ಉಡುಪಿ: ಲಕ್ಷ ಕಂಠ ಗೀತಾ ಪಾರಾಯಣ ಹಾಗೂ ಸ್ವರ್ಣ ಲೇಪಿತ ಕನಕನಕಿಂಡಿ ಹಾಗೂ ನವಗ್ರಹ ಮಂಟಪ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದು, ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ.
ಉಡುಪಿಯಲ್ಲಿ ನಡೆದ ರೋಡ್ ಶೋನಲ್ಲಿ ಮೋದಿಗೆ ಹೂ ಮಳೆ ಸುರಿಸಿ ಅದ್ಧೂರಿ ಸ್ವಾಗತ ಕೋರಿದ್ದು, ಉಡುಪಿ ಕೃಷ್ಣನ ಮಠಕ್ಕೆ ಆಗಮಸಿದ ಮೋದಿ ಭಕ್ತಿ ಭಾವದಿಂದ ಶ್ರೀ ಕೃಷ್ಣನಿಗೆ ನಮಿಸಿದ್ದಾರೆ. ನವಗ್ರಹ ಮಂಟಪ ಹಾಗೂ ಕನಕನ ಕಿಂಡಿ ಉದ್ಘಾಟನೆ ಮಾಡಿದ್ದಾರೆ. ನಂತರ ಕನಕನಕಿಂಡಿ ಹಾಗೂ ನವಗ್ರಹ ಮಂಟಪ ಮೂಲಕ ಶ್ಪೀಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆಯನ್ನು ಪ್ರಧಾನಿ ಸಲ್ಲಿಸಿದ್ದು, ಮೋದಿಗೆ ಮಠದ ಆಚಾರ್ಯರು ತಿಲಕವನ್ನಿಟ್ಟು, ಪೂಜಾಕೈಂಕರ್ಯ ನೆರವೇಸಲು ಸಹಕರಿಸಿದ್ದಾರೆ.
ಮೋದಿ ಆಗಮನ ನಿಮಿತ್ತ ಉಡುಪಿ ಸಂಪೂರ್ಣ ಕೇಸರಿಮಯವಾಗಿದ್ದು, ಮೋದಿ ನೋಡಿ ಉಡುಪಿಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ದೇವರ ದರ್ಶನದ ನಂತರ ನರೇಂದ್ರ ಮೋದಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿ ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿ, ಆಧ್ಯಾತಿಕತೆಯ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿಗೆ ವಿಶೇಷ ನವಿಲುಗರಿಯುಳ್ಳ ವಿಶೇಷ ಪೇಟ ತೊಡಿಸಲಾಗಿದ್ದು ಶ್ರೀಗಳು ಮೋದಿ ಕೈಗೆ ರಕ್ಷೆಯ ದಾರವನ್ನು ಕಟ್ಟಿದ್ದು ಸನ್ಮಾನಿಸಿ ಗೌರವಿಸಲಾಗಿದೆ.



