ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಕಾಂಗ್ರೆಸ್‌ನಲ್ಲಿ ಖುರ್ಚಿ ಕಿತ್ತಾಟ ವಿಚಾರವಾಗಿ ಮಾತನಾಡಿ, ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್‌ಗಳು ನಿರ್ಧಾರ ಮಾಡ್ತಾರೆ. ಯಾರಾದರೂ ಸಿಎಂ ಆಗಲಿ ರಾಜ್ಯಕ್ಕೆ ಒಳ್ಳೇಯದಾಗಬೇಕು ಅಷ್ಟೇ. ಇದರ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.

ಮುಂದುವರೆಸುತ್ತಾ ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಯಾಕೆ ಎಂದು ಪ್ರಶ್ನಿಸಿದಾಗ ಅದೇ ರಾಜಕೀಯ ಎಂದು ನಕ್ಕು, ಎಲ್ಲಾ ನಾಯಕರಿಗೂ ಅರ್ಹತೆ ಇದೆ. ಯಾರದರು ಆಗಲಿ. ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವೇಳೆ ಹೆಣ್ಣು ಬೆತ್ತಲೆಯಾಗಿದ್ದರು, ಗಂಡು ಕಣ್ಣೆತ್ತಿ ನೋಡಬಾರದು ಎಂಬ ನಟಿ ನಿಶ್ವಿಕಾ ನಾಯ್ಡು ಹೇಳಿಕೆ ವಿಚಾರವಾಗಿ ಮಾತನಾಡಿ, ನಿಶ್ವಿಕಾ ಹೇಳಿದ್ದು ಸರಿಯಿದೆ.

ಗಂಡಸರಿಗೆ ಇರುವಷ್ಟೇ ಹಕ್ಕು ನಮಗೂ ಇದೆ. ನೀವು ಇಷ್ಟ ಬಂದ ಹಾಗೇ ಬಟ್ಟೆ ಹಾಕ್ತೀರಾ. ನಾವು ಹಾಕಬಾರದಾ? ಹೆಣ್ಣು ಮಕ್ಕಳಿಗೂ ಸ್ವಾತಂತ್ರ‍್ಯ ಇದೆ. ನಿಮಗೆ ಇಷ್ಟ ಇಲ್ಲ ಅಂದ್ರೆ ಕಾಮೆಂಟ್ ಮಾಡೋಕೆ ಹೋಗಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರದ್ದೂ ಅಕೌಂಟ್ ಇದೆ. ಅಭಿಪ್ರಾಯ ಕೂಡ ಇದೆ. ಹಾಗಾಂತ ಕಾಮೆಂಟ್ ಮಾಡಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರರಂಗಕ್ಕೆ ಕಮ್ ಬ್ಯಾಕ್ ವಿಚಾರವಾಗಿ ಮಾತನಾಡಿ, 40, 50 ಸ್ಕ್ರಿಪ್ಟ್ ಕೇಳಿದ್ದೀನಿ. ಒಂದು ಸ್ಕ್ರಿಪ್ಟ್ ಇಷ್ಟ ಆಗಿದೆ. ನಿರ್ದೇಶಕರು ಸ್ಕ್ರಿಪ್ಟ್ ಬರೆಯುತ್ತಿದ್ದು, ಈಗಾಗಲೇ ಹಿಟ್ ಸಿನಿಮಾ ಮಾಡಿದ್ದಾರೆ. ನನಗೆ ಅವರೆಂದರೆ ತುಂಬಾ ಇಷ್ಟ. ಮುಂದೆ ನೋಡೋಣ. ಯಾರ ಜೊತೆ ಅಂತ ಹೇಳಲ್ಲ ಎಂದು ಇದೇ ವೇಳೆ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾಗೆ ಶುಭಕೋರಿದ್ದಾರೆ.

RELATED ARTICLES
- Advertisment -
Google search engine

Most Popular